For Quick Alerts
  ALLOW NOTIFICATIONS  
  For Daily Alerts

  ಸಾಧಕರ ಸೀಟ್ ಮೇಲೆ ಕೂರಲು ವಿಜಯ್ ರಾಘವೇಂದ್ರ ಅರ್ಹರೇ.?

  By Harshitha
  |

  ಜೀ ಕನ್ನಡ ವಾಹಿನಿಯ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಕಳೆದ ವಾರ ನಟ ವಿಜಯ್ ರಾಘವೇಂದ್ರ ಆಗಮಿಸಿದ್ದರು.

  ಸಾಧಕರ ಸೀಟ್ ಮೇಲೆ ಕೂರಲು ವಿಜಯ್ ರಾಘವೇಂದ್ರ ಅರ್ಹರೇ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿರಬಹುದು. ಅಷ್ಟಕ್ಕೂ, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರೆ ಬಂದಾಗ ನಟ ವಿಜಯ್ ರಾಘವೇಂದ್ರ ರವರಿಗೆ ಮುಜುಗರ ಆಗಿತ್ತಂತೆ.[ನಟ ವಿಜಯ್ ರಾಘವೇಂದ್ರ ಮಾಡಿರುವ ಸಾಧನೆ ಏನು.?]

  ಈ ಕುರಿತು ಸ್ವತಃ ವಿಜಯ್ ರಾಘವೇಂದ್ರ ರವರೇ ಹೇಳಿಕೊಂಡಾಗ, ಕಾರ್ಯಕ್ರಮದ ನಿರೂಪಕ ರಮೇಶ್ ಅರವಿಂದ್ ನೀಡಿದ ಸ್ಪಷ್ಟನೆ ಏನು ಗೊತ್ತೇ.?

  ವಿಜಯ್ ರಾಘವೇಂದ್ರ ರವರನ್ನ ಸಾಧಕರ ಸೀಟ್ ಮೇಲೆ ಕೂರಿಸಲು ಕಾರಣ.?

  ವಿಜಯ್ ರಾಘವೇಂದ್ರ ರವರನ್ನ ಸಾಧಕರ ಸೀಟ್ ಮೇಲೆ ಕೂರಿಸಲು ಕಾರಣ.?

  ವಿಜಯ್ ರಾಘವೇಂದ್ರ ರವರ ಸೌಮ್ಯ ಸ್ವಭಾವ ಹಾಗೂ ವ್ಯಕ್ತಿತ್ವ... ಅವರನ್ನ ಸಾಧಕರ ಸೀಟ್ ವರೆಗೂ ಕರೆತಂದಿದೆ. ವಿಜಯ್ ರಾಘವೇಂದ್ರ ರವರ ಒಳ್ಳೆತನ ಯುವ ಜನತೆಗೆ ಸ್ಫೂರ್ತಿ ನೀಡಲಿ ಎಂಬುದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಆಶಯ.[ಸಾಧಕರ ಸೀಟ್ ಮೇಲೆ ಕೂರಲು ವಿಜಯ್ ರಾಘವೇಂದ್ರ ಅರ್ಹರೇ.?]

  ರಮೇಶ್ ಅರವಿಂದ್ ಹೇಳಿದ್ದೇನು.?

  ರಮೇಶ್ ಅರವಿಂದ್ ಹೇಳಿದ್ದೇನು.?

  'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ವಿಜಯ್ ರಾಘವೇಂದ್ರ ಆಗಮಿಸುತ್ತಿದ್ದಂತೆಯೇ, ಅವರಿಗೆ ''ಐ ಆಮ್ ಎ ಗುಡ್ ಬಾಯ್'' ಎಂದು ಬರೆಯಲಾಗಿದ್ದ ಬ್ಯಾಡ್ಜ್ ತೊಡಿಸಿ, ''ನಿಮ್ಮ ವ್ಯಕ್ತಿತ್ವ, ನಿಮ್ಮ ಒಳ್ಳೆತನ... ಎಲ್ಲರಿಗೂ ಹಿಡಿಸುತ್ತದೆ. ಹೀಗಾಗಿ ನೀವು ಈ ಸಾಧಕರ ಸೀಟ್ ಮೇಲೆ ಕೂತಿದ್ದೀರಾ'' ಎಂದು ರಮೇಶ್ ಅರವಿಂದ್ ಹೇಳಿದರು.

  ಮುಜುಗರ ಆಗಿತ್ತಂತೆ.!

  ಮುಜುಗರ ಆಗಿತ್ತಂತೆ.!

  ''ಈ ಸಾಧಕರ ಸೀಟ್ ನನಗೆ ತುಂಬಾ ದೊಡ್ಡದು. ದೊಡ್ಡ ದೊಡ್ಡ ಸಾಧಕರ ಕಥೆ ಕೇಳಿ ನಾವು ಸ್ಫೂರ್ತಿ ಪಡೆಯುತ್ತಿದ್ವಿ. ಈ ಕಾರ್ಯಕ್ರಮಕ್ಕೆ ಅಂತ ನನಗೆ ಕರೆ ಬಂದಾಗ, ನನಗೆ ಬಹಳ ಭಾರ ಆಯ್ತು. ಇಲ್ಲಿ ಕೂತುಕೊಳ್ಳಲು ನನಗೆ ಬಹಳ ಮುಜುಗರ ಆಯ್ತು'' ಎಂದರು ನಟ ವಿಜಯ್ ರಾಘವೇಂದ್ರ.

  ಅರ್ಹತೆಗೆ ಇದೇ ಕಾರಣ...

  ಅರ್ಹತೆಗೆ ಇದೇ ಕಾರಣ...

  ''ಇಲ್ಲಿ ಕೂತವರು ಒಂದೊಂದು ವಿಷಯಕ್ಕೆ ಬಹಳ ಜನಕ್ಕೆ ಸ್ಫೂರ್ತಿ ಆಗುತ್ತಾರೆ. ನಿಮ್ಮ ವ್ಯಕ್ತಿತ್ವ.. ಬಿಗ್ ಬಾಸ್ ಪ್ರೂವ್ಡ್ ಇಟ್. ನೀವ್ಯಾರು ಅಂತ ನಾವೆಲ್ಲರೂ ಬಹಳ ಕ್ಲೋಸಪ್ ನಲ್ಲಿ ನೋಡಿದ್ದೇವೆ. ಹೀಗಾಗಿ ಈ ಕುರ್ಚಿ'' ಎಂದು ಸ್ಪಷ್ಟ ಪಡಿಸಿದರು ನಟ ರಮೇಶ್ ಅರವಿಂದ್.

  ಸಾಧಕರ ಸೀಟ್ ಮೇಲೆ ಕುಳಿತ ವಿಜಯ್ ತಂದೆ-ತಾಯಿ

  ಸಾಧಕರ ಸೀಟ್ ಮೇಲೆ ಕುಳಿತ ವಿಜಯ್ ತಂದೆ-ತಾಯಿ

  ವೇದಿಕೆ ಮೇಲೆ ವಿಜಯ್ ರಾಘವೇಂದ್ರ ತಂದೆ-ತಾಯಿ ಆಗಮಿಸಿದಾಗ, ''ಅಪ್ಪನನ್ನ ಸಾಧಕರ ಸೀಟ್ ಮೇಲೆ ಕೂರಿಸಬೇಕು ಎಂಬುದು ನನ್ನ ಆಸೆ'' ಎಂದರು ವಿಜಯ್ ರಾಘವೇಂದ್ರ. ಆಗ, ''ನನಗಿಂತ ಅವರ ತಾಯಿ ಕೂತುಕೊಳ್ಳುವುದು ಒಳ್ಳೆಯದ್ದು. ಯಾಕಂದ್ರೆ, ತಾಯಿಯಿಂದಲೇ ಎಲ್ಲವೂ ಆಗುವುದು'' ಅಂತ ವಿಜಯ್ ರಾಘವೇಂದ್ರ ರವರ ತಾಯಿಯನ್ನ ಕೂರಿಸಿದರು. ಬಳಿಕ ತಂದೆ ಚಿನ್ನೇಗೌಡ್ರು ಕೂಡ ಸಾಧಕರ ಸೀಟ್ ಮೇಲೆ ಕೂತರು.

  English summary
  Read this artcile to know Kannada Actor Vijay Raghavendra's reaction when he got a call to take part in Zee Kannada Channel's popular show 'Weekend with Ramesh 3'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X