ವಿಜಯ್ ರಾಘವೇಂದ್ರ-ಸ್ಪಂದನ ಲವ್ ಸ್ಟೋರಿ ಶುರು ಆಗಿದ್ದು ಹೇಗೆ.?

By Harshitha

'ಗಂಡ-ಹೆಂಡತಿ ಅಂದ್ರೆ ಹೀಗೆ ಇರಬೇಕು' ಎಂದು ನಟ ವಿಜಯ್ ರಾಘವೇಂದ್ರ ಹಾಗೂ ಪತ್ನಿ ಸ್ಪಂದನ ರವರ ನಡುವಿನ ಅನುಬಂಧವನ್ನ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ನೋಡಿದ್ಮೇಲೆ ಕೋಟ್ಯಾಂತರ ಕನ್ನಡಿಗರು ಮಾತನಾಡಿಕೊಂಡಿದ್ದರು.

'ಬಿಗ್ ಬಾಸ್' ಮನೆಯಲ್ಲಿ ಇರುವಾಗ ಪತ್ನಿ ಸ್ಪಂದನ ರವರನ್ನ ಮಿಸ್ ಮಾಡಿಕೊಂಡು ವಿಜಯ್ ರಾಘವೇಂದ್ರ ಗೊಳೋ ಎಂದು ಕಣ್ಣೀರಿಟ್ಟಿದ್ದರು. ಪತ್ನಿ ಸ್ಪಂದನ ರವರನ್ನ ವಿಜಯ್ ರಾಘವೇಂದ್ರ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ ಎಂಬ ಸಂಗತಿ ಎಲ್ಲರಿಗೂ ಗೊತ್ತು. ಆದ್ರೆ, ಇಬ್ಬರ ಲವ್ ಸ್ಟೋರಿ ಶುರು ಆಗಿದ್ದು ಹೇಗೆ ಎಂಬುದು ನಿಮಗೆ ಗೊತ್ತಾ.?

ವಿಜಯ್ ರಾಘವೇಂದ್ರ-ಸ್ಪಂದನ ಲವ್ ಸ್ಟೋರಿ ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಹಿರಂಗವಾಯಿತು. ಮುಂದೆ ಓದಿ...

ಲವ್ @ ಫಸ್ಟ್ ಸೈಟ್

ಲವ್ @ ಫಸ್ಟ್ ಸೈಟ್

2004 ರಲ್ಲಿ ಎ.ಸಿ.ಪಿ ಬಿ.ಕೆ.ಶಿವರಾಂ ಪುತ್ರಿ ಸ್ಪಂದನ ರವರನ್ನ ಮಲ್ಲೇಶ್ವರಂ ಕಾಫಿ ಡೇ ನಲ್ಲಿ ವಿಜಯ್ ರಾಘವೇಂದ್ರ ಮೊದಲು ನೋಡಿದ್ದಂತೆ. ಮುದ್ದು ಮುದ್ದಾಗಿದ್ದ ಸ್ಪಂದನ ರವರನ್ನ ನೋಡಿದ ಕೂಡಲೆ ವಿಜಯ್ ರಾಘವೇಂದ್ರ ಹೃದಯದಲ್ಲಿ ಕಚಗುಳಿ ಇಟ್ಟಂಗಾಗಿದೆ. ಆದ್ರೆ, ಮಾತನಾಡಿಸುವ ಧೈರ್ಯ ಮಾಡಿಲ್ಲ.[ನಟ ವಿಜಯ್ ರಾಘವೇಂದ್ರ ಮಾಡಿರುವ ಸಾಧನೆ ಏನು.?]

ಮೂರು ವರ್ಷ ಗ್ಯಾಪ್

ಮೂರು ವರ್ಷ ಗ್ಯಾಪ್

ಮೂರು ವರ್ಷಗಳ ಬಳಿಕ ಸ್ಪಂದನ ರವರನ್ನ ಶೇಷಾದ್ರಿಪುರಂ ಕಾಫಿ ಡೇನಲ್ಲಿ ಮತ್ತೆ ವಿಜಯ್ ರಾಘವೇಂದ್ರ ನೋಡಿದ್ರಂತೆ. ಈ ಬಾರಿ ಮಿಸ್ ಮಾಡಬಾರದು ಎಂದು ಡೈರೆಕ್ಟ್ ಆಗಿ ಹೋಗಿ, ಸ್ಪಂದನ ಜೊತೆ ಮಾತನಾಡಿದ್ರಂತೆ.[ಸಾಧಕರ ಸೀಟ್ ಮೇಲೆ ಕೂರಲು ವಿಜಯ್ ರಾಘವೇಂದ್ರ ಅರ್ಹರೇ.?]

ಕುಟುಂಬದ ಜೊತೆ ಮಾತುಕತೆ

ಕುಟುಂಬದ ಜೊತೆ ಮಾತುಕತೆ

ಅದೇ ಸಮಯದಲ್ಲಿ ವಿಜಯ್ ರಾಘವೇಂದ್ರ ರವರಿಗೆ ಮದುವೆ ಮಾಡಲು ಕುಟುಂಬದವರು ಹುಡುಗಿಯ ಹುಡುಕಾಟದಲ್ಲಿ ಇದ್ದರು. ಆಗ, ಸಮಯ ನೋಡಿ ಸ್ಪಂದನ ಬಗ್ಗೆ ಕುಟುಂಬದವರಿಗೆ ವಿಜಯ್ ರಾಘವೇಂದ್ರ ವಿಷಯ ತಲುಪಿಸಿದ್ದಾರೆ.

ಒಂದೇ ತಿಂಗಳಲ್ಲಿ ಮದುವೆ ಫಿಕ್ಸ್

ಒಂದೇ ತಿಂಗಳಲ್ಲಿ ಮದುವೆ ಫಿಕ್ಸ್

ಉಭಯ ಕುಟುಂಬಗಳು ಮಾತುಕತೆ ನಡೆಸಿ, ಒಂದು ತಿಂಗಳೊಳಗೆ ಮದುವೆ ಫಿಕ್ಸ್ ಮಾಡಿದ್ರಂತೆ.

2007ರಲ್ಲಿ ಮದುವೆ

2007ರಲ್ಲಿ ಮದುವೆ

ಆಗಸ್ಟ್ 26, 2007 ರಲ್ಲಿ ವಿಜಯ್ ರಾಘವೇಂದ್ರ-ಸ್ಪಂದನ ಹಸೆಮಣೆ ಏರಿದರು. ಇಬ್ಬರಿಗೆ ಶೌರ್ಯ ಎಂಬ ಪುತ್ರನಿದ್ದಾನೆ.

ಕಾಕತಾಳೀಯ...

ಕಾಕತಾಳೀಯ...

'ನಿನಗಾಗಿ' ಚಿತ್ರದಲ್ಲಿ ನಟಿಸಿದ್ಮೇಲೆ ಮಂಗಳೂರು ಹುಡುಗಿಯನ್ನ ಮದುವೆ ಆಗಬೇಕು ಎಂಬ ಆಸೆ ಇತ್ತಂತೆ ವಿಜಯ್ ರಾಘವೇಂದ್ರ ರವರಿಗೆ. ಕಾಕತಾಳೀಯ ಎಂಬಂತೆ, ಸ್ಪಂದನ ರವರ ಊರು ಬೆಳ್ತಂಗಡಿ.

ಸರ್ ಪ್ರೈಸ್ ಕೊಡುವುದರಲ್ಲಿ ಮಾಸ್ಟರ್

ಸರ್ ಪ್ರೈಸ್ ಕೊಡುವುದರಲ್ಲಿ ಮಾಸ್ಟರ್

'ಸರ್ ಪ್ರೈಸ್ ಕೊಡುವುದರಲ್ಲಿ ಸ್ಪಂದನ ಮಾಸ್ಟರ್' ಎನ್ನುತ್ತಾರೆ ನಟ ವಿಜಯ್ ರಾಘವೇಂದ್ರ.

More from Filmibeat

English summary
Vijay Raghavendra-Spandana love story revealed in in Zee Kannada Channel's popular show 'Weekend with Ramesh 3'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X