ವಿಚ್ಚೇದನ ಬಳಿಕ 2ನೇ ಮದುವೆಗೆ ವೇದಿಕೆಯಾಗಿದ್ದು ಡೇಟಿಂಗ್ ಆಪ್: ಇದು 'ಲಕ್ಷ್ಮಿ ನಿವಾಸ' ಮಾನಸ ಮನೋಹರ್ ಮ್ಯಾರೇಜ್ ಸ್ಟೋರಿ!
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಮಾನಸ ಮನೋಹರ್. 'ಜೊತೆ ಜೊತೆಯಲಿ', 'ಲಕ್ಷ್ಮಿ ನಿವಾಸ'ದಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿರುವ ಮಾನಸ ಮನೋಹರ್ ಕೆಲವು ತಿಂಗಳ ಹಿಂದಷ್ಟೇ ಎರಡನೇ ಮದುವೆ ಆಗಿದ್ದರು. ಫುಟ್‌ಬಾಲ್ ಪ್ಲೇಯರ್ ಪ್ರೀತಂ ಚಂದ್ರ ಅವರನ್ನು ವಿವಾಹವಾಗಿದ್ದಾರೆ. ಇಬ್ಬರಿಗೂ ಇದು ಎರಡನೇ ಮದುವೆ ಆಗಿತ್ತು. ಮೊದಲ ಮದುವೆಯ ಕಹಿ ಅನುಭವದ ಬಳಿಕ ಎರಡನೇ ಮದುವೆಗೆ ವೇದಿಕೆಯಾಗಿದ್ದು ಒಂದು ಡೇಟಿಂಗ್ ಆಪ್.
ಮಾನಸ ಮನೋಹರ್ ಸದ್ಯಕ್ಕೀಗ 'ಲಕ್ಷ್ಮಿ ನಿವಾಸ' ಹಾಗೂ 'ಶಾಂಭವಿ' ಎರಡು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಕಿರುತೆರೆಯಲ್ಲಿ ಬ್ಯುಸಿಯಾಗಿರುವ ನಟಿ ಫ್ಯಾಮಿಲಿ ಲೈಫ್‌ಗೂ ಅಷ್ಟೇ ಸಮಯವನ್ನು ಮೀಸಲಿಡುತ್ತಿದ್ದಾರೆ. ಹೊಸದಾಗಿ ಮತ್ತೊಮ್ಮೆ ಪ್ರೀತಂ ಚಂದ್ರ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಮಾನಸ ಮನೋಹರ್ ಖುಷಿಯಾಗಿದ್ದಾರೆ. ವೈಯಕ್ತಿ ಹಾಗೂ ವೃತ್ತಿ ಬದುಕು ಎರಡರಲ್ಲೂ ಬ್ಯುಸಿಯಾಗಿದ್ದಾರೆ.

ಇದೇ ವೇಳೆ ಮಾನಸ ಮನೋಹರ್ ಹಾಗೂ ಪ್ರೀತಂ ಚಂದ್ರ ಇಬ್ಬರೂ ಫಸ್ಟ್ ಡೇ ಫಸ್ಟ್ ಶೋಗೆ ಸಂದರ್ಶನ ನೀಡಿದ್ದು, ಅದರಲ್ಲಿ ತಮ್ಮ ಮೊದಲ ಮದುವೆಯ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹಾಗೇ ಅವರ ಎರಡನೇ ಮದುವೆಗೆ ಡೇಟಿಂಗ್ ಆಪ್ ಹೇಗೆ ಸಹಾಯ ಮಾಡಿತು ಅನ್ನೋದನ್ನು ರಿವೀಲ್ ಮಾಡಿದ್ದಾರೆ.
ಮಾನಸ ಮನೋಹರ್ ಕಿರುತೆರೆಯಲ್ಲಿ ಬ್ಯುಸಿಯಾಗಿರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅವರ ತಂದೆ ತಾಯಿಯೇ ನೋಡಿ ಮಾಡಿದ ಮದುವೆ ಆಗಿತ್ತು. ಆದರೆ, ಅದು ಸರಿಯಾಗಿ ಕೂಡಿ ಬರಲಿಲ್ಲ. ಹಾಗೂ ಐದು ವರ್ಷ ಸಂಸಾರ ನಡೆಸಿದ ಬಳಿಕ ಇಬ್ಬರ ಮನಸ್ಥಿತಿಯೂ ಬೇರೆನೇ ಇದೆ ಎಂದು ಅನಿಸುವುದಕ್ಕೆ ಶುರುವಾಗಿತ್ತು. ಹೀಗಾಗಿ ಮಾನಸ ಮನೋಹರ್ ವಿಚ್ಚೇದನಕ್ಕೆ ಮುಂದಾಗಿದ್ದರು. ಡಿವೋರ್ಸ್ ಪ್ರಕ್ರಿಯೆ ನಡೆಯುತ್ತಿರುವಾಗಲೇ ಅವರ ಲೈಫ್‌ನಲ್ಲಿ ಪ್ರೀತಿಂ ಚಂದ್ರ ಎಂಟ್ರಿ ಕೊಟ್ಟಿದ್ದರು. ಅದು ಒಂದು ಡೇಟಿಂಗ್ ಆಪ್ ಮೂಲಕ ಅನ್ನೋದು ಇಂಟ್ರೆಸ್ಟಿಂಗ್ ಸ್ಟೋರಿ.
'ಬೆಂಗಳೂರಿಗೆ ಆತ್ಮವಿಲ್ಲ' ಎಂದು ಕನ್ನಡಿಗರನ್ನು ಕೆರಳಿಸಿದ್ದ ಚೆಲುವೆಗೆ ಸಿಕ್ತು ಈ ಬಾರಿಯ ಬಿಗ್ ಬಾಸ್ ನಲ್ಲಿ ಅವಕಾಶ ?
"ನಾವು ಸಂಗಾತಿಯನ್ನು ಹುಡುಕುವುದಕ್ಕೆ ಆರಂಭ ಮಾಡಿದ್ದಾಗ ನಮಗೆ ಎಂತಹವರು ಬೇಕು ಅನ್ನೋದು ಗೊತ್ತಿತ್ತು. ಆಗ ಅವರೂ ಬ್ಯುಸಿ ಇರುತ್ತಾರೆ. ನಾನು ಬ್ಯುಸಿ ಇರುತ್ತೇನೆ. ಆಗ ಯಾರನ್ನಾದರೂ ಮೀಟ್ ಮಾಡುವುದೆಲ್ಲವೂ ಕಷ್ಟ ಆಗುತ್ತೆ. ಹೀಗಾಗಿ ನಾನು ಒಂದು ಡೇಟಿಂಗ್ ಆಪ್‌ನಲ್ಲಿ ಇದ್ದೆ. ನಾನು ಒಂದಿಷ್ಟು ತಿಂಗಳು ಇದ್ದೆ. ಆದರೆ, ಯಾರೂ ಸಿಗುತ್ತಿರಲಿಲ್ಲ. ಅದರಿಂದ ಇನ್ನೇನು ಹೊರ ಬರಬೇಕು ಅನ್ನುವಾಗಲೇ ಇವರಿಗೆ ಯಾರೋ ಹೇಳಿದ್ದರಂತೆ. ಅವರು ಆ ಡೇಟಿಂಗ್ ಆಪ್ ಅನ್ನು ಬಳಕೆ ಮಾಡುವುದಕ್ಕೆ ಶುರು ಮಾಡಿದ್ದರು. ನನಗೆ ಅದು ಲಾಸ್ಟ್ ಡೇ ಆಗಿತ್ತು. ಅವರಿಗೆ ಅದು ಮೊದಲ ದಿನವಾಗಿತ್ತು. ಆಗ ಇವರು ಸಿಕ್ಕಿದರು. ಅಲ್ಲಿ ನಟಿ ಅಂತ ಹಾಕಿಕೊಂಡಿದ್ದರು. ಇದು ಫೇಕ್ ಪ್ರೊಫೈಲ್. ಯಾರೂ ಅಷ್ಟು ನೇರವಾಗಿ ಹಾಕಿಕೊಳ್ಳುವುದಿಲ್ಲ ಅಂದ್ಕೊಂರೆ. ಅವರು ಮ್ಯಾನಿಫೆಸ್ಟೋ ಅಂತ ಒಂದು ಟ್ಯಾಟೋ ಹಾಕೊಂಡಿದ್ದರು. ಅದನ್ನು ನೋಡಿ ಮೆಸೇಜ್ ಕಳಿಸಿದ್ದೆ. ಆಗ ಅವರು ತಮ್ಮ ಲೈಫ್ ಬಗ್ಗೆ ಉದ್ದುದ್ದ ಮೆಸೇಜ್ ಮಾಡಿದ್ದರು. ಅಲ್ಲಿಂದ ನಾವು ಮಾತಾಡುವುದಕ್ಕೆ ಶುರು ಮಾಡಿದ್ದೆವು." ಎಂದು ಮಾನಸ ಮನೋಹರ್ ಪತಿ ಪ್ರೀತಿಂ ಚಂದ್ರ ಮೊದಲ ಭೇಟಿಯನ್ನು ರಿವೀಲ್ ಮಾಡಿದ್ದಾರೆ.

ಇತ್ತ ಮಾನಸ ಮನೋಹರ್ ಕೂಡ ಡೇಟಿಂಗ್ ಆಪ್ ಬಗ್ಗೆ ನಂಬಿಕೆ ಇರಲಿಲ್ಲ. ಅವರ ಆತ್ಮೀಯರೊಬ್ಬರು ಇದೇ ಆಪ್ ಅನ್ನು ಸಲಹೆ ಮಾಡಿದ್ದಕ್ಕೆ ಅದರೊಳಗೆ ಎಂಟ್ರಿ ಕೊಟ್ಟಿದ್ದರು. ಹೀಗೆ ಡೇಟಿಂಗ್ ಆಪ್ ಮೊರೆ ಹೋಗುವುದಕ್ಕೂ ಇಂಡಸ್ಟ್ರಿಯವರೇ ಕೊಂಕು ಮಾತಾಡಿದ್ದೂ ಕಾರಣವಾಗಿತ್ತು. "ನಾನು ಡೇಟಿಂಗ್ ಆಪ್ ಸುದ್ದಿಗೆ ಹೋಗಿರಲಿಲ್ಲ. ಆ ಸಮಯದಲ್ಲಿ ನಾನು ಸಪರೇಟ್ ಆಗಿದ್ದೆ. ನನಗೆ ಇನ್ನೂ ಡಿವೋರ್ಸ್ ಕೂಡ ಸಿಕ್ಕಿರಲಿಲ್ಲ. ಅದು ಪ್ರಕ್ರಿಯೆಯಲ್ಲಿ ಇತ್ತು. ಹೀಗೆ ಯಾವುದೋ ಕಾರ್ಯಕ್ರಮಕ್ಕೆ ಹೋದಾಗ ನಮ್ಮ ಇಂಡಸ್ಟ್ರಿಯಲ್ಲಿ ಸುಮ್ಮನೆ ಯಾರಾದರೂ ಇರುತ್ತಾರಲ್ಲ ಅವರು ನೀನು ಈಗ ಬೇರೆಯಾಗಿದ್ದೀಯಲ್ಲ. ಲೈಫ್ ಪೂರ್ತಿ ನೀನು ಹೀಗೆ ಇರುತ್ತೀಯಾ? ನಿನ್ನ ಭಾವನೆಗಳನ್ನು ಹಂಚಿಕೊಳ್ಳುವುದಕ್ಕಾದರೂ ಯಾರಾದರೂ ಬೇಕಲ್ಲ. ನೋಡು ಈ ರೀತಿ ಒಂದು ಆಪ್ ಇದೆ. ನೀನು ಯಾಕೆ ಟ್ರೈ ಮಾಡಬಾರದು ಅಂತ ಕೊಂಕು ರೀತಿಯಲ್ಲಿ ಹೇಳಿದರು." ಎಂದು ಮಾನಸ ಮನೋಹರ್ ಹೇಳಿಕೊಂಡಿದ್ದಾರೆ.
ಇದೇ ಸಂದರ್ಶನದಲ್ಲಿ ತಮ್ಮ ಮೊದಲ ಮದುವೆ ಯಾಕೆ ಮುರಿದು ಬಿತ್ತು? ಇಬ್ಬರ ನಡುವೆ ಅದೆಂಥಾ ಸಮಸ್ಯೆ ಎದುರಾಯ್ತು? ಅನ್ನೋದನ್ನು ಬಿಡಿಸಿ ಹೇಳಿದ್ದಾರೆ. "ಇಬ್ಬರದ್ದು ಕಾಂಟ್ರಿಬ್ಯೂಷನ್ ಇದ್ದರೆ ಮಾತ್ರ ರಿಲೇಷನ್‌ಶಿಪ್ ಸಕ್ಸಸ್‌ಫುಲ್ ಆಗೋದು. ಹೀಗಾಗಿ ಅವರು ನನಗೆ ಹಾಗೆ ತೊಂದರೆ ಕೊಟ್ಟರು. ಹೀಗೆ ತೊಂದರೆ ಕೊಟ್ಟರು ಅಂತ ಹೇಳಿಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ. ತೊಂದರೆ ಆಗಿದ್ದಂತು ನಿಜ. ಇಲ್ಲ ಅಂತಲ್ಲ. ನಾನು ಏನು ಹೇಳುವುದಕ್ಕೆ ಇಷ್ಟ ಪಡುತ್ತೇನೆ ಅಂದರೆ, ನಾವು ಇಬ್ಬರು ವಿಭಿನ್ನ ವ್ಯಕ್ತಿತ್ವದವರಾಗಿದ್ವಿ. ನನಗೆ ಅವರು ಆಗಿರಲಿ.. ಅವರಿಗೆ ನಾನು ಆಗಿರಲಿ ಆಗಿ ಬರುತ್ತಿರಲಿಲ್ಲ. ಒಂದು ಎಡ.. ಒಂದು ಬಲ ಅನ್ನೋತರ ಇತ್ತು. ಐದು ವರ್ಷ ಆದ್ಮೇಲೆ ಡಿವೋರ್ಸ್ ತಗೊಂಡಿದ್ದು. ಅದೂ ನಮ್ಮ ತಂದೆ ತಾಯಿ ಹೇಳಿದ ಮೇಲೆ ಡಿವೋರ್ಸ್ ಆಗಿದ್ದು." ಎಂದು ಮೊದಲ ಮದುವೆ ಬಗ್ಗೆ ಮಾತಾಡಿದ್ದಾರೆ.
ಇನ್ನು ಮಾನಸ ಮನೋಹರ್ ಧಾರಾವಾಹಿಗಳ ಕಡೆಗೆ ಬರೋದಾರೆ, 'ಜೊತೆ ಜೊತೆಯಲಿ' ಧಾರಾವಾಹಿ ಇವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಮೀರಾ ಪಾತ್ರದಲ್ಲಿ ಮಾನಸ ಮನೋಹರ್ ಗಮನ ಸೆಳೆದಿದ್ದರು. ಆ ಧಾರಾವಾಹಿ ಮುಗಿಯುತ್ತಿದ್ದಂತೆ ಈ ನಟಿ ಮತ್ತೆ ಜೀ ಕನ್ನಡದಲ್ಲಿಯೇ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಗಿ 'ಲಕ್ಷ್ಮಿ ನಿವಾಸ'ದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಿರುತೆರೆಯ ಜನಪ್ರಿಯ ನಟಿಯಾಗಿರುವ ಇವರು ಸದ್ಯ ಬ್ಯುಸಿ ನಟಿ.
'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್‌ನಲ್ಲಿ ನಟಿಸುತ್ತಿದ್ದಾರೆ. ಸಿದ್ದೇಗೌಡ ಅತ್ತಿಗೆಯ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಧಾರಾವಾಹಿಯಲ್ಲಿ ಬರುವ ಭಾವನಾತ್ಮಕ ಸನ್ನಿವೇಶಗಳಿಗೆ ಇವರ ಪಾತ್ರ ಕೊಂಡಿಯಾಗಿ ನಿಂತಿದೆ. ಹಾಗಂತ ಇದೊಂದೇ ಅಲ್ಲ. ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ 'ಶಾಂಭವಿ' ಧಾರಾವಾಹಿಯಲ್ಲಿಯೂ ಮಾನಸ ಮನೋಹರ್ ನಟಿಸಿದ್ದಾರೆ. ನಟನೆಯ ಜೊತೆ ಜೊತೆಗೆ ವೈವಾಹಿಕ ಜೀವನವನ್ನೂ ಎಂಜಾಯ್ ಮಾಡುತ್ತಿದ್ದಾರೆ.
ಮಾನಸ ಮನೋಹರ್ ಈ ಹಿಂದೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಜೊತೆ ಜೊತೆಯಲಿ' ಧಾರಾವಾಹಿಗೂ ಮುನ್ನ 'ಅಶ್ವಿನಿ ನಕ್ಷತ್ರ', 'ಶುಭ ವಿವಾಹ' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಶುಭ ವಿವಾಹದ ಊರ್ಮಿಳಾ ಪಾತ್ರ ವೀಕ್ಷಕರ ಅಚ್ಚು ಮೆಚ್ಚಿನ ಧಾರಾವಾಹಿ. ಮಾನಸಾ ಮನೋಹರ್ ಕನ್ನಡ ಜೊತೆಗೆ ತೆಲುಗು ಧಾರಾವಾಹಿಗಳಲ್ಲೂ ನಟಿಸಿ ಮೆಚ್ಚುಗೆ ಗಳಿಸಿದ್ದಾರೆ. ಅಲ್ಲಿಯೂ ಇವರಿಗೆ ಅಪಾರ ಅಭಿಮಾನಿಗಳು ಇದ್ದಾರೆ.
ಕಳೆದ ವರ್ಷ ಎರಡನೇ ಬಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನಟಿಯೀಗ ಖುಷಿಯಲ್ಲಿದ್ದಾರೆ. ಪತಿ ಪ್ರೀತಂ ಚಂದ್ರ ಕೂಡ ಮಾನಸ ಅವರಿಗೆ ಸಪೋರ್ಟಿವ್ ಆಗಿ ನಿಂತಿದ್ದಾರೆ. ಬಿಡುವಿನ ವೇಳೆಯಲ್ಲಿ ಫ್ಯಾಮಿಲಿಯೊಂದಿಗೆ ಟ್ರಾವೆಲ್ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಈಗಾಗಲೇ ಕರ್ನಾಟಕವನ್ನು ಮೊದಲು ಸುತ್ತಬೇಕು. ಆ ಬಳಿಕ ವಿದೇಶಗಳಿಗೆ ಪ್ರವಾಸ ಮಾಡುತ್ತಾ ಲೈಫ್ ಎಂಜಾಯ್ ಮಾಡುವುದಕ್ಕೆ ನಿರ್ಧರಿಸಿದ್ದಾರೆ.


Click it and Unblock the Notifications











