ನಾನಿನ್ನೂ ವರ್ಜಿನ್, ಮದ್ವೆ ಆದ್ಮೇಲೆ..; ಸಹನಟಿ ಕ್ಯಾರೆಕ್ಟರ್‌ ಬಗ್ಗೆ ಶಿಲ್ಪಾ ಶಿಂಧೆ ಚೀಪ್ ಕಾಮೆಂಟ್, ಭುಗಿಲೆದ್ದ ಆಕ್ರೋಶ

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಮನರಂಜನೆಗೆ ಒಂದು ಗೆರೆ ಇರುತ್ತಿತ್ತು. ಇತಿ ಮಿತಿ ಇರುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಮನರಂಜನೆಯ ವ್ಯಾಖ್ಯಾನ ಬದಲಾಗಿದೆ. ಮೊದಲಾಗಿದ್ದರೆ ಖ್ಯಾತಿಯ ಶಿಖರಕ್ಕೇರಲು ಕೇವಲ ಪ್ರತಿಭೆ ಮಾತ್ರ ಮಾನದಂಡವಾಗಿತ್ತು.

ಆದರೆ ಇಂದು ಹಾಗಲ್ಲ. ಬೆಳ್ಳಿತೆರೆ .. ಕಿರುತೆರೆಯಲ್ಲಿ ಮಿಂಚಬೇಕೆಂದರೆ ಪ್ರತಿಭೆ ಇರಲಿ ಇಲ್ಲದಿರಲಿ ಗ್ಲ್ಯಾಮರ್ ಇರಬೇಕು ಎನ್ನುವ ಅಲಿಖಿತ ನಿಯಮ ಜಾರಿಯಲ್ಲಿದೆ. ಇನ್ನು ರಿಯಾಲಿಟಿ ಶೋಗಳಲ್ಲಂತೂ ಸೆರಗು ಜಾರಿಸೋದು.. ಅಂಗ ಪ್ರದರ್ಶನ.. ಅತಿರೇಕದ ನಡುವಳಿಕೆ... ಮುಂತಾದ ಸವಕಲೆದ್ದ ಅಸಹ್ಯದ ಸರಕುಗಳನ್ನೇ ಇಂದು ಮನರಂಜನೆಯ ಹೆಸರಿನಲ್ಲಿ ಹಂಚಲಾಗುತ್ತಿದೆ. ಚಾರಿತ್ಯ್ರ ಹರಣ ಮಾಡಲಾಗುತ್ತಿದೆ. ಸಾರ್ವಜನಿಕವಾಗಿ ಒಬ್ಬರ ಘನತೆಯನ್ನು ಹರಾಜು ಹಾಕಲಾಗುತ್ತೆ. ಉದಾಹರಣೆಗೆ ''ಲಾಕಪ್ -2'' ರಿಯಾಲಿಟಿ ಶೋವನ್ನೇ ತೆಗೆದುಕೊಳ್ಳಿ.

Netizens Furious After Shilpa Shinde Targets Shivangi Joshi s Virginity On Lock Upp
Also Read
ಗಂಡು ಬೇಡ, ಹೆಣ್ಣು ಬೇಡ ; ನನಗೆ ಯಾರಿಂದಲೂ ದೈಹಿಕ ಸುಖ ಬೇಡ, ಡಿವೋರ್ಸ್‌ ಬೆನ್ನಲ್ಲೇ ನಟಿಯ ಶಾಕಿಂಗ್ ಹೇಳಿಕೆ
ಗಂಡು ಬೇಡ, ಹೆಣ್ಣು ಬೇಡ ; ನನಗೆ ಯಾರಿಂದಲೂ ದೈಹಿಕ ಸುಖ ಬೇಡ, ಡಿವೋರ್ಸ್‌ ಬೆನ್ನಲ್ಲೇ ನಟಿಯ ಶಾಕಿಂಗ್ ಹೇಳಿಕೆ

ಕ್ಯಾರೆಕ್ಟರ್ ಕುರಿತು ಕೊಂಕು ಮಾತು

ಹೌದು, ಹಿಂದಿಯಲ್ಲಿ ರಿಯಾಲಿಟಿ ಶೋ ಒಂದು ಪ್ರಸಾರವಾಗುತ್ತಿದೆ. ಅದರ ಹೆಸರು ''ಲಾಕಪ್ 2''. ರಿತೇಶ್ ದೇಶಮುಖ್ ಮತ್ತು ಫರ್ಹಾ ಖಾನ್ ಈ ಕಾರ್ಯಕ್ರಮದ ಸಾರಥ್ಯ ವಹಿಸಿದ್ದಾರೆ. ಆರಂಭವಾದ ದಿನದಿಂದ ಪ್ರೇಕ್ಷಕರನ್ನು ಸೆಳೆಯಲು ಈ ಕಾರ್ಯಕ್ರಮದಲ್ಲಿ ನಾನಾ ಕಸರತ್ತು ಮಾಡಲಾಗುತ್ತಿದೆ.

ಇಂತಹ ಕಾರ್ಯಕ್ರಮದಲ್ಲಿ ''ಬಿಗ್ ಬಾಸ್‌''ನ ವಿನ್ನರ್ ಶಿಲ್ಪಾ ಶಿಂಧೆ, ಕಾರ್ಯಕ್ರಮದ ಮತ್ತೊಬ್ಬ ಸ್ಫರ್ಧಿ ಶಿವಾಂಗಿ ಜೋಶಿ ಅವರ ಕ್ಯಾರೆಕ್ಟರ್ ಕುರಿತು ಕೊಂಕು ಮಾತುಗಳನ್ನಾಡಿದ್ದಾರೆ.

ಕಾರ್ಯಕ್ರಮದಲ್ಲಿ ಇನ್ನೊಬ್ಬ ಸ್ಫರ್ಧಿ ಶ್ರೇಯಾ ಕರ್ಲಾ ಜೊತೆ ಮಾತನಾಡುತ್ತಿದ್ದ ಸಮಯದಲ್ಲಿ, ತಮ್ಮನ್ನು ತಾವು ವರ್ಜಿನ್ ಎಂದು ಹೇಳಿಕೊಂಡಿರುವ ಶಿಲ್ಪಾ ಶಿಂಧೆ ಆ ನಂತರ ಶಿವಾಂಗಿ ಜೋಶಿಯ ಕನ್ಯತ್ವದ ಕುರಿತು ವ್ಯಂಗ್ಯವಾಡಿದ್ದಾರೆ.

ಶಿವಾಂಗಿ ಜೋಶಿ ಹಾವ ಭಾವ ಅನುಸರಿಸುತ್ತಾ ಅವರ ಮಿಮಿಕ್ರಿಯನ್ನು ಮಾಡಿರುವ ಶಿಲ್ಪಾ ಶಿಂಧೆ, ನನ್ನ ಬಳಿ ಯಾವುದೇ ಸೀಕ್ರೆಟ್ ಇಲ್ಲ. ನಾನು ಎಷ್ಟು ಅಂತ ನಟನೆ ಮಾಡಲಿ..? ನಾನು ತುಂಬಾ ಇನೋಸೆಂಟ್, ನನಗೆ ಏನೂ ಗೊತ್ತೇ ಇಲ್ಲ. ನಾನು ಇನ್ನೂ ವರ್ಜಿನ್ ಆಗಿದ್ದು, ಮದುವೆ ಆದ್ಮೇಲೆಯೇ ಅದನ್ನು ಮಾಡುವೆ ಎಂದು ಹೇಳಿದ್ದಾರೆ. ಅಸಹ್ಯವಾಗಿ ವ್ಯಂಗ್ಯವಾಡಿದ್ದಾರೆ.

netizens-furious-after-shilpa-shinde-targets-shivangi-joshi-s-virginity-on-lock-upp
Recommended For You
ಶ್ರೀಲೀಲಾ ಅವಕಾಶ ಕಿತ್ತುಕೊಂಡ ಮುಗಿಲ್‌ಪೇಟೆ ಚೆಲುವೆ ? ಸೂಪರ್ ಸ್ಟಾರ್ ಚಿತ್ರದಿಂದ ಹೊರ ಬಂದ ಕಿಸ್ ಬೆಡಗಿ ?
ಶ್ರೀಲೀಲಾ ಅವಕಾಶ ಕಿತ್ತುಕೊಂಡ ಮುಗಿಲ್‌ಪೇಟೆ ಚೆಲುವೆ ? ಸೂಪರ್ ಸ್ಟಾರ್ ಚಿತ್ರದಿಂದ ಹೊರ ಬಂದ ಕಿಸ್ ಬೆಡಗಿ ?

ಭುಗಿಲೆದ್ದ ಆಕ್ರೋಶ

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಿಲ್ಫಾ ಶಿಂಧೆ ವಿರುದ್ಧ ಜನಾಕ್ರೋಶದ ಅಲೆ ಎದ್ದಿದೆ. ಮಾಜಿ ''ಬಿಗ್ ಬಾಸ್'' ಸ್ಫರ್ಧಿ ರಾಜೀವ್ ಅದಾತಿಯಾ ಈ ಕುರಿತು ತಮ್ಮ ಆಕ್ರೋಶ ಹೊರ ಹಾಕಿದ್ದು ಶಿಲ್ಪಾ ಶಿಂಧೆ, ನೀವು ಶಿವಾಂಗಿ ಜೋಶಿ ಕನ್ಯತ್ವದ ಬಗ್ಗೆ ಮಾತಾಡ್ತಿದ್ದೀರಾ..?? ನಿಜವಾಗಿಯೂ..? ನಿರ್ಮಾಪಕರ ಮೇಲೆ ಸುಳ್ಳು ಲೈಂಗಿಕ ದೌರ್ಜನ್ಯದ ಕೇಸ್ ಹಾಕಿದ್ದು ನೀವೇ ಅಲ್ವಾ..?? ಅಂಥದ್ರಲ್ಲಿ ನೀವು ಬೇರೆಯವರ ವರ್ಜಿನಿಟಿ ಬಗ್ಗೆ ಮಾತಾಡ್ತೀರಾ..! ಮೊದಲು ದೊಡ್ಡವರ ತರ ಯೋಚನೆ ಮಾಡೋದನ್ನ ಕಲಿಯಿರಿ..! ಎಂದು ಟ್ವೀಟ್ ಮಾಡಿದ್ದಾರೆ.

ನಟಿ ವಿನ್ನಿ ಅರೋರಾ ಕೂಡ ಶಿಲ್ಫಾ ಶಿಂಧೆ ಅವರ ವರ್ತನೆಯನ್ನು ಖಂಡಿಸಿದ್ದು, ತಮಗೆ ಯಾವುದೇ ಕೇಡು ಮಾಡದ ಮತ್ತೊಬ್ಬ ಮಹಿಳೆಯನ್ನ ಇಬ್ಬರು ಹೆಣ್ಣುಮಕ್ಕಳೇ ಸೇರಿ ಇಷ್ಟು ಕೆಳಮಟ್ಟಕ್ಕೆ ಎಳೆಯುತ್ತಿರೋದು ಅಸಹ್ಯ. ಶಿವಾಂಗಿ ಜೋಶಿ ಲವ್ ಲೈಫ್ ಬಗ್ಗೆ ಆಗ್ಲಿ, ಅವಳ ವರ್ಜಿನಿಟಿ ಬಗ್ಗೆ ಆಗ್ಲಿ, ಮಾತನಾಡುವ ಯಾವ ಹಕ್ಕು ನಿಮಗೆ ಇಲ್ಲ ಎಂದು ಕಿಡಿ ಕಾರಿದ್ದಾರೆ.

ಇನ್ನು ಕೆಲವರು ಕಾರ್ಯಕ್ರಮದಲ್ಲಿ ರೋಚಕತೆ ಇರಬೇಕು, ಅಶ್ಲೀಲತೆ ಇರಬಾರದು, ಮತ್ತೊಬ್ಬರ ಚಾರಿತ್ಯ್ರವಧೆ ಮಾಡಬಾರದು ಎಂದಿದ್ದಾರೆ. ನೆಟ್‌ಫ್ಲಿಕ್ಸ್‌ ಅಂತಹ ಅಂತರಾಷ್ಟ್ರೀಯ ವೇದಿಕೆಯಲ್ಲಿ ಇಷ್ಟೊಂದು ಚೀಪ್ ಆಗಿ ವರ್ತಿಸುವುದಾ..? ಎಂದು ಪ್ರಶ್ನೆ ಮಾಡಿದ್ದಾರೆ. ಕನಿಷ್ಠ ಗೌರವ ಕೊಡುವುದು ಹೇಗೆ ಎನ್ನುವುದನ್ನು ಶಿವಾಂಗಿ ಜೋಶಿ ಅವರಿಂದ ನೋಡಿ ಕಲಿಯಿರಿ ಎಂದು ಶಿಲ್ಪಾ ಶಿಂಧೆಯನ್ನು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

English summary
How low can you stoop?" Netizens fume over Shilpa Shinde's controversial comments mocking Shivangi Joshi's personal life on Lock Upp. Get the full details inside.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X