»   » ಜೀ ಕನ್ನಡ ಟಿ.ಆರ್.ಪಿ ಉಡೀಸ್; ಎಲ್ಲಾ 'ಡ್ರಾಮಾ' ಮಾಡಿದ್ದಕ್ಕೆ.!

ಜೀ ಕನ್ನಡ ಟಿ.ಆರ್.ಪಿ ಉಡೀಸ್; ಎಲ್ಲಾ 'ಡ್ರಾಮಾ' ಮಾಡಿದ್ದಕ್ಕೆ.!

Posted By:
Subscribe to Filmibeat Kannada

ಮನರಂಜನೆ ವಿಷಯದಲ್ಲಿ ಉದಯ ವಾಹಿನಿಯನ್ನ ಹಿಂದಕ್ಕೆ ತಳ್ಳಲು ಯಾರಿಂದಲೂ ಸಾಧ್ಯವೇ ಇಲ್ಲ.! ಎನ್ನುವ ಕಾಲವೊಂದಿತ್ತು. ಆದ್ರೀಗ, ಕಾಲ ಬದಲಾಗಿದೆ. ವೀಕ್ಷಕರಿಗೆ ಬಗೆ ಬಗೆಯ ಮನರಂಜನೆ ನೀಡಲು ಹತ್ತಾರು ವಾಹಿನಿಗಳು ಹುಟ್ಟಿಕೊಂಡಿವೆ. ದಿನದಿಂದ ದಿನಕ್ಕೆ ಎಂಟರ್ಟೇನ್ಮೆಂಟ್ ದುನಿಯಾದಲ್ಲಿ ಸ್ಪರ್ಧೆ ಹೆಚ್ಚಾಗುತ್ತಿದೆ.

ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ಸುವರ್ಣ ವಾಹಿನಿ, ಕಲರ್ಸ್ ಕನ್ನಡ ವಾಹಿನಿ, ಜೀ ಕನ್ನಡ ವಾಹಿನಿ, ಉದಯ ಟಿವಿ, ಟಿ.ಆರ್.ಪಿ ಯುದ್ಧದಲ್ಲಿ ಸೆಣಸಾಡುತ್ತಿವೆ. ಆ ಯುದ್ಧದಲ್ಲಿ ಸದ್ಯ ಗೆಲುವಿನ ನಗೆ ಬೀರುತ್ತಿರುವುದು ಜೀ ಕನ್ನಡ ವಾಹಿನಿ. [ನಂಬರ್ ಒನ್ ಪಟ್ಟಕ್ಕೆ ಜಿಗಿದ ಸುವರ್ಣ ವಾಹಿನಿ]

Zee Kannada's 'Drama Juniors' tops in BARC TRP Ratings

ಹೌದು, ಪುಟಾಣಿ ಮಕ್ಕಳ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದಿಂದ 'ಜೀ ಕನ್ನಡ' ವಾಹಿನಿ ಟಿ.ಆರ್.ಪಿ ರೇಟಿಂಗ್ ನಲ್ಲಿ ಕಿಂಗ್ ಆಗಿದೆ. [ನಿಮ್ಮ ನೆಚ್ಚಿನ ಟಿವಿ ಚಾನಲ್ ಯಾವುದು?]

ಬಹು ನಿರೀಕ್ಷೆಯೊಂದಿಗೆ ಪ್ರಸಾರವಾದ 'ಡ್ರಾಮಾ ಜ್ಯೂನಿಯರ್ಸ್' ಮೊದಲ ಕಂತಿಗೆ ಕರ್ನಾಟಕ ಜನತೆಯಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. BARC ರಿಪೋರ್ಟ್ ಪ್ರಕಾರ, ಶನಿವಾರ 9 ಗಂಟೆಯಿಂದ 10.30 ಗಂಟೆಯ ಪೀಕ್ ಟೈಮ್ ನಲ್ಲಿ 'ಜೀ ಕನ್ನಡ' ವಾಹಿನಿ 7.9 ರೇಟಿಂಗ್ ದಾಖಲಿಸಿ ಉಳಿದ ಎಲ್ಲಾ ವಾಹಿನಿಗಳನ್ನ ಕೆಳಕ್ಕೆ ತಳ್ಳಿದೆ. ಅದಕ್ಕೆಲ್ಲಾ ಆ ಪ್ರತಿಭಾವಂತ ಪುಟಾಣಿಗಳಿಗೆ ಥ್ಯಾಂಕ್ಸ್ ಹೇಳಬೇಕು..!

'ಡ್ರಾಮಾ ಜ್ಯೂನಿಯರ್ಸ್' ಓಟ ಹೀಗೆ ಮುಂದುವರಿದರೆ, 'ಜೀ ಕನ್ನಡ' ನಂಬರ್ 1 ಸ್ಥಾನ ಭದ್ರಗೊಳಿಸಿಕೊಳ್ಳುವಲ್ಲಿ ಯಾವುದೇ ಅನುಮಾನ ಬೇಡ.

English summary
Popular Kannada Channel Zee Kannada has ranked No.1 in BARC TRP Ratings, Week 18, 2016. All Thanks to 'Drama Juniors' reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada