BBK 10:"ಬರುವಾಗ್ಲೇ ಟಿಕೆಟ್ ತಂದಿರ್ತೀವಿ.. ಕನ್ಫರ್ಮ್ ಆಗಿದ್ದೇ ಹೊರಡ್ತೀವಿ.. ಇವರು ಟಾಪ್ 5ನಲ್ಲಿ ಇರ್ಲೇಬೇಕು" ಸ್ನೇಕ್ ಶ್ಯಾಮ್
ಬಿಗ್ ಬಾಸ್ ಕನ್ನಡ ಸೀಸನ್ 10 ಆರಂಭ ಆಗಿದ್ದು ಆಗಿದೆ. ಸ್ಪರ್ಧಿಯಾಗಿದ್ದ ಸ್ನೇಕ್ ಶ್ಯಾಮ್ ಹೊರಬಿದ್ದಿದ್ದೂ ಆಗಿದೆ. ಮನೆಯಿಂದ ಹೊರಬರುತ್ತಿದ್ದಂತೆ ಸ್ನೇಕ್ ಶ್ಯಾಮ್ ಜಿಯೋ ಸಿನಿಮಾಕ್ಕೆ ಸಂದರ್ಶನ ನೀಡಿದ್ದಾರೆ. ಇದರಲ್ಲಿ ಒಂದು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಕಳೆದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್ ನಲ್ಲಿ ಹೊರಬಿದ್ದ ಮೊದಲ ಸ್ಪರ್ಧಿ ಸ್ನೇಕ್ ಶ್ಯಾಮ್ ತಾನೆಲ್ಲಿ ಎಡವಿದೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಹಾಗೇ ಬಿಗ್ ಬಾಸ್ ಕನ್ನಡ ಸೀಸನ್ 10ರ ಟಾಪ್ 5 ಸ್ಥಾನದಲ್ಲಿ ಯಾರು ಇರಬೇಕು. ಈ ಬಾರಿ ಬಿಗ್ ಬಾಸ್ ಅನ್ನು ಯಾರು ಗೆಲ್ಲಬೇಕು ಅಂತ ಹೇಳಿಕೆ ಕೊಟ್ಟಿದ್ದಾರೆ.

ಹಾಗೇ "ಬರುವಾಗ್ಲೇ ಟಿಕೆಟ್ ತಂದಿರ್ತೀವಿ. ವೇಟಿಂಗ್ ಲೀಸ್ಟಲ್ಲಿರ್ತೀವಿ. ಕನ್ಫರ್ಮ್ ಆಗಿದ್ದೇ ಹೊರಡ್ತೀವಿ" ಅಂತ ತಮ್ಮದೇ ಸ್ಟೈಲ್‌ನಲ್ಲಿ ಬಿಗ್ ಬಾಸ್ ಮನೆಯೊಳಗೆ ಕಳೆದ ಒಂದು ವಾರ ಸವಿನೆನಪನ್ನು ಹಂಚಿಕೊಂಡಿದ್ದಾರೆ. ಅದರ ಪ್ರಮುಖ ಅಂಶಗಳು ಇಲ್ಲಿವೆ.
"16 ವಿಭಿನ್ನ ಮನಸ್ಸುಗಳನ್ನು ನೋಡಿದೆ"
"ಬಿಗ್ ಬಾಸ್‌ಗೆ ಬರೋದನ್ನು ಎಕ್ಸ್‌ಪೆಕ್ಟ್ ಮಾಡಿರಲಿಲ್ಲ. ಬಂದೆ ಒಂದು ವಾರವಿದ್ದೆ. ಒಂದು ಎಕ್ಸ್‌ಪಿರೀಯನ್ಸ್ ಸಿಕ್ತು. 16 ವಿಭಿನ್ನ ಮನಸ್ಸುಗಳನ್ನು ನೋಡಿದೆ. ಮೈಂಡ್‌ಗಳನ್ನು ನೋಡಿದೆ. ಯಾರು ಯಾವ್ಯಾವ ತರ ಅಂತ ಗೊತ್ತಾಯ್ತು. ನಾನು ಹೊರಗಡೆ ಇದ್ದಾಗ, ಒಬ್ಬೊಬ್ಬರನ್ನು ಯಾವಾಗ ಯಾವಾಗಲೋ ನೋಡುತ್ತೇವೆ. ಆದ್ರೀಗ ಎಲ್ಲರನ್ನೂ ಒಂದೇ ಕಡೆ ನೋಡಿದ್ದೀವಿ. ಒಬ್ಬೊಬ್ಬರ ಬ್ರೈನ್ ಒಂಥರಾ, ಒಬ್ಬೊಬ್ಬರು ಒಳಗಡೆ ಒಂಥರಾ. ಹೊರಗಡೆ ಒಂಥರಾ ಎಲ್ಲಾ ನೋಡಿಬಿಟ್ಟೆ." ಎಂದು ಸ್ನೇಕ್ ಶ್ಯಾಮ್ ಹೇಳಿದ್ದಾರೆ.
"ಬರುವಾಗ್ಲೇ ಟಿಕೆಟ್ ತಂದಿರ್ತೀವಿ"
"ಭೂಮಿಗೆ ನಾವು ಶಾಶ್ವತ ಅಲ್ಲ. ಇನ್ನು ಇಲ್ಲಿಗೆ ನಾನು ಶಾಶ್ವತ ಅಲ್ಲ ಅಲ್ವಾ? ಬರುವಾಗಲೇ ನಾನು ಟಿಕೆಟ್ ತಂದಿರುತ್ತೇವೆ. ತತ್ಕಾಲ್‌ನಲ್ಲಿ ಇರುತ್ತೇವೆ. ಟಿಕೆಟ್ ಸಿಕ್ಕಿದಾಗ ಹೋಗುತ್ತೇವೆ. ನನ್ನ ಒಳ್ಳೆ ತನವೇ ತಪ್ಪಾಗಿದ್ದು. ಖಡಕ್ ಆಗಿ ಇದ್ದಿದ್ದರೆ, ಇಂತಹವರ ಮನಸ್ಸು ನೋಯಿಸಬಾರದು ಅಂತ ಇದ್ದಿದ್ದೇ ದೊಡ್ಡ ತಪ್ಪಾಗಿದ್ದು. ಎಲ್ಲರಿಗೂ ನಾನು ಹೇಳುವುದು ಇಷ್ಟೇ.. ಬ್ರೈನ್ ಮತ್ತು ಹೃದಯ ಗಟ್ಟಿ ಇರಲಿ. ಅಪ್ಪನೇ ಆಗಲಿ, ತಮ್ಮನೇ ಆಗಲಿ, ಹೆಂಡತಿನೇ ಕಾಂಪಿಟೇಷನ್‌ಗೆ ಬಂದರೆ, ಅದು ಕಾಂಪಿಟೇಷನ್ ದಯವಿಟ್ಟು ಅದಕ್ಕೆ ಕರುಣೆ ತೋರಿಸಲು ಹೋಗಬೇಡಿ." ಎಂದು ಸ್ನೇಕ್ ಶ್ಯಾಮ್ ಹೇಳಿದ್ದಾರೆ.

"ಕೆಟ್ಟತನ ತೋರಿಸಿದ್ದರೆ ಜಾಸ್ತಿ ದಿನ ಇರುತ್ತಿದ್ದೆ"
"ನಾನು ಬೇರೆಯವರ ಮೇಲೆ ಅನುಕಂಪ ತೋರಿಸದೇ ಹೋಗದೆ ನನ್ನ ಕೆಟ್ಟತನ ತೋರಿಸಿದ್ದರೆ ಇನ್ನೂ ಜಾಸ್ತಿ ದಿನ ಉಳಿದುಕೊಳ್ಳುತ್ತಿದ್ದೆ. ಸಮರ್ಥನಿಂದ ಅಸಮರ್ಥನಿಗೆ ಕಳುಹಿಸಿದಾಗ, ಅದ್ಯಾಕೆ ನನ್ನ ಮೇಲೆ ಕಣ್ಣು ಬಿತ್ತೋ ಗೊತ್ತಿಲ್ಲ. ಆರಂಭದಿಂದ ಎಲ್ಲರೂ ನನ್ನ ಹೆಸರನ್ನೇ ಹೇಳುತ್ತಿದ್ದರು. ಟಾರ್ಗೆಟ್‌ನನ್ನೇ ಮಾಡುತ್ತಿದ್ದರು. ಯಾಕೆ ಅಂತ ಗೊತ್ತಿಲ್ಲ ನನಗೆ." ಎಂಬುದು ಸ್ನೇಕ್ ಶ್ಯಾಮ್ ಅಭಿಪ್ರಾಯ.
ಡ್ರೋನ್ ಪ್ರತಾಪ್ ಮುಗ್ಧ-ಬುದ್ಧಿವಂತ
"ನನಗೆ ತುಂಬಾ ಖುಷಿಯಾಗಿದ್ದು ಡ್ರೋನ್ ಪ್ರತಾಪ್. ಹೊರಗಡೆ ಅವನಿಗೆ ಏನು ಆರೋಪಗಳು ಬಂದಿರಬಹುದು, ಅವನ ಜೊತೆ ಒಡನಾಟ ಇಟ್ಟುಕೊಂಡೆ. ಒಂದ್ಕಡೆ ಮುಗ್ಧ ಅನಿಸಿತು. ಇನ್ನೊಂದು ಕಡೆ ಬ್ರಿಲಿಯಂಟ್ ಅಂತ ಅನಿಸಿತು. ಅವನು ಮುಗ್ದತೆ ತೋರಿಸಿದ್ನೋ ಇಲ್ವೋ ಗೊತ್ತಿಲ್ಲ. ಆದರೆ, ತುಂಬಾನೇ ಬುದ್ದಿವಂತ." ಎಂದು ಡ್ರೋನ್ ಪ್ರತಾಪ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಇವರು ಟಾಪ್ 5ನಲ್ಲಿ ಇರ್ಲೇಬೇಕು"
"ಟಾಪ್ 5 ನಲ್ಲಿ ತುಕಾಲಿ, ವಿನಯ್, ಸಂಗೀತಾ, ಡ್ರೋನ್ ಪ್ರತಾಪ್, ಹಳ್ಳಿಕಾರ್ ಇವರು ಐದು ಮಂದಿ ಇರಬೇಕು. ಇವರಲ್ಲಿ ಡ್ರೋನ್ ಪ್ರತಾಪ್ ಗೆಲ್ಲಬೇಕು ಅಂತ ಅನಿಸುತ್ತೆ. ಆರು ಜನ ಅಸಮರ್ಥರಲ್ಲಿ ಸಂಗೀತಾಳೇ ಸಮರ್ಥಳು. ಸಮರ್ಥರ ಗ್ರೂಪ್‌ನಲ್ಲಿ ಇಶಾನಿ. ಹೊರಗಡೆನೂ ಒಳಗಡೆನೂ ಒಂದೇ ರೀತಿ ಇರುವ ವ್ಯಕ್ತಿ ಅಂದರೆ, ನನ್ನ ಪ್ರಕಾರ ಡ್ರೋನ್ ಪ್ರತಾಪ. ಇಬ್ಬರು ಫೇವರಿಟ್‌ನಲ್ಲಿ ಒಬ್ಬರು ಸಂಗೀತಾ, ಇನ್ನೊಬ್ಬರು ತುಕಾಲಿ." ಎಂದು ತಮ್ಮ ಆಯ್ಕೆಯನ್ನು ತಿಳಿಸಿದ್ದಾರೆ.


Click it and Unblock the Notifications











