ಅಲ್ಲು ಅರ್ಜುನ್ ಜೊತೆ ನಟಿಸುವಾಸೆ 'ಆಲೂ'ಗೆ!

'ಪುಷ್ಪ' ಸಿನಿಮಾ ಮೂಲಕ ನಟ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರ ಸ್ಟಾರ್ ಗಿರಿ ದುಪ್ಪಟ್ಟು ಹೆಚ್ಚಾಗಿದೆ. ಬಾಲಿವುಡ್ ನಿರ್ಮಾಪಕರು ಸಹ ಅಲ್ಲು ಅರ್ಜುನ್ ಜೊತೆ ಕೆಲಸ ಮಾಡಲು ಸಾಲುಗಟ್ಟುತ್ತಿದ್ದಾರೆ.

ಕೇವಲ ನಿರ್ಮಾಪಕರು ಮಾತ್ರವಲ್ಲ ಬಾಲಿವುಡ್‌ನ ಚೆಂದದ ಗೊಂಬೆಗಳು ಸಹ ಅಲ್ಲು ಅರ್ಜುನ್‌ಗೆ ನಾಯಕಿಯರಾಗಲು ತುದಿಗಾಲಲ್ಲಿ ನಿಂತಿದ್ದಾರೆ.

ಅಚ್ಚರಿ: ರಹಸ್ಯವಾಗಿ ಮದುವೆ ಆಗಿದ್ದಾರಂತೆ ಆಲಿಯಾ, ರಣ್ಬೀರ್!
ಈಗಾಗಲೇ 'RRR' ಸಿನಿಮಾದಲ್ಲಿ ನಟಿಸಿರುವ ಬಾಲಿವುಡ್ ನಟಿ ಆಲಿಯಾ ಭಟ್ ದಕ್ಷಿಣ ಭಾರತ ಸಿನಿಮಾಕರ್ಮಿಗಳ ಶ್ರದ್ಧೆ, ಸಿನಿಮಾ ಪ್ರೀತಿಗೆ ಮಾರು ಹೋಗಿದ್ದಾರೆ. ಜೂ ಎನ್‌ಟಿಆರ್, ರಾಮ್ ಚರಣ್ ತೇಜ ಜೊತೆ ನಟಿಸಿರುವ ಆಲಿಯಾ ಭಟ್ ತಮಗೆ ಅಲ್ಲು ಅರ್ಜುನ್ ಜೊತೆ ನಟಿಸುವ ಆಸೆಯಿದೆಯೆಂದು ಹೇಳಿಕೊಂಡಿದ್ದಾರೆ.

Alia Bhatt Said She Is Waiting To Work With Allu Arjun
ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದ ಪ್ರಚಾರದಲ್ಲಿ ನಟಿ ಬ್ಯುಸಿಯಾಗಿದ್ದು ಪ್ರಚಾರ ಕಾರ್ಯಕ್ರಮವೊಂದರಲ್ಲಿ ತೆಲುಗು ಚಿತ್ರರಂಗದ ಬಗ್ಗೆಯೂ ಮಾತನಾಡಿದ್ದಾರೆ.

''ನಾನು ಹಾಗೂ ನನ್ನ ಪೂರ್ಣ ಕುಟುಂಬ 'ಪುಷ್ಪ' ಸಿನಿಮಾ ನೋಡಿದೆವು. ನಾವು ಅಲ್ಲು ಅರ್ಜುನ್ ಅಭಿಮಾನಿ ಆಗಿಬಿಟ್ಟಿದ್ದೇವೆ. ನನ್ನನ್ನು ಮನೆಯಲ್ಲಿ ಪ್ರೀತಿಯಿಂದ 'ಆಲೂ' (ಆಲೂಗಡ್ಡೆ) ಎಂದು ಕರೆಯುತ್ತಾರೆ. ಅವರೆಲ್ಲ ಕೇಳುತ್ತಿದ್ದಾರೆ 'ಆಲೂ ನೀನು ಯಾವಾಗ ಅಲ್ಲು ಅರ್ಜುನ್ ಜೊತೆ ನಟಿಸುತ್ತೀಯ' ಎಂದು'' ಎಂದಿದ್ದಾರೆ ನಟಿ ಆಲಿಯಾ ಭಟ್.

ವಿವಾದದಲ್ಲಿ ಆಲಿಯಾ ಭಟ್‌ರ 'ಗಂಗೂಬಾಯಿ ಕಾಠಿಯಾವಾಡಿ'
''ನಾನಂತೂ ಅಲ್ಲು ಅರ್ಜುನ್ ಜೊತೆ ನಟಿಸಲು ಉತ್ಸುಕಳಾಗಿದ್ದೇನೆ. ಅಂಥಹಾ ಅವಕಾಶವೇನಾದರೂ ದೊರೆಯಿತೆಂದರೆ ಖಂಡಿತ ಎರಡೂ ಕೈ ಬಾಚಿ ಅವಕಾಶವನ್ನು ತಬ್ಬಿಕೊಳ್ಳುತ್ತೇನೆ'' ಎಂದಿದ್ದಾರೆ ಆಲಿಯಾ ಭಟ್.

Alia Bhatt Said She Is Waiting To Work With Allu Arjun
ಆಲಿಯಾ ಭಟ್ ನಟನೆಯ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ಇದೇ ತಿಂಗಳು 25 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೇಲರ್ ಈಗಾಲಗೇ ಬಿಡುಗಡೆ ಆಗಿದ್ದು, ಆಲಿಯಾರ ನಟನೆಗೆ ಹಲವು ವಾವ್ ಎಂದಿದ್ದಾರೆ. ಸಿನಿಮಾದಲ್ಲಿ ಮುಂಬೈನ ಕಾಮಾಠಿಪುರದ ಮಾಲಕಿಯಂತಿದ್ದ ಗಂಗೂಬಾಯಿಯ ಪಾತ್ರದಲ್ಲಿ ಆಲಿಯಾ ಭಟ್ ನಟಿಸಿದ್ದಾರೆ. ಸಿನಿಮಾದ ವಿಶೇಷ ಪಾತ್ರವೊಂದರಲ್ಲಿ ಅಜಯ್ ದೇವಗನ್ ಸಹ ಇದ್ದಾರೆ.

ಆಲಿಯಾ ಜೊತೆ ಪುರುಷರ ಶೌಚಾಲಯಕ್ಕೆ ನುಗ್ಗಿದ್ದ ವಿಷಯ ಹಂಚಿಕೊಂಡ ದೀಪಿಕಾ ಪಡುಕೋಣೆ!
ಇನ್ನು ಆಲಿಯಾ ಭಟ್ ನಟಿಸಿರುವ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಚ್ 25 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಜೂ ಎನ್‌ಟಿಆರ್, ರಾಮ್ ಚರಣ್ ತೇಜ, ಅಜಯ್ ದೇವಗನ್, ಶ್ರೆಯಾ ಶಿರಿನ್ ನಟಿಸಿದ್ದಾರೆ. ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡಿದ್ದು ಸಿನಿಮಾದ ಬಗ್ಗೆ ಬಹುದೊಡ್ಡ ನಿರೀಕ್ಷೆ ಇದೆ.

ಇವುಗಳ ಹೊರತಾಗಿ ಆಲಿಯಾ ಭಟ್ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಆಲಿಯಾರ ಭಾವಿ ಪತಿ ರಣ್ಬೀರ್ ಕಪೂರ್ ನಾಯಕ. ಅಮಿತಾಬ್ ಬಚ್ಚನ್ ಸಹ ಇದ್ದಾರೆ. ಬಳಿಕ ಸಲ್ಮಾನ್ ಜೊತೆ 'ಇನ್‌ಶಾ ಅಲ್ಹಾ', 'ಆಶಿಕಿ 3', ಫರ್ಹಾನ್ ಅಖ್ತರ್ ನಿರ್ದೇಶನದ 'ಜೀ ಲೇ ಝರಾ' ಸಿನಿಮಾದಲ್ಲಿ ನಟಿಸಲಿದ್ದಾರೆ. 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ', 'ಡಾರ್ಲಿಂಗ್ಸ್' ಸಿನಿಮಾಗಳಲ್ಲಿ ಸಹ ಆಲಿಯಾ ನಟಿಸಲಿದ್ದಾರೆ.

More from Filmibeat

English summary
Actress Alia Bhatt said she and her family watches Allu Arjun's Puhspa movie and they became fan of Allu Arjun. She wants to act with Allu Arjun.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X