»   » ಫೋಟೋಗಳು: 'ಗೋಲ್ಡನ್ ಗ್ಲೋಬ್' ಪ್ರಶಸ್ತಿ ಸಮಾರಂಭದಲ್ಲಿ ಪ್ರಿಯಾಂಕ ಚೋಪ್ರಾ

ಫೋಟೋಗಳು: 'ಗೋಲ್ಡನ್ ಗ್ಲೋಬ್' ಪ್ರಶಸ್ತಿ ಸಮಾರಂಭದಲ್ಲಿ ಪ್ರಿಯಾಂಕ ಚೋಪ್ರಾ

Posted By:
Subscribe to Filmibeat Kannada

ಬಾಲಿವುಡ್‌ ನ ಜಿಂಕೆ ನಟಿ ಪ್ರಿಯಾಂಕ ಚೋಪ್ರಾ ಹಾಲಿವುಡ್‌ ಗೆ ಹಾರಿದ ನಂತರ ಹಲವು ಸುದ್ದಿ ಮಾಡಿದ್ದಾರೆ. ಅದು ನಟನೆ ವಿಚಾರದಲ್ಲಿ ಇರಬಹುದು ಹಾಗೆ ತಮ್ಮ ಸಂಭಾವನೆ ಮತ್ತು ವೇಷ-ಭೂಷಣ ವಿಚಾರದಲ್ಲಿ ಇರಬಹುದು. ಆದ್ರೆ ಈಗ ಇವೆಲ್ಲದಕ್ಕೂ ಮೀರಿದ ಆಶ್ಚರ್ಯ ವಿಷಯವೊಂದರಲ್ಲಿ ಸುದ್ದಿ ಮಾಡಿದ್ದಾರೆ. ಅದೇನು ಅಂತಿರಾ ಮುಂದೆ ಓದಿ..[ಚಿತ್ರಗಳು: 'ಕ್ವಾಂಟಿಕೋ 2'ನಲ್ಲಿ ಪ್ರಿಯಾಂಕ ಬಿಕಿನಿ ಅವತಾರ]

'ಕ್ವಾಂಟಿಕೋ' ಶೋ ದಲ್ಲಿ ಮಿಂಚಲು ಆರಂಭಿಸಿದ ನಂತರ ಜಗತ್ತಿನಾದ್ಯಂತ ಖ್ಯಾತಿ ಗಳಿಸಿರುವ ಪಿಗ್ಗಿ ಈಗ ಅಮೆರಿಕ ಚಿತ್ರರಂಗದಲ್ಲಿ ಮತ್ತು ದೂರದರ್ಶನದಲ್ಲಿ ಉತ್ತಮವಾಗಿ ಕಾಣಿಸಿಕೊಂಡವರಿಗೆ ನೀಡಲಾಗುವ 'ಗೋಲ್ಡನ್ ಗ್ಲೋಬ್ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಅದ್ಭುತವಾಗಿ ಮಿಂಚಿದ್ದಾರೆ.

ಪ್ರಶಸ್ತಿಯ ಹೆಸರನ್ನು ಪ್ರತಿನಿಧಿಸಿದ ಪ್ರಿಯಾಂಕ

74ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಸಮಾರಂಭವು ಬೆವರ್ಲಿ ಹಿಲ್ಸ್, ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಟನ್ ನಲ್ಲಿ ನೆನ್ನೆ ಯಿಂದ(ಜನವರಿ 8) ನಡೆಯುತ್ತಿದೆ. ಇಲ್ಲಿ ಅವಾರ್ಡ್ ಸ್ವೀಕರಿಸುವವರು ಒಂದು ರೀತಿಯ ಆಕರ್ಷಣೆಗೆ ಒಳಗಾದರೆ, ಪ್ರಿಯಾಂಕ ಚಿನ್ನದ ಕಾಂತೀಯ ರಾಲ್ಫ್ ಲಾರೆನ್ ಗೌನ್ ಮತ್ತು ಹೊಳೆಯುವ ವಿ ನೆಕ್‌ಲೈನ್ ಧರಿಸಿ ಪ್ರಶಸ್ತಿಯ ಹೆಸರನ್ನೇ ಪ್ರತಿನಿಧಿಸಿದ್ದಾರೆ. ಈ ಸೆರೆಮನಿಯಲ್ಲಿ ಪ್ರಿಯಾಂಕ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ನೀಡಿದರು.[ಪ್ರಿಯಾಂಕ ಚೋಪ್ರಾ ತಮ್ಮ ಮೇಕಪ್ಪ್ ಗೆ ಮಾಡೋ ಖರ್ಚೆಷ್ಟು ಗೊತ್ತಾ?]

ವಿಶ್ವಾಸಾರ್ಹ ಲುಕ್‌

ಕ್ರಿಸ್ಟಿನಾ ಎಹ್ರ್ಲಿಚ್ನ ಶೈಲಿಯ ಕೆಂಗಂದು ಬಣ್ಣದ ಲಿಪ್ಸ್ಟಿಕ್ ಸ್ಪರ್ಶದಿಂದ, ಎಲ್ಲರ ಕಣ್ಣು ಕುಕ್ಕುವಂತಹ ಫಾಶನ್ ಶೈಲಿಯಲ್ಲಿ 'ಆಸ್ಕರ್' ಮತ್ತು ಕಳೆದ ವರ್ಷ 'ಎಮ್ಮಿ' ಪ್ರಶಸ್ತಿ ನೀಡಲಾದ ರೆಡ್‌ ಕಾರ್ಪೆಟ್ ಸ್ಥಳದಲ್ಲಿ ಎಲ್ಲರ ಕಣ್ಸೆಳೆದರು.[ಕೆಂಪು ಗೌನ್ ನಲ್ಲಿ ಮಿರ-ಮಿರ ಮಿಂಚಿದ 'ಕ್ವಾಂಟಿಕೋ' ಚೆಲುವೆ ಪ್ರಿಯಾಂಕ]

ಶೀಘ್ರದಲ್ಲೇ ಬೇ ವಾಚ್‌ ನಲ್ಲಿ ಅಭಿನಯ

ಪ್ರಿಯಾಂಕ ಚೋಪ್ರಾ ಹಾಲಿವುಡ್ 'ಬೇ ವಾಚ್' ಚಿತ್ರದಲ್ಲಿ ಶೀಘ್ರದಲ್ಲೇ ನಟಿಸುತ್ತಿದ್ದಾರೆ. ಇದೇ ಕಾನ್ಫಿಡೆನ್ಸ್‌ ನಲ್ಲಿ ತಮ್ಮ ಬೆಸ್ಟ್‌ ಟರ್ನಿಂಗ್ ಲುಕ್‌ ನಲ್ಲಿ ಪ್ರಿಯಾಂಕ ಕಾಣಿಸಿಕೊಂಡಿದ್ದಾರೆ.

ಬೇ ವಾಚ್‌ ಗಾಗಿ ಈ ಲುಕ್

" ಬ್ಯಾಡ್ ಗಾಯ್ಸ್ ಏನಾದ್ರು ಫನ್ ಮಾಡಬಹುದು. #Baywatch ಅನ್ನು #GlodenGlobles ನಲ್ಲಿ ಪ್ರತಿನಿಧಿಸುತ್ತಿರುವುದು' ಎಂದು ಪ್ರಿಯಾಂಕ ಇದೇ ಲುಕ್‌ ನಲ್ಲಿ ಟ್ವೀಟ್ ಮಾಡಿದ್ದಾರೆ.

ಸೊಫೀ ಜೊತೆಗೆ ಪಿಗ್ಗಿ ಪೋಸ್

ಪ್ರಿಯಾಂಕ ಚೋಪ್ರಾ ಗೋಲ್ಡನ್ ಗ್ಲೋಬ್ ಅವಾರ್ಡ್ ಸೆರೆಮನಿಯಲ್ಲಿ ಲವಿಂಗ್ ಹಾಟೀಸ್ ಸೊಫೀ ಟರ್ನರ್ ಮತ್ತು ಬಾಯ್‌ ಜೊತೆಗೆ ಪೊಸ್ ಕೊಟ್ಟಿರುವುದು.

ಹಾಟ್ ಮತ್ತು ಕ್ಯೂಟ್ ಪಿಸಿ

ಹಾಟ್ ಮತ್ತು ಕ್ಯೂಟ್‌ ಲುಕ್‌ ನಲ್ಲಿ ಪ್ರಿಯಾಂಕ ಮತ್ತು ಜಫ್ಫೆರಿ ಡೀನ್ ಮಾರ್ಗನ್ ಕಾಣಿಸಿಕೊಂಡ ಫೋಟೋ.

ದೇಶಿ ನೋಟದಲ್ಲಿ ಪ್ರಿಯಾಂಕ

ಗೋಲ್ಡನ್ ಗ್ಲೋಬ್ ಅವಾರ್ಡ್‌ ಸೆರೆಮನಿಯಲ್ಲಿ ಮಾಧ್ಯಮಗಳು ಪ್ರಿಯಾಂಕ ಫೋಟೋ ಕ್ಲಿಕ್ಕಿಸಲು ಮುಂದಾದಾಗ ಪಿಗ್ಗಿ ಭಾರತದ ಶೈಲಿಯಲ್ಲಿ 'ನಮಸ್ಕಾರ' ಎಂದು ಪೋಸ್ ನೀಡಿದರು.

ಪತ್ರಕರ್ತ ರೊಂದಿಗೆ ಪ್ರತಿಕ್ರಿಯಿಸುವಾಗ ಪ್ರಿಯಾಂಕ

ಪ್ರಿಯಾಂಕ ಚೋಪ್ರಾ ರನ್ನು, ಪತ್ರಕರ್ತ ರೊಬ್ಬರು ಅವರೊಂದಿಗೆ ಸಂವಹನ ನಡೆಸುತ್ತಾ 'who smelled heavenly' ಎಂದು ಮತ್ತೊಬ್ಬರಿಗೆ ಪರಿಚಯಿಸುವ ಸಮಯದಲ್ಲಿ ನೀಡಿದ ಪೋಸ್.

ಅವಾರ್ಡ್‌ ಶೋ ಅಂದ್ರೆ ಇಷ್ಟಾ...

ಕ್ಯಾಮೆರಾ ಮನ್ ಒಬ್ಬರು 74ನೇ ಗೋಲ್ಡನ್ ಗ್ಲೋಬ್ ಅವಾರ್ಡ್ ಸೆರೆಮನಿಯ ಫೀಲ್ ಹೇಗಿದೆ ಎಂದು ಕೇಳಿದ್ದಕ್ಕೆ, " ಅವಾರ್ಡ್‌ ಶೋ ಗಳಂದ್ರೆ ರಿಯಲಿ ತುಂಬಾ ಇಷ್ಟಾ. ನಾಮಿನೇಟ್‌ ಆಗದಿದ್ದಾಗ ನವರ್ಸ್ ಆಗಬಹುದು. ರಿಯಲಿ ಗ್ರೇಟ್" ಎಂದು ಪ್ರಿಯಾಂಕ ಉತ್ತರಿಸಿದರು.

ಕಾರ್ಯಕ್ರಮದ ಕೇಂದ್ರ ಬಿಂದು

"ನಾನು ಈ ಕಾರ್ಯಕ್ರಮವನ್ನು ಪ್ರತಿನಿಧಿಸುತ್ತಿದ್ದೇನೆ. ಈ ಬ್ಯೂಟಿಫುಲ್ ಪ್ರತಿಮೆಯನ್ನು ನಾನು ತೆಗೆದುಕೊಳ್ಳಲೇಬೇಕು ಮತ್ತು ಈ ವರ್ಷದ ಉತ್ತಮ ಪ್ರದರ್ಶನ ನೀಡಲೇಬೇಕು, ಹ್ಯಾವ್ ಸಮ್‌ ಫನ್", ಎಂದು ಹೇಳಿದ್ದ ಪ್ರಿಯಾಂಕ, ಅದಕ್ಕೆ ತಕ್ಕಂತೆ ನೀಡಿರುವ ಪೋಸ್.

English summary
Bollywood actress Priyanka Chopra made a stunning debut on the red carpet of the 74th Golden Globe Awards in a golden glided Ralph Lauren gown with a plunging v neckline. Priyanka Chopra looked hot AF, as they gear up for Golden Globe Awards 2017.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada