For Quick Alerts
  ALLOW NOTIFICATIONS  
  For Daily Alerts

  ನಿಮ್ಮ ಪುಟಾಣಿ ಕೂಡ 'ಡ್ರಾಮಾ ಜ್ಯೂನಿಯರ್ಸ್'ಗೆ ಹೋಗ್ಬೇಕಾ.?

  By Harshitha
  |

  'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮ ಯಾರಿಗ್ತಾನೆ ಗೊತ್ತಿಲ್ಲ ಹೇಳಿ.? ಕರ್ನಾಟಕದ ಮೂಲೆ ಮೂಲೆಯಲ್ಲೂ ಬಹು ಜನಪ್ರಿಯತೆ ಗಳಿಸಿರುವ ಜೀ ಕನ್ನಡ ವಾಹಿನಿಯ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮ ನೋಡದೆ ಇರುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ ಇರಬಹುದೇನೋ.!

  ಯಾಕಂದ್ರೆ, ಟಿ.ಆರ್.ಪಿ ರೇಟಿಂಗ್ ನಲ್ಲಿ ಜೀ ಕನ್ನಡ ವಾಹಿನಿ ಎತ್ತರಕ್ಕೆ ಜಿಗಿದಿರುವುದಕ್ಕೆ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮ ಏಕೈಕ ಕಾರಣ. [ಜೀ ಕನ್ನಡ ಟಿ.ಆರ್.ಪಿ ಉಡೀಸ್; ಎಲ್ಲಾ 'ಡ್ರಾಮಾ' ಮಾಡಿದ್ದಕ್ಕೆ.!]

  ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆ ಯಾವಾಗ ಆಗುತ್ತೋ ಅಂತ ಬಕಪಕ್ಷಿಗಳಂತೆ ಕಾದು ನೋಡುವ ವೀಕ್ಷಕರು ಲೆಕ್ಕವಿಲ್ಲದಷ್ಟು ಮಂದಿ ಇದ್ದಾರೆ. [ಇಂದು 'ಡ್ರಾಮಾ ಜ್ಯೂನಿಯರ್ಸ್'ನಲ್ಲಿ 'ಆರ್ಮುಗಂ' ರವಿಶಂಕರ್ ಆರ್ಭಟ.!]

  'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ ಪಾಪ್ಯುಲಾರಿಟಿಗೆ ಸಾಕ್ಷಿಯಾಗಿ, ಮೊದಲ ಸೀಸನ್ ಮುಗಿಯುವ ಮುನ್ನವೇ ಎರಡನೇ ಸೀಸನ್ ಅನೌನ್ಸ್ ಮಾಡಲಾಗಿದೆ.

  ಈಗ ಪ್ರಸಾರವಾಗುತ್ತಿರುವ 'ಡ್ರಾಮಾ ಜ್ಯೂನಿಯರ್ಸ್' ಮುಗಿದ ನಂತರ 'ಡ್ರಾಮಾ ಜ್ಯೂನಿಯರ್ಸ್ - 2' ಆರಂಭವಾಗಲಿದೆ.

  ನಿಮ್ಮ ಮನೆಯಲ್ಲೂ ನಾಲ್ಕು ವರ್ಷ ಮೇಲ್ಪಟ್ಟ ಪ್ರತಿಭಾವಂತ ಪುಟಾಣಿ ಇದ್ದರೆ, ನಿಮ್ಮ ಮಗು ಹುಟ್ಟಿರೋದೇ 'ಡ್ರಾಮಾ' ಮಾಡೋಕೆ ಅಂತಾದರೆ, ಈಗಲೇ ಸೂಪರ್ ಡ್ಯೂಪರ್ ಡೈಲಾಗ್ ಬಾಯಿ ಪಾಠ ಮಾಡಿಸಿ, ವಿಡಿಯೋ ಮಾಡಿ, ಜೀ ಕನ್ನಡ ವಾಹಿನಿಗೆ ಕಳುಹಿಸಿ ಕೊಡಿ.

  ನಿಮ್ಮ ಮುದ್ದು ಕಂದನ ಪ್ರತಿಭೆ 'ಭೇಷ್' ಎನ್ನುವ ಹಾಗಿದ್ದರೆ, 'ಡ್ರಾಮಾ ಜ್ಯೂನಿಯರ್ಸ್ - 2' ವೇದಿಕೆ ನಿಮ್ಮ ಮಗುಗೆ ಫಿಕ್ಸ್.!

  English summary
  Popular Kannada Channel Zee Kannada has announced 2nd season audition of 'Drama Juniors' reality show before it's first season conclusion.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X