For Quick Alerts
  ALLOW NOTIFICATIONS  
  For Daily Alerts

  ನಟ ವಿಜಯ್ ರಾಘವೇಂದ್ರ ಮಾಡಿರುವ ಸಾಧನೆ ಏನು.?

  By Harshitha
  |

  ಸಾಧಕರ ಜೀವನ ಚರಿತ್ರೆಯನ್ನು ಅನಾವರಣ ಮಾಡಿ, ಯುವ ಜನತೆಗೆ ಸ್ಫೂರ್ತಿ ತುಂಬುತ್ತಿರುವ ವಿಶಿಷ್ಟ ಕಾರ್ಯಕ್ರಮ ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್'.

  'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿಯಲ್ಲಿ ಈಗಾಗಲೇ ಪ್ರಕಾಶ್ ರೈ, ಅರ್ಜುನ್ ಜನ್ಯ, ವಿ.ಹರಿಕೃಷ್ಣ, ಪ್ರಾಣೇಶ್, ಪ್ರೊ.ಕೃಷ್ಣೇಗೌಡ, ನ್ಯಾ.ಸಂತೋಷ್ ಹೆಗಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡು ಸಾಧಕರ ಸೀಟ್ ಮೇಲೆ ಕೂತಿದ್ದಾರೆ.

  ಇವರದ್ದೇ ಸಾಲಿನಲ್ಲಿ ಸಾಧಕರ ಕುರ್ಚಿ ಮೇಲೆ ಕಳೆದ ಭಾನುವಾರ ಆಸೀನರಾದವರು ಕನ್ನಡ ನಟ ವಿಜಯ್ ರಾಘವೇಂದ್ರ. ಯಾವುದೇ ವಿವಾದಗಳಿಗೆ ಸಿಲುಕದೆ, ನಯ-ವಿನಯ ಸ್ವಭಾವದಿಂದಲೇ ಜನರ ಪ್ರೀತಿ ಗಳಿಸಿರುವ ವಿಜಯ್ ರಾಘವೇಂದ್ರ ರವರ ಸಾಧನೆಯ ಪಟ್ಟಿ ರಮೇಶ್ ಅರವಿಂದ್ ಬಾಯಿಂದ ಬಂದಿದ್ದು ಹೀಗೆ....

  ನಟ ವಿಜಯ್ ರಾಘವೇಂದ್ರ ಕುರಿತು

  ನಟ ವಿಜಯ್ ರಾಘವೇಂದ್ರ ಕುರಿತು

  ನಿಜ ನಾಮ: ವಿಜಯ್ ರಾಘವೇಂದ್ರ

  ಜನ್ಮ ದಿನಾಂಕ: ಮೇ 26, 1979

  ತಂದೆ: ಚಿನ್ನೇಗೌಡ್ರು

  ತಾಯಿ: ಜಯಮ್ಮ

  ಅಕ್ಕ: ವೀಣಾ

  ತಮ್ಮ: ಶ್ರೀಮುರಳಿ

  ಶ್ರೀಮತಿ: ಸ್ಪಂದನ

  ಪುತ್ರ: ಶೌರ್ಯ

  ಮೂರನೇ ವಯಸ್ಸಿಗೆ ಚಿತ್ರರಂಗಕ್ಕೆ ಪದಾರ್ಪಣೆ

  ಮೂರನೇ ವಯಸ್ಸಿಗೆ ಚಿತ್ರರಂಗಕ್ಕೆ ಪದಾರ್ಪಣೆ

  ನಟ ವಿಜಯ್ ರಾಘವೇಂದ್ರ ಮೊದಲನೇ ಬಾರಿಗೆ ಕ್ಯಾಮರಾ ಫೇಸ್ ಮಾಡಿದ್ದು ಅಣ್ಣಾವ್ರ 'ಚಲಿಸುವ ಮೋಡಗಳು' ಚಿತ್ರದಲ್ಲಿ. ಆಗಿನ್ನೂ ವಿಜಯ್ ರಾಘವೇಂದ್ರ ರವರ ವಯಸ್ಸು ಮೂರು.['ವೀಕೆಂಡ್' ಸಾಧಕರ ಸೀಟಿನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ 'ಚಿನ್ನಾರಿ ಮುತ್ತ']

  ಬಾಲನಟನಾಗಿ ಬಹುಬೇಡಿಕೆ

  ಬಾಲನಟನಾಗಿ ಬಹುಬೇಡಿಕೆ

  ಪ್ರತಿಭಾವಂತ ನಟ ವಿಜಯ್ ರಾಘವೇಂದ್ರ ಬಾಲನಟನಾಗಿ ಒಟ್ಟು ಒಂಬತ್ತು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  ಬಾಲನಟ ವಿಜಯ್ ಗೆ ರಾಜ್ಯ, ರಾಷ್ಟ್ರ ಪ್ರಶಸ್ತಿ

  ಬಾಲನಟ ವಿಜಯ್ ಗೆ ರಾಜ್ಯ, ರಾಷ್ಟ್ರ ಪ್ರಶಸ್ತಿ

  'ಚಿನ್ನಾರಿ ಮುತ್ತ' ಚಿತ್ರದಲ್ಲಿನ ಅಮೋಘ ಅಭಿನಯಕ್ಕೆ ಬಾಲನಟ ವಿಜಯ್ ರಾಘವೇಂದ್ರ ರವರಿಗೆ ರಾಜ್ಯ ಪ್ರಶಸ್ತಿ ಲಭಿಸಿತು. ಹಾಗೇ, 'ಕೊಟ್ರೇಶಿ ಕನಸು' ಚಿತ್ರದಲ್ಲಿನ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದಾರೆ.

  ಸೂಪರ್ ಹಿಟ್ 'ನಿನಗಾಗಿ'

  ಸೂಪರ್ ಹಿಟ್ 'ನಿನಗಾಗಿ'

  2002 ರಲ್ಲಿ ತೆರೆಕಂಡ 'ನಿನಗಾಗಿ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟ ವಿಜಯ್ ರಾಘವೇಂದ್ರ ಇಲ್ಲಿಯವರೆಗೂ ಸರಿ ಸುಮಾರು 50 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  ಅತ್ಯುತ್ತಮ ನಟ

  ಅತ್ಯುತ್ತಮ ನಟ

  'ಶಿವಯೋಗಿ ಶ್ರೀ ಪುಟ್ಟಯ್ಯಜ್ಜ' ಚಿತ್ರದಲ್ಲಿನ ಅಮೋಘ ಅಭಿನಯಕ್ಕೆ ವಿಜಯ್ ರಾಘವೇಂದ್ರ 'ಅತ್ಯುತ್ತಮ ನಟ' ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

  'ಬಿಗ್ ಬಾಸ್' ವಿನ್ನರ್

  'ಬಿಗ್ ಬಾಸ್' ವಿನ್ನರ್

  ಕನ್ನಡ ಕಿರುತೆರೆಯ ಜನಪ್ರಿಯ 'ಬಿಗ್ ಬಾಸ್' ಕಾರ್ಯಕ್ರಮದ ಮೊದಲನೇ ಆವೃತ್ತಿಯ ವಿನ್ನರ್ ಕೂಡ ಇದೇ ವಿಜಯ್ ರಾಘವೇಂದ್ರ.

  ನಿರ್ದೇಶನದ ಕಡೆ ಮುಖ ಮಾಡಿರುವ ವಿಜಯ್

  ನಿರ್ದೇಶನದ ಕಡೆ ಮುಖ ಮಾಡಿರುವ ವಿಜಯ್

  ಜೀ ಕನ್ನಡ ವಾಹಿನಿಯಲ್ಲಿ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ ತೀರ್ಪುಗಾರರಾಗಿರುವ ವಿಜಯ್ ರಾಘವೇಂದ್ರ 'ಕಿಸ್ಮತ್' ಎಂಬ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

  English summary
  Kannada Vijay Raghavendra has taken part in Zee Kannada Channel's popular show 'Weekend with Ramesh 3'. This article gives you an insight on Vijay Raghavendra's Achievements.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X