ವೈಭವಿ ಉಪಾಧ್ಯಾಯ ಸಾವು: ಭೀಕರ ಕಾರು ಅಪಘಾತದಲ್ಲಿ ಹಿಂದಿ ಕಿರುತೆರೆ ನಟಿ ವೈಭವಿಯ ದುರ್ಮರಣ
ವೈಭವಿ ಉಪಾಧ್ಯಾಯ: ಹಿಂದಿ ಕಿರುತೆರೆಯ ಜನಪ್ರಿಯರ ನಟಿ ವೈಭವಿ ಉಪಾಧ್ಯಾಯ. ಕಿರುತೆರೆ ಅಷ್ಟೇ ಅಲ್ಲದೆ, ಸಿನಿಮಾಗಳಲ್ಲೂ ಇತ್ತೀಚೆಗೆ ನಟಿಸಿದ್ದರು. ಇದೇ ನಟಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಸುದ್ದಿ ಹೊರಬಿದ್ದ ಬಳಿಕ ಆಕೆಯ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಹಿಂದಿಯ ಕಿರುತೆರೆಯಲ್ಲಿ ಜನಪ್ರಿಯ ಶೋ 'ಸಾರಾಭಾಯಿ Vs ಸಾರಾಭಾಯಿ'ನಲ್ಲಿ ಜಾಸ್ಮೀನ್ ಪಾತ್ರದಲ್ಲಿ ನಟಿಸಿದ್ದರು. ಹೀಗಾಗಿ ಕಿರುತೆರೆ ವೀಕ್ಷಕರು ಈಕೆಯನ್ನು ಜಾಸ್ಮಿನ್ ಎಂದೇ ಗುರುತಿಸುತ್ತಿದ್ದರು. ನಿನ್ನೆ (ಮೇ 23) ತನ್ನ ಬಾವಿ ಪತಿಯೊಂದಿಗೆ ಪ್ರಯಾಣಿಸುತ್ತಿರುವಾಗ ಕಾರು ಅಪಘಾತ ಸಂಭವಿಸಿದೆ.

ಹಿಮಾಚಲ ಪ್ರದೇಶದಲ್ಲಿ ತನ್ನ ಭಾವಿ ಪತಿಯೊಂದಿಗೆ ಕಾರಿನಲ್ಲಿ ಪ್ರಯಾಣ ಮಾಡುವಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕಣಿವೆಗೆ ಬಿದ್ದಿದ್ದು, ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ವಿಷಯವನ್ನು 'ಸಾರಾಭಾಯಿ Vs ಸಾರಾಭಾಯಿ' ನಿರ್ಮಾಪಕ ಜೆಡಿ ಮಜೆಥಿಯಾ ಖಚಿತ ಪಡಿಸಿದ್ದಾರೆ.
32 ವೈಭವಿ ಉಪಾಧ್ಯಾಯ ವರ್ಷದ ನಟಿಯ ಕುಟುಂಬ ಚಂಡೀಗಡದಲ್ಲಿ ನೆಲೆಸಿದ್ದಾರೆ. ವೈಭವಿ ಮೃತದೇಹವನ್ನು ಮುಂಬೈಗೆ ತರಲಾಗಿದ್ದು, ಇಂದು (ಮೇ 24) 11 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ.
ವೈಭವಿ ಉಪಾಧ್ಯಾಯ ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ಆರಂಭಿಸಿದ್ದರು. ದೀಪಿಕಾ ಪಡುಕೋಣೆ ನಟನೆಯ 'ಛಪಾಕ್' ಸಿನಿಮಾ ನಟಿಸಿದ್ದರು. ಇದೇ ವರ್ಷ 'ತಿಮಿರ್' ಅನ್ನೋ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಉದಯೋನ್ಮುಖ ನಟಿಯ ದಿಢೀರ್ ಸಾವಿನ ಸುದ್ದಿ ಕೇಳಿ ಕಿರುತೆರೆ ಹಾಗೂ ಚಿತ್ರರಂಗ ಮರುಗಿದೆ.

" ಶಾಕಿಂಗ್.. ಅದ್ಭುತ ನಟಿ ಹಾಗೂ ಸ್ನೇಹಿತೆ ವೈಭವಿ ಉಪಾಧ್ಯಾಯ, 'ಸಾರಾಭಾಯಿ Vs ಸಾರಾಭಾಯಿ'ಯ ಜಸ್ಮೀನ್ ಅಂತಲೇ ಜನಪ್ರಿಯರಾಗಿರುವ ನಟಿ ಸಾವನ್ನಪ್ಪಿದ್ದಾರೆ. ಕೆಲವು ಗಂಟೆಗಳ ಹಿಂದಷ್ಟೇ ಕಾರು ಅಪಘಾತವಾಗಿದೆ. ವೈಭವಿ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ನಟ, ನಿರ್ದೇಶಕ ದೆವೆನ್ ಭೊಜನಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ವೈಭವಿ ಉಪಾಧ್ಯಾಯ ನಟಿಸಿದ್ದ 'ಸಾರಾಭಾಯಿ Vs ಸಾರಾಭಾಯಿ' ಯಲ್ಲಿ ಮೊನಿಕಾ ಪಾತ್ರದಲ್ಲಿ ನಟಿಸಿದ್ದ ರೂಪಾ ಗಂಗೂಲಿ ನಟ,ನಿರ್ದೇಶಕ ದೆವೆನ್ ಭೊಜನಿ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. " ಇದು ಘೋರ ಅನ್ಯಾಯ.. ನಂಬೋಕೆ ಆಗುತ್ತಿಲ್ಲ" ಎಂದು ನಟಿ ರೂಪಾ ಗಂಗೂಲಿ ಟ್ವೀಟ್ ಮಾಡಿದ್ದಾರೆ.
ವೈಭವಿ ಉಪಾಧ್ಯಾಯ 'ಪ್ಲೀಸ್ ಫೈಂಡ್ ಅಟಾಚ್ಡ್' ಅನ್ನೋ ವೆಬ್ ಸೀರಿಸ್‌ನಲ್ಲಿ ನಟಿಸಿದ್ದರು. ಹಾಗೇ 'ಕ್ಯಾ ಕಸೂರ್ ಹೇ ಅಮ್ಲಾ ಕಾ' ಟಿ ಶೋನಲ್ಲಿ ಪ್ರಮುಖ ಭಾಗವಾಗಿದ್ದರು. 2019ರಲ್ಲಿ ಟ್ರಿಪ್ ಹೋಗಿದ್ದ ಫೋಟೊವನ್ನು ಕೊನೆಯದಾಗಿ ತನ್ನ ಇನ್‌ಸ್ಟಾಗ್ರಾಂನಲ್ಲಿ ವೈಭವಿ ಉಪಾಧ್ಯಾಯ ಪೋಸ್ಟ್ ಮಾಡಿದ್ದರು.


Click it and Unblock the Notifications











