»   » 'ಡ್ರಾಮಾ ಜ್ಯೂನಿಯರ್ಸ್-2' ಆಡಿಷನ್ಸ್ ಆರಂಭ: ಯಾವಾಗ, ಎಲ್ಲೆಲ್ಲಿ.?

'ಡ್ರಾಮಾ ಜ್ಯೂನಿಯರ್ಸ್-2' ಆಡಿಷನ್ಸ್ ಆರಂಭ: ಯಾವಾಗ, ಎಲ್ಲೆಲ್ಲಿ.?

Posted By:
Subscribe to Filmibeat Kannada

ಪುಟಾಣಿ ಮಕ್ಕಳನ್ನ 'ಕರ್ನಾಟಕದ ಸೂಪರ್ ಸ್ಟಾರ್ಸ್' ಮಾಡಿದ ಶೋ ಜೀ ಕನ್ನಡ ವಾಹಿನಿಯ 'ಡ್ರಾಮಾ ಜ್ಯೂನಿಯರ್ಸ್'. ಟಿ.ಆರ್.ಪಿ ರೇಟಿಂಗ್ ನಲ್ಲಿ ಇಡೀ ದಕ್ಷಿಣ ಭಾರತದಲ್ಲಿಯೇ ದಾಖಲೆ ಬರೆದಿದ್ದ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ ಎರಡನೇ ಆವೃತ್ತಿ ಸದ್ಯದಲ್ಲಿಯೇ ಶುರುವಾಗಲಿದೆ.

ಈಗಾಗಲೇ 'ಡ್ರಾಮಾ ಜ್ಯೂನಿಯರ್ಸ್-2' ಕಾರ್ಯಕ್ರಮದ ಪ್ರೀ-ಪ್ರೊಡಕ್ಷನ್ ಕೆಲಸ ಆರಂಭವಾಗಿದ್ದು, 'ಡ್ರಾಮಾ' ಮಾಡುವ ಮಕ್ಕಳಿಗಾಗಿ ಶೋಧ ಕಾರ್ಯ ಸ್ಟಾರ್ಟ್ ಆಗಿದೆ.[ಜೀ ಕನ್ನಡ ಟಿ.ಆರ್.ಪಿ ಉಡೀಸ್; ಎಲ್ಲಾ 'ಡ್ರಾಮಾ' ಮಾಡಿದ್ದಕ್ಕೆ.!]

ಆಡಿಷನ್ಸ್ ಶುರು

'ಡ್ರಾಮಾ ಜ್ಯೂನಿಯರ್ಸ್-2' ಕಾರ್ಯಕ್ರಮಕ್ಕಾಗಿ ಪ್ರತಿಭಾವಂತ ಪುಟಾಣಿ ಮಕ್ಕಳ ಹುಡುಕಾಟದಲ್ಲಿ ತೊಡಗಿರುವ ಜೀ ಕನ್ನಡ ವಾಹಿನಿ ಆಡಿಷನ್ಸ್ ಆರಂಭಿಸಿದೆ.

ನಿಮ್ಮ ಊರಿಗೆ ಬರಲಿದೆ ಜೀ ಕನ್ನಡ ತಂಡ

ಈಗಾಗಲೇ ಮಂಗಳೂರು ಹಾಗೂ ಶಿವಮೊಗ್ಗದಲ್ಲಿ 'ಡ್ರಾಮಾ ಜ್ಯೂನಿಯರ್ಸ್-2' ಆಡಿಷನ್ಸ್ ಮುಗಿದಿದೆ. ಮುಂಬರುವ ದಿನಗಳಲ್ಲಿ ನಿಮ್ಮ ನಗರಕ್ಕೂ ಜೀ ಕನ್ನಡ ವಾಹಿನಿ ಭೇಟಿ ಕೊಟ್ಟು ಆಡಿಷನ್ಸ್ ನಡೆಸಲಿದೆ. 4-13 ವರ್ಷದೊಳಗಿನ ಪುಟಾಣಿಗಳು ಆಡಿಷನ್ಸ್ ನಲ್ಲಿ ಭಾಗವಹಿಸಬಹುದು.[ನಿಮ್ಮ ಪುಟಾಣಿ ಕೂಡ 'ಡ್ರಾಮಾ ಜ್ಯೂನಿಯರ್ಸ್'ಗೆ ಹೋಗ್ಬೇಕಾ.?]

ಯಾವಾಗ, ಎಲ್ಲೆಲ್ಲಿ.?

ಮೇ 20 - ಬಿಜಾಪುರ

ಮೇ 21 - ಹುಬ್ಬಳ್ಳಿ

ಜೂನ್ 3 - ರಾಯಚೂರು

ಜೂನ್ 4 - ಚಿತ್ರದುರ್ಗ

ಜೂನ್ 10 - ಮೈಸೂರು

ಜೂನ್ 11 - ಬೆಂಗಳೂರಿನಲ್ಲಿ 'ಡ್ರಾಮಾ ಜ್ಯೂನಿಯರ್ಸ್' ಆಡಿಷನ್ಸ್ ನಡೆಯಲಿದೆ.

ಅವಕಾಶ ಮಿಸ್ ಮಾಡಬೇಡಿ

ನಿಮ್ಮ ಮಗು ಹುಟ್ಟಿರುವುದೇ 'ಡ್ರಾಮಾ' ಮಾಡೋಕೆ ಎಂದಾದರೆ, ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ. ಯಾಕಂದ್ರೆ, ನಿಮ್ಮ ಮಗು ಕೂಡ ನಾಳೆ ಕರ್ನಾಟಕದ ಸೂಪರ್ ಸ್ಟಾರ್ ಆಗಬಹುದು.!

English summary
Here is the details about Zee Kannada Channel's Popular show 'Drama Juniors-2' Auditions. Take a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada