Bigg Boss Kannada Season 10: ಬಿಗ್ ಬಾಸ್ ಯಾರು? ಕೊನೆಗೂ ಉತ್ತರ ಕೊಟ್ಟೇ ಬಿಟ್ರು ಕಿಚ್ಚ ಸುದೀಪ್!
ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಮತ್ತೊಂದು ಸೀಸನ್‌ಗೆ ರೆಡಿಯಾಗುತ್ತಿದೆ. ಇನ್ನು ಕೇವಲ 5 ದಿನಗಳಲ್ಲಿ ಬಿಗ್‌ಬಾಸ್ 10ನೇ ಸೀಸನ್ ಆರಂಭ ಆಗುತ್ತಿದೆ. 10ನೇ ಸೀಸನ್ ಆಗಿರುವುದರಿಂದ ಈ ಬಾರಿಯ ಬಿಗ್ ಬಾಸ್ ಹಿಂದಿನ ಸೀಸನ್‌ಗಿಂತ ಭಿನ್ನವಾಗಿರುತ್ತೆ ಅನ್ನೋ ಸುಳಿವಂತೂ ಸಿಕ್ಕಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 10ಕ್ಕೆ ಮನೆ ಬದಲಾಗಿದೆ. ಅಲ್ಲದೆ ಕಾರ್ಯಕ್ರಮ ಸ್ವರೂಪವನ್ನು ಕೊಂಚ ಮಟ್ಟಿಗೆ ಬದಲಾವಣೆ ಮಾಡಲಾಗಿದೆ. ಈ ಕಾರಣಕ್ಕೆ ಕಿರುತೆರೆ ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಇದರೊಂದಿಗೆ ಪ್ರತಿ ಸೀಸನ್‌ನಂತೆ ಯಾರೆಲ್ಲಾ ಬಿಗ್ ಬಾಸ್ ಮನೆಯೊಳಗೆ ಹೋಗುತ್ತಾರೆ? ಅನ್ನೋ ಲೆಕ್ಕಚಾರ ಕೂಡ ಆರಂಭ ಆಗಿದೆ.

ಇಷ್ಟೆಲ್ಲ ಇದ್ದರೂ ಯಾರೆ ಸ್ಪರ್ಧಿಗಳು ಬಂದರೂ, ಕನ್ನಡಿಗರ ಮನದಲ್ಲೊಂದು ಪ್ರಶ್ನೆ ಇದ್ದೇ ಇತ್ತು. ಸ್ಪರ್ಧಿಗಳು, ಕಿಚ್ಚ ಸುದೀಪ್, ಕಲರ್ಸ್ ಕನ್ನಡ ಟೀಮ್ ಯಾರೇ ಇದ್ದರೂ ಬಿಗ್‌ಬಾಸ್ ಮುಖವನ್ನು ಮಾತ್ರ ತೋರಿಸಿಲ್ಲ. ಹೀಗಾಗಿ ಇಂದು (ಅಕ್ಟೋಬರ್ 3) ನಡೆದ ಬಿಗ್‌ಬಾಸ್ ಕನ್ನಡ ಸೀಸನ್ 10ರ ಪತ್ರಿಕಾಗೋಷ್ಟಿಯಲ್ಲಿ ಕಿಚ್ಚ ಸುದೀಪ್ ಇದಕ್ಕೆ ಉತ್ತರ ಕೊಟ್ಟಿದ್ದಾರೆ. ಅಸಲಿಗೆ ಬಿಗ್‌ಬಾಸ್ ಯಾರು? ಈ ರಿಯಾಲಿಟಿ ಶೋ ಸ್ಕ್ರಿಪ್ಟ್ ಮಾಡಿರೋದಾ? ಇದಕ್ಕೆಲ್ಲ ಕಿಚ್ಚ ಸುದೀಪ್ ಉತ್ತರ ಕೊಟ್ಟಿದ್ದಾರೆ.
100 ದಿನ ಹೇಗೆ ಫೀಡ್ ಮಾಡೋಕೆ ಸಾಧ್ಯ?
ಬಿಗ್‌ಬಾಸ್ ಶುರುವಾದಾಗಲೆಲ್ಲ ಸಾಮಾನ್ಯವಾಗಿ ಒಂದು ಪ್ರಶ್ನೆ ಎದ್ದೇಳುತ್ತೆ. ಈ ರಿಯಾಲಿಟಿ ಶೋಗಾಗಿ ಸ್ಕ್ರಿಪ್ಟ್ ಮಾಡಲಾಗಿದೆಯಾ? ಟಾಸ್ಕ್‌ಗಳು ಹೀಗೆ ನಡೆಯಬೇಕು ಅಂತ ಮೊದಲೇ ಸ್ಪರ್ಧಿಗಳಿಗೆ ತಿಳಿಸಿರುತ್ತಾರಾ? ಇಲ್ಲ ಯಾರು ಗೆಲ್ಲಬೇಕು ಅಂತ ಮೊದಲೇ ನಿರ್ಧಾರ ಆಗುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಕಿಚ್ಚ ಸುದೀಪ್ ಉದಾಹರಣ ಸಮೇತ ವಿವರಿಸಿದ್ದಾರೆ. 100 ದಿನ ಸ್ಪರ್ಧಿಗಳಿಗೆ ಫೀಡ್ ಮಾಡೋಕೆ ಸಾಧ್ಯವಿಲ್ಲ ಎಂದಿದ್ದಾರೆ.
"ಯಾರು ಗೆಲ್ಲುತ್ತಾರೆ ಅನ್ನೋದು ಗೊತ್ತಿಲ್ಲ"
"ಟಾಸ್ಕ್ ಅಂತ ಬಂದಾಗ ಅದನ್ನು ಇವರು ಪ್ಲ್ಯಾನ್ ಮಾಡುತ್ತಾರೆ. ಸ್ಕ್ರಿಪ್ಟ್ ಮಾಡಿದ್ದೇ ಆದರೆ, ಅದರಲ್ಲಿ ಯಾರು ಗೆಲ್ಲಬೇಕು ಅಂತ ನಾವು ಡಿಸೈಡ್ ಮಾಡುತ್ತೇವೆ. ಇಲ್ಲಿ ಯಾರು ಗೆಲ್ಲುತ್ತಾರೆ ಅನ್ನೋದು ನಮಗೆ ಗೊತ್ತಿಲ್ಲ. ಗೆಲ್ಲುವಾಗ ಹೇಗೆ ಹೊಡೆದಾಟಗಳಾಗುತ್ತವೆ ಅನ್ನೋದು ನಮಗೆ ಗೊತ್ತಿಲ್ಲ. ಪ್ರತಿನಿತ್ಯದ ಚಟುವಟಿಕೆಗಳಲ್ಲಿ ಯಾರು ಹೇಗೆ ಮಾತಾಡಬೇಕು ಅಂತ ನಾವು ಹೇಳಿ ಕೊಟ್ಟಿರಲ್ಲ. ಒಳಗಡೆ ಹೋಗುವಾಗ ಯಾರೋ ಏನೋ ಕಳಿಸಿಕೊಟ್ಟಿರುತ್ತಾರೆ ಅಂದುಕೊಳ್ಳೋಣ. 100 ದಿನ ನಾವು ಹೇಗೆ ಅವರಿಗೆ ಫೀಡ್ ಮಾಡೋಕೆ ಸಾಧ್ಯ?" ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
"ಐದು ದಿನದ ಎಪಿಸೋಡ್ ನೋಡಿ ನಿರ್ಧಾರ"
"ಇಲ್ಲಿ ಐದು ದಿನದ ಎಪಿಸೋಡ್‌ಗಳನ್ನು ನೋಡಿದಾಗ ಏನೇನು ಮಾತಾಡಬೇಕು. ಟಾಪಿಕ್ ಏನು? ಹಿಂದಿನ ದಿನ ನಾನು ಟೀಂ ಜೊತೆ ಕೂತು ಡಿಸೈಡ್ ಮಾಡಿದಾಗ, ಮರೆತು ಹೋಗುವ ಸಾಧ್ಯತೆ ಇರುತ್ತೆ. ಯಾವಾಗ ಹೇಳಬೇಕು. ಯಾವ ಆರ್ಡರ್‌ನಲ್ಲಿ ಕೇಳಬೇಕು. ಯಾವಾಗ ಗ್ರಾಫ್ ಜಾಸ್ತಿ ಆಗುತ್ತೆ. ಆ ಪ್ರಶ್ನೆಯನ್ನು ನಾನು ಮರೆದ ಹಾಗೆ ಲಿಫ್ಟ್ ಮಾಡಿಕೊಡಿ ಅಂತ ನಾನು ಕೇಳಬಹುದು. ನಾನು ಪ್ರಶ್ನೆ ಕೇಳಿದ ಕೂಡಲೇ ನೀವು ಹೇಳಿದ ಉತ್ತರದ ಮೇಲೆ ತಾನೇ ನಿಂತಿರುತ್ತೆ." ಎಂದು ಕಿಚ್ಚ ಸುದೀಪ್ ಬಿಗ್ ಬಾಸ್ ಬಗ್ಗೆ ಹೇಳಿದ್ದಾರೆ.
ಅಸಲಿಗೆ ಬಿಗ್‌ಬಾಸ್ ಯಾರು?
ಕಳೆದ 9 ಸೀಸನ್‌ಗಳಲ್ಲಿ ಬಿಗ್‌ಬಾಸ್ ಧ್ವನಿ ಕೇಳಿದರೆ ಸ್ಪರ್ಧಿಗಳು ಅಲರ್ಟ್ ಆಗುತ್ತಾರೆ. ಅಸಲಿಗೆ ಇದು ಯಾರು? ಸ್ಪರ್ಧಿಗಳು ಯಾಕಷ್ಟು ಬೆಚ್ಚಿಬೀಳುತ್ತಾರೆ? ಈ ಪ್ರಶ್ನೆಗೆ ಉತ್ತರ ಕಿಚ್ಚ ಸುದೀಪ್ ಉತ್ತರ ಕೊಟ್ಟಿದ್ದಾರೆ. "9 ಸೀಸನ್ ನಡೆಸಿರೋದು ಯಾರು? ಪ್ಲಸ್ ಮಿನಿ ಓಟಿಟಿ ನಡೆಸಿದವರು ಯಾರು? ನಿಮಗೆ ಕಾಣಿಸೋದು ಯಾರು? ಮತ್ತೆ ಪ್ರಶ್ನೆ ಯಾಕೆ?" ಎಂದು ಕಿಚ್ಚ ಸುದೀಪ್ ಉತ್ತರ ಕೊಟ್ಟಿದ್ದಾರೆ.


Click it and Unblock the Notifications











