ಭಾರತೀಯ ಸಂಸ್ಕೃತಿಯ ಮೌಲ್ಯ ಸಾರುವ ವಾಹಿನಿ ಫೆ19 ರಿಂದ ಆರಂಭ

ಕರ್ನಾಟಕದಲ್ಲಿ ಆರಂಭವಾಗುತ್ತಿರುವ ಮೊಟ್ಟಮೊದಲ ಕನ್ನಡದ ಇನ್ಫೋಟೈನ್‍ಮೆಂಟ್ ಚಾನೆಲ್ 'ಸರಳ ಜೀವನ' ಫೆಬ್ರವರಿ 19 ರಂದು ಲೋಕಾರ್ಪಣೆಗೊಳ್ಳಲಿದೆ.

ಸರಳ ಜೀವನ ವಾಹಿನಿಯು ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಮೌಲ್ಯಗಳನ್ನು ಸಾರುವ ಮತ್ತು ಪುರಾಣ ಹಾಗೂ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.

ವಾಹಿನಿಯು ಜಗತ್ತಿಗೆ ಭಾರತೀಯರ ಮಹಾನ್ ಕೊಡುಗೆಗಳಾದ ಆಯುರ್ವೇದ, ಯೋಗ, ವಾಸ್ತು ಮೊದಲಾದವುಗಳ ವೈಜ್ಞಾನಿಕ ಹಿನ್ನೆಲೆ ಮತ್ತು ಮಹತ್ವವನ್ನು ಕಾರ್ಯಕ್ರಮಗಳ ಮೂಲಕ ಪ್ರಸ್ತುತ ಪಡಿಸಲಿದೆ. ಇಂದಿನ ಪೀಳಿಗೆಗೆ ಹಿಂದಿನ ಕಾಲದ ಮಾಹಿತಿಯನ್ನು ಮನೋರಂಜನೆಯ ಮೂಲಕ ವಾಹಿನಿ ನೀಡಲಿದೆ.

First Infotainment channel in Kannada Sarala Jeevana from feb 19

ಸ್ಪೂರ್ತಿದಾಯಕ, ಪ್ರೇರಕ ಹಾಗೂ ಐತಿಹಾಸಿಕ ಮಾಹಿತಿಗಳನ್ನೊಳಗೊಂಡ, ಸಕಾರಾತ್ಮಕ ಭಾವನೆಗಳನ್ನು ಉಂಟುಮಾಡುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು ಸರಳ ಜೀವನ ವಾಹಿನಿಯ ಉದ್ದೇಶವಾಗಿದೆ.

ಮನುಕುಲದ ಒಳಿತಿಗಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭವಾಗುತ್ತಿರುವ ಸರಳ ಜೀವನ ವಾಹಿನಿ ನಾಡಿನ ಎಲ್ಲಾ ವರ್ಗಗಳ ಜನರಲ್ಲೂ ಸಕಾರಾತ್ಮಕ ಚಿಂತನೆಗಳನ್ನು ಮೂಡಿಸುವ ಉದ್ದೇಶವನ್ನು ಹೊಂದಿದೆ ಎಂದು ಸಿ.ಜಿ.ಪರಿವಾರ ಗ್ಲೋಬಲ್ ವಿಜನ್‍ನ ಮುಖ್ಯಸ್ಥರು, ಸರಳ ಜೀವನದ ಸಂಸ್ಥಾಪಕರಾದ ಡಾ. ಚಂದ್ರಶೇಖರ್ ಗುರೂಜಿ ಹೇಳಿದ್ದಾರೆ.

First Infotainment channel in Kannada Sarala Jeevana from feb 19

ನಾಡಿನ ಭವ್ಯ ಪರಂಪರೆ, ಸಂಪ್ರದಾಯ ಮತ್ತು ಪುರಾತನ ವಿಜ್ಞಾನಗಳನ್ನ ಆಧುನಿಕ ರೀತಿಯಲ್ಲಿ, ವೀಕ್ಷಕರ ಮುಂದಿಡುವ ಪ್ರಯತ್ನವನ್ನು 'ಸರಳ ಜೀವನ' ವಾಹಿನಿ ಮಾಡಲಿದೆ. ಕನ್ನಡಿಗರಿಗೆ ಮಾಹಿತಿಗಳನ್ನು ಮನರಂಜನೆಯ ರೂಪದಲ್ಲಿ ನೀಡುವ ಮೂಲಕ ಅವರ ಆಶೋತ್ತರಗಳನ್ನು ಈಡೇರಿಸುವ ವಿಶೇಷ ಪ್ರಯತ್ನ ಇದಾಗಿದೆ.

ಈ ಮೂಲಕ ಕನ್ನಡ ಕಿರುತೆರೆಯ ವೀಕ್ಷಕರಿಗೆ ಮಾಹಿತಿ ಮತ್ತು ರಂಜನೆ ಎರಡರ ರಸದೌತಣ ನೀಡಲಿದ್ದೇವೆ. ಸಂಶೋಧಕರು, ವಿಷಯ ತಜ್ಞರು, ಗ್ರಾಫಿಕ್ಸ್ ಕಲಾವಿದರು ಹೀಗೆ ಸಾಕಷ್ಟು ಜನರ ಪರಿಶ್ರಮ ಮತ್ತು ಸಮಯವನ್ನು ಈ ಕೆಲಸಕ್ಕಾಗಿ ಮೀಸಲಿಟ್ಟಿದ್ದಾರೆಂದು ಸರಳ ಜೀವನ ವಾಹಿನಿಯ ಸಂಪಾದಕ ಎಮ್ ಎಸ್ ರಾಘವೇಂದ್ರ ಅವರು ಹೇಳಿದ್ದಾರೆ.

ಇನ್ಪೋಟೈನ್‍ಮೆಂಟ್ ಎಂಬುದು ಒಂದು ವಿಶಿಷ್ಟ ಪ್ರಯೋಗವಾಗಿದೆ. ಟೆಲಿವಿಷನ್ ವಲಯದಲ್ಲಿ ಈಗಾಗಲೇ ಇರುವವರ ಜೊತೆ ಮತ್ತೊಬ್ಬ ಆಟಗಾರ ಎನಿಸಿಕೊಳ್ಳುವುದು ನಮಗೆ ಬೇಕಿಲ್ಲ. ನಮ್ಮ ಕಾರ್ಯಕ್ರಮಗಳ ವಿನ್ಯಾಸದ ಬಗ್ಗೆ ನಮಗೆ ಸಂತಸವಿದೆ.

ಸರಳ ಜೀವನ ವಾಹಿನಿಯು ಮನರಂಜನಾ ಕ್ಷೇತ್ರದಲ್ಲಿ ಇರುವ ಅಂತರವನ್ನು ತುಂಬಲಿದೆ. ಎಲ್ಲ ವಯೋಮಾನದವದರೂ ಒಟ್ಟಿಗೆ ಕುಳಿತು ನೋಡಬಹುದಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದೇ ನಮ್ಮ ಉದ್ದೇಶವಾಗಿದೆ ಎಂದು ವಾಹಿನಿಯ ಬಿಜಿನೆಸ್ ಹೆಡ್ ರಘುನಾಥ್ ರೆಡ್ಡಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ವಾಹಿನಿಯ ಪ್ರಮುಖ ಕಾರ್ಯಕ್ರಮಗಳು, ಮುಂದಿನ ಪುಟದಲ್ಲಿ

More from Filmibeat

English summary
First Infotainment channel in Kannada Sarala Jeevana starting from feb 19.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X