»   » ಕೆಂಪು ಗೌನ್ ನಲ್ಲಿ ಮಿರ-ಮಿರ ಮಿಂಚಿದ 'ಕ್ವಾಂಟಿಕೋ' ಚೆಲುವೆ ಪ್ರಿಯಾಂಕ

ಕೆಂಪು ಗೌನ್ ನಲ್ಲಿ ಮಿರ-ಮಿರ ಮಿಂಚಿದ 'ಕ್ವಾಂಟಿಕೋ' ಚೆಲುವೆ ಪ್ರಿಯಾಂಕ

By: Sonu
Subscribe to Filmibeat Kannada

'ಕ್ವಾಂಟಿಕೋ' ಸೀರಿಯಲ್ ಮೂಲಕ ವಿಶ್ವದಾದ್ಯಂತ ಖ್ಯಾತಿ ಗಳಿಸಿರುವ ನಟಿ ಪ್ರಿಯಾಂಕ ಚೋಪ್ರಾ ಅವರು, ಮೊಟ್ಟ ಮೊದಲ ಬಾರಿಗೆ, ಹಾಲಿವುಡ್ ನ ಖ್ಯಾತ ಪ್ರಶಸ್ತಿ ಸಮಾರಂಭ 'ಎಮ್ಮಿ-ಅವಾರ್ಡ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 'ಎಮ್ಮಿ-ಪ್ರಶಸ್ತಿ ಸಮಾರಂಭ'ದ ರೆಡ್ ಕಾರ್ಪೆಟ್ ನಲ್ಲಿ ಪ್ರಿಯಾಂಕ ಅವರು ರೆಡ್ ಗೌನ್ ಹಾಕಿ ಮಿರ-ಮಿರ ಮಿಂಚುತ್ತಿದ್ದರು.

ಒಂದು ಕೈ ಇರುವ ರೆಡ್ ಔಟ್ ಫಿಟ್ ಗೌನ್ ಧರಿಸಿ, ತಮ್ಮ ಕೂದಲನ್ನು ಟೈಟ್ ಆಗಿ ಪೋನಿ ಹಾಕಿ, 68ನೇ 'ಎಮ್ಮಿ -ಪ್ರಶಸ್ತಿ ಸಮಾರಂಭ'ದ ವೇದಿಕೆಯಲ್ಲಿ ಆಕರ್ಷಕವಾಗಿ ಕಾಣಿಸುತ್ತಿದ್ದರು.[ಪ್ರಿಯಾಂಕ ಕಾಲುಗಳಿಂದ ಎಷ್ಟು ಜನಕ್ಕೆ ಉಪಯೋಗ ಇದೆ ಗೊತ್ತಾ?]

ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ, ಭಾರತೀಯ ಸಂಸ್ಕೃತಿಯಂತೆ ಎರಡೂ ಕೈ ಜೋಡಿಸಿ, ನಮಸ್ತೆ ಮಾಡುತ್ತಾ ಅವಾರ್ಡ್ ಸಮಾರಂಭಕ್ಕೆ ಮತ್ತಷ್ಟು ಮೆರುಗು ತಂದರು. ಪ್ರಿಯಾಂಕ ಚೋಪ್ರಾ ಅವರ ಆಕರ್ಷಕ ಚಿತ್ರಗಳ ಕಲೆಕ್ಷನ್ ಮುಂದೆ ಇದೆ. ಒಮ್ಮೆ ಕಣ್ಣಾಡಿಸಿ....

ನಿರಾಭರಣ ಸುಂದರಿ

ಯಾವುದೇ ಆಭರಣ ಧರಿಸದೆ, ಬರೀ ಕಿವಿಗೆ ವಜ್ರದ ಕಿವಿಯೋಲೆ ಮತ್ತು ಕೈ ಬೆರಳಿಗೆ ವಜ್ರದ ಉಂಗುರ ಧರಿಸಿದ್ದ, ನಟಿ ಪ್ರಿಯಾಂಕ ಚೋಪ್ರಾ ಅವರು ಎಲ್ಲರ ಕೇಂದ್ರ ಬಿಂದು ಆಗಿದ್ದರು.[ಸಂಭಾವನೆಯಲ್ಲಿ ದೀಪಿಕಾರನ್ನು ಹಿಂದಿಕ್ಕಿದ ಪ್ರಿಯಾಂಕ ಚೋಪ್ರಾ]

ಆಕರ್ಷಕ ಡಿಸೈನ್

ಡಿಸೈನರ್ ಜಸೂನ್ ವೂ ಡಿಸೈನ್ ಮಾಡಿದ ಕೆಂಪು ಬಣ್ಣದ ಆಕರ್ಷಕ ಗೌನ್ ನಲ್ಲಿ ಪ್ರಿಯಾಂಕ ಚೋಪ್ರಾ ಅವರು ದೇವತೆಯಂತೆ ಕಂಗೊಳಿಸುತ್ತಿದ್ದರು.[ಬರ್ತ್ ಡೇ ಸ್ಪೆಷಲ್: ಪ್ರಿಯಾಂಕ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿ]

ಮೊದಲ ಬಾರಿಗೆ ಎಮ್ಮಿ ಪ್ರಶಸ್ತಿ ಸಮಾರಂಭದಲ್ಲಿ

ಟಾಮ್ ಹಿಡಲ್ ಸ್ಟನ್-ಪ್ರಿಯಾಂಕ ಚೋಪ್ರಾ

'ಎಮ್ಮಿ ಅವಾರ್ಡ್' ಸಮಾರಂಭದಲ್ಲಿ ಹಾಲಿವುಡ್ ನ ಖ್ಯಾತ ಸ್ಟಾರ್ ಟಾಮ್ ಹಿಡಲ್ ಸ್ಟನ್ ಅವರ ಜೊತೆ ನಟಿ ಪ್ರಿಯಾಂಕ ಚೋಪ್ರಾ ಅವರು ವೇದಿಕೆ ಹಂಚಿಕೊಂಡಿದ್ದರು.[ಉಸ್ಸಪ್ಪಾ! 10 ನಿಮಿಷ ಕುಣಿಯಲು ಪ್ರಿಯಾಂಕ ಪಡೆದ ಸಂಭಾವನೆ ಇಷ್ಟಾ?]

ಪ್ರಶಸ್ತಿ ವಿತರಿಸಿದ ಪಿಗ್ಗಿ

'ದಿ ನೈಟ್ ಮ್ಯಾನೇಜರ್' ಟಿವಿ ಕಾರ್ಯಕ್ರಮದ ನಿರ್ದೇಶಕ ಸುಜೈನ್ ಬಾಯರ್ ಗೆ ಉತ್ತಮ ನಿರ್ದೇಶಕ ಎಂಬ ಪ್ರಶಸ್ತಿಯನ್ನು, ನಟಿ ಪ್ರಿಯಾಂಕ ಚೋಪ್ರಾ ಅವರು ಸಮಾರಂಭದಲ್ಲಿ ವಿತರಣೆ ಮಾಡಿದರು.

ಜಾನ್ ಸ್ನೋ ಜೊತೆ ಪಿಗ್ಗಿ ಪೋಸ್

'ಗೇಮ್ ಆಫ್ ಥ್ರೋನ್' ಖ್ಯಾತಿಯ ಕಿಟ್ ಹ್ಯಾರಿಂಗನ್ ಟನ್ ಅಲಿಯಾಸ್ ಜಾನ್ ಸ್ನೋ ಅವರ ಜೊತೆ ನಟಿ ಪ್ರಿಯಾಂಕ ಚೋಪ್ರಾ ಅವರು ಪೋಸ್ ಕೊಟ್ಟ ಪರಿ ನೋಡಿ.

'ಕ್ವಾಂಟಿಕೋ 2' ಆರಂಭ

ಈಗಾಗಲೇ 'ಕ್ವಾಂಟಿಕೋ 2' ಆರಂಭವಾಗಿದ್ದು, ನಟಿ ಪ್ರಿಯಾಂಕ ಚೋಪ್ರಾ ಅವರು 'ಕ್ವಾಂಟಿಕೋ 2' ಚಿತ್ರೀಕರಣಕ್ಕಾಗಿ ಅಮೆರಿಕದಲ್ಲಿ ಬೀಡು ಬಿಟ್ಟಿದ್ದಾರೆ.

ಸೌಂದರ್ಯಕ್ಕೆ ಹೆಚ್ಚಿನ ಒತ್ತು ಕೊಡದ ಚೋಪ್ರಾ

ಅಂದಹಾಗೆ ನಟಿ ಪ್ರಿಯಾಂಕ ಚೋಪ್ರಾ ಅವರು ತಮ್ಮ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಲ್ವಂತೆ. ಆದ್ದರಿಂದ ಅವರು ಸುಂದರಿ ಅಂತ ಯಾವತ್ತೂ ಅವರ ಮನಸ್ಸಿಗೆ ಬರಲೇ ಇಲ್ವಂತೆ.

English summary
Bollywood Actress Priyanka Chopra, in her debut appearance at the Emmy Awards, opted for an understated look as she wore a plain one-shouldered all-red chiffon gown. With her hair neatly tied in a ponytail with a side part, Priyanka impressed the fashion critics as she arrived at the 68th Emmy Awards in her Jason Wu outfit.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada