»   » ಚಿತ್ರಗಳು: 'ಕ್ವಾಂಟಿಕೋ 2'ನಲ್ಲಿ ಪ್ರಿಯಾಂಕ ಬಿಕಿನಿ ಅವತಾರ

ಚಿತ್ರಗಳು: 'ಕ್ವಾಂಟಿಕೋ 2'ನಲ್ಲಿ ಪ್ರಿಯಾಂಕ ಬಿಕಿನಿ ಅವತಾರ

By: Sony
Subscribe to Filmibeat Kannada

ಬಾಲಿವುಡ್ ನ ಜಿಂಕೆ ಪ್ರಿಯಾಂಕ ಹಾಲಿವುಡ್ ಗೆ ಹಾರಿದ ಮೇಲೆ ಸಾಕಷ್ಟು ಸುದ್ದಿ ಮಾಡಿದ್ದಾರೆ. ಸಂಭಾವನೆ ವಿಚಾರದಲ್ಲಿ ಇರಬಹುದು, ತಮ್ಮ ವೇಷ-ಭೂಷಣ ಸೇರಿದಂತೆ ಎಲ್ಲದರಲ್ಲೂ ಪ್ರಿಯಾಂಕ ಆಗಾಗ ಸುದ್ದಿ ಮಾಡುತ್ತಿರುತ್ತಾರೆ.

ಹಾಲಿವುಡ್ ನ 'ಕ್ವಾಂಟಿಕೋ' ಧಾರಾವಾಹಿ ಮೂಲಕ ಹಾಲಿವುಡ್ ರಂಗದಲ್ಲಿ ಸಾಕಷ್ಟು ಸುದ್ದಿ ಮಾಡಿದ ನಟಿ ಪ್ರಿಯಾಂಕ ಚೋಪ್ರಾ ಅವರು, ಮೊದಲ ಭಾಗವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಮಾತ್ರವಲ್ಲದೇ ಧಾರಾವಾಹಿಯ ಜೊತೆಗೆ 'ಬೇವಾಚ್' ಚಿತ್ರವನ್ನು ಕೂಡ ಮುಗಿಸಿಕೊಟ್ಟಿದ್ದಾರೆ.[ಸಂಭಾವನೆಯಲ್ಲಿ ದೀಪಿಕಾರನ್ನು ಹಿಂದಿಕ್ಕಿದ ಪ್ರಿಯಾಂಕ ಚೋಪ್ರಾ]

ಇದೀಗ 'ಕ್ವಾಂಟಿಕೋ 2' ನಲ್ಲಿ ಬಿಜಿಯಾಗಿರುವ ನಟಿ ಪ್ರಿಯಾಂಕ ಚೋಪ್ರಾ ಅವರ ತರ-ತರದ ಫೋಟೋಗಳು ಆನ್ ಲೈನ್ ನಲ್ಲಿ ವೈರಲ್ ಆಗಿದೆ. ಸಖತ್ ಹಾಟ್ ಅಂಡ್ ಬೋಲ್ಡ್ ಲುಕ್ ನಲ್ಲಿ ಪಿಗ್ಗಿ ಮಿಂಚಿದ್ದು, ಅವರ ಬಿಕಿನಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮುಂದೆ ಓದಿ...

ಬಿಕಿನಿಯಲ್ಲಿ ಪ್ರಿಯಾಂಕ ಚೋಪ್ರಾ

'ಬಾಜೀರಾವ್ ಮಸ್ತಾನಿ' ಚಿತ್ರದಲ್ಲಿ ಕಾಶೀ ಭಾಯಿ ಪಾತ್ರ ಮಾಡಿದ್ದ ನಟಿ ಪ್ರಿಯಾಂಕ ಚೋಪ್ರಾ ಅವರು 'ಕ್ವಾಂಟಿಕೋ 2' ನಲ್ಲಿ ಮಸ್ತ್ ಹಾಟ್ ಆಗಿ ಕಾಣಿಸಿಕೊಂಡಿದ್ದನ್ನು, ಕಂಡು ಅಭಿಮಾನಿಗಳು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.[ಕೆಂಪು ಗೌನ್ ನಲ್ಲಿ ಮಿರ-ಮಿರ ಮಿಂಚಿದ 'ಕ್ವಾಂಟಿಕೋ' ಚೆಲುವೆ ಪ್ರಿಯಾಂಕ]

'ಬ್ರಾ' ಅಂದ್ರೆ ನಾಚಿಕೊಳ್ಳುತ್ತಿದ್ದ ಪಿಗ್ಗಿ ಬಿಕಿನಿಯಲ್ಲಿ

'ಬ್ರಾ' ಅಂದ್ರೆ ಅದು ಒಳ ಉಡುಪು, ಅದು ಒಳಗಿದ್ದರೆ ಸರಿ. ಅದನ್ನು ಹೊರಗಡೆ ಪ್ರದರ್ಶನ ಮಾಡೋದು ಸರಿಯಲ್ಲ, ಹಾಗೆ-ಹೀಗೆ ಅಂತ ಭಾಷಣ ಬಿಗಿದು ಮೂಗು ಮುರಿದಿದ್ದ ನಟಿ ಪ್ರಿಯಾಂಕ ಚೋಪ್ರಾ ಅವರು 'ಕ್ವಾಂಟಿಕೋ 2' ನಲ್ಲಿ ಮಾತ್ರ ಯದ್ವಾ-ತದ್ವಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.[ಪ್ರಿಯಾಂಕ ಕಾಲುಗಳಿಂದ ಎಷ್ಟು ಜನಕ್ಕೆ ಉಪಯೋಗ ಇದೆ ಗೊತ್ತಾ?]

'ಕ್ವಾಂಟಿಕೋ 2' ಪ್ರೀಮಿಯರ್ ಮುಗಿದಿದೆ

ಸದ್ಯಕ್ಕೆ 'ಕ್ವಾಂಟಿಕೋ 2' ಪ್ರೀಮಿಯರ್ ಶೋ ಮುಗಿದಿದೆ. ಸೀರಿಯಲ್ ನ ಮೊದಲ ಎಪಿಸೋಡ್ ನಲ್ಲಿಯೇ ನಟಿ ಪ್ರಿಯಾಂಕ ಅವರು ಇಷ್ಟು ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಅಂದ್ರೆ, ಮುಂದೆ ಹೇಗಿರಬಹುದು ಅಂತ ಅಭಿಮಾನಿಗಳು ಈಗಿನಿಂದಲೇ ಲೆಕ್ಕಾಚಾರ ಹಾಕುತ್ತಿದ್ದಾರೆ.['ಬೇವಾಚ್' ಕಂಪ್ಲೀಟ್ ಆದ ಖುಷಿಯಲ್ಲಿ ಪ್ರಿಯಾಂಕ ಲಿಪ್ ಲಾಕ್ ಮಾಡಿದ್ರಾ?]

ಸ್ಟಾರ್ ವರ್ಲ್ಡ್ ನಲ್ಲಿ ವೀಕ್ಷಿಸಿ

'ಕ್ವಾಂಟಿಕೋ 2' ಪ್ರೀಮಿಯರ್ ಶೋ ಈಗಾಗಲೇ ಸ್ಟಾರ್ ವರ್ಲ್ಡ್ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗಿದ್ದು, ಈ ಬಾರಿ ನಟಿ ಪ್ರಿಯಾಂಕ ಅವರು, ರಹಸ್ಯ ಏಜೆಂಟ್ ಪಾತ್ರದಲ್ಲಿ ಮಿಂಚಿದ್ದಾರೆ. ಮುಂದಿನ ಕಂತುಗಳನ್ನು ನೋಡಲು ಸ್ಟಾರ್ ವರ್ಲ್ಡ್ ವಾಹಿನಿ ನೋಡಿ.

English summary
The first episode saw the 'Bajirao Mastani' Actress Priyanka Chopra in a Bikini avatar and with new actors on the show.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada