For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕ ಚೋಪ್ರಾ ತಮ್ಮ ಮೇಕಪ್ಪ್ ಗೆ ಮಾಡೋ ಖರ್ಚೆಷ್ಟು ಗೊತ್ತಾ?

  By Sonu Gowda
  |

  ಮುಂಬೈ ಮಾಯಾನಗರಿ ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ಸಾಕಷ್ಟು ಬಿಜಿ ನಟಿಯಾಗಿ ಮಿಂಚ್ತಾ ಇರೋ ನಟಿ ಪ್ರಿಯಾಂಕ ಚೋಪ್ರಾ ಅವರು, ಸದ್ಯಕ್ಕೆ ಸಂಭಾವನೆ ವಿಚಾರದಲ್ಲಿ ಮುಂದಿದ್ದಾರೆ. ಜೊತೆಗೆ ಫೋರ್ಬ್ಸ್ ಪಟ್ಟಿಗೆ ಸೇರಿದ ಮೊದಲ ಕಿರುತೆರೆ ನಟಿ ಅಂತ ಹೆಗ್ಗಳಿಕೆ ಕೂಡ ಇವರದು.

  ಹಾಲಿವುಡ್ 'ಕ್ವಾಂಟಿಕೋ' ಸೀರಿಯಲ್ ನಲ್ಲಿ ಮಿಂಚಲು ಆರಂಭಿಸಿದ ನಂತರವಂತೂ ಜಗತ್ತಿನಾದ್ಯಂತ ಖ್ಯಾತಿ ಗಳಿಸಿದ್ದಾರೆ. ಮುದ್ದಾದ ನಗು ಮುಖದ ನಟಿ ಪ್ರಿಯಾಂಕ ಗ್ಲಾಮರ್ ರೋಲ್ ಗೂ ಸೈ, ಆಕ್ಷನ್ ಪಾತ್ರಕ್ಕೂ ಸೈ ಎನ್ನುತ್ತಾರೆ.[ಚಿತ್ರಗಳು: 'ಕ್ವಾಂಟಿಕೋ 2'ನಲ್ಲಿ ಪ್ರಿಯಾಂಕ ಬಿಕಿನಿ ಅವತಾರ]

  ಇಂತಹ ಮೋಹಕ ನಟಿ ತೆರೆಯ ಮೇಲೆ ಬಂದ್ರೆ ಅವರಿಗೆ ಮನ ಸೋಲದವರು ಯಾರು ಇಲ್ಲ. ಇವರ ಆ ಸುಂದರ ಬ್ಯೂಟಿಯ ಸೀಕ್ರೆಟ್ ಇದೀಗ ಬಯಲಾಗಿದೆ. ನಟಿ ಪ್ರಿಯಾಂಕ ಚೋಪ್ರಾ ಅವರು ತೆರೆಯ ಮೇಲೆ ಅಷ್ಟೊಂದು ಸುಂದರವಾಗಿ ಕಾಣಲು, ತಮ್ಮ ಮೇಕಪ್ಪ್ ಗಾಗಿ ಎಷ್ಟು ಖರ್ಚು ಮಾಡುತ್ತಾರೆ ಗೊತ್ತಾ?.

  'ಬಾಜೀರಾವ್ ಮಸ್ತಾನಿ' ಚೆಲುವೆ ಪಿಗ್ಗಿ ತಮ್ಮ ಸೌಂದರ್ಯ ಮೆಂಟೇನ್ ಮಾಡಲು ಖರ್ಚು ಮಾಡುವ ಮೊತ್ತ ಕೇಳಿದರೆ, ಎಲ್ಲರಿಗೂ ಒಂದು ಬಾರಿ ಶಾಕ್ ಆಗೋದು ಪಕ್ಕಾ. ಮುಂದೆ ಓದಿ...

  ಅಬ್ಬಬ್ಬಾ ಇಷ್ಟೊಂದಾ?

  ಅಬ್ಬಬ್ಬಾ ಇಷ್ಟೊಂದಾ?

  ಅಂದಹಾಗೆ ನಟಿ ಪ್ರಿಯಾಂಕ ಚೋಪ್ರಾ ಅವರು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮತ್ತು ತಾವು ಮಾಡುವ ಮೇಕಪ್ಪ್ ಗೆ ಬರೋಬ್ಬರಿ 80 ಸಾವಿರ ರೂಪಾಯಿ ಖರ್ಚು ಮಾಡುತ್ತಾರಂತೆ.[ಕೆಂಪು ಗೌನ್ ನಲ್ಲಿ ಮಿರ-ಮಿರ ಮಿಂಚಿದ 'ಕ್ವಾಂಟಿಕೋ' ಚೆಲುವೆ ಪ್ರಿಯಾಂಕ]

  ಅಂತಾರಾಷ್ಟ್ರೀಯ ಗುಣಮಟ್ಟದ ವಸ್ತುಗಳು

  ಅಂತಾರಾಷ್ಟ್ರೀಯ ಗುಣಮಟ್ಟದ ವಸ್ತುಗಳು

  ಇನ್ನು ನಟಿ ಪ್ರಿಯಾಂಕ ಚೋಪ್ರಾ ಅವರು ತಮ್ಮ ಸೌಂದರ್ಯ ವರ್ಧನೆಗೆ ಅಂತಾರಾಷ್ಟ್ರೀಯ ಗುಣಮಟ್ಟದ ವಸ್ತುಗಳನ್ನು ಬಳಕೆ ಮಾಡುತ್ತಾರಂತೆ. ಅವರು ತಮ್ಮ ಕೆಲಸದ ಮೇಲೆ ಎಷ್ಟು ನಿಗಾ ವಹಿಸುತ್ತಾರೋ, ಅಷ್ಟೇ ತಮ್ಮ ಸೌಂದರ್ಯದ ಮೇಲೂ ಮುತುವರ್ಜಿ ವಹಿಸುತ್ತಾರಂತೆ.[ಸಂಭಾವನೆಯಲ್ಲಿ ದೀಪಿಕಾರನ್ನು ಹಿಂದಿಕ್ಕಿದ ಪ್ರಿಯಾಂಕ ಚೋಪ್ರಾ]

  ಬರೀ ತ್ವಚೆಯ ರಕ್ಷಣೆಗೆ ಬಳಸೋ ಖರ್ಚು

  ಬರೀ ತ್ವಚೆಯ ರಕ್ಷಣೆಗೆ ಬಳಸೋ ಖರ್ಚು

  ಇನ್ನು ಪ್ರಿಯಾಂಕ ಚೋಪ್ರಾ ಅವರು ಬರೀ ತಮ್ಮ ತ್ವಚೆಯ ರಕ್ಷಣೆಗಾಗಿಯೇ, ಪ್ರತೀ ತಿಂಗಳು ಸುಮಾರು 42 ಸಾವಿರ ರೂಪಾಯಿ ಖರ್ಚು ಮಾಡುತ್ತಾರಂತೆ.[ಪ್ರಿಯಾಂಕ ಕಾಲುಗಳಿಂದ ಎಷ್ಟು ಜನಕ್ಕೆ ಉಪಯೋಗ ಇದೆ ಗೊತ್ತಾ?]

  ಮೇಕಪ್ಪ್ ಖರ್ಚೆಷ್ಟು?

  ಮೇಕಪ್ಪ್ ಖರ್ಚೆಷ್ಟು?

  ಪಿಗ್ಗಿ ತಮ್ಮ ಮೇಕಪ್ಪ್ ಮತ್ತು ಕೂದಲಿನ ಆರೈಕೆಗೆ ಅಂತ ಪ್ರತ್ಯೇಕವಾಗಿ ಸುಮಾರು 38,400 ರೂಪಾಯಿ ಖರ್ಚನ್ನು ಮೀಸಲಿಡುತ್ತಾರಂತೆ. ಇದೆಲ್ಲಾ ಬಿಡಿ, ಯಾವ ಮಹಾ. ಇವರು ಬಳಕೆ ಮಾಡೋ ಸುಗಂಧ ದ್ರವ್ಯ (ಪರ್ ಫ್ಯೂಮ್) ದ ಬೆಲೆ ಕೇಳಿದ್ರೆ ತಲೆ ತಿರುಗಿ ಬೀಳ್ತೀರಾ. ಇವರ ಸುಗಂಧ ದ್ರವ್ಯದ ಮೊತ್ತ ಸುಮಾರು 13 ಸಾವಿರ ರೂಪಾಯಿಯಂತೆ.

  English summary
  Gorgeous actress Priyanka Chopra is spending a huge sum on maintaining her good looks. According to a report in a daily, Priyanka Chopra spends approximately Rs 80,000 per month on her skin-care and makeup products alone.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X