»   » ಕರೀನಾ ಕಪೂರ್ ಮಗನ ಈ ಎಕ್ಸ್ ಪ್ರೆಶನ್ ಗೆ ಎಷ್ಟು ಮಾರ್ಕ್ಸ್ ಕೊಡ್ತೀರ?

ಕರೀನಾ ಕಪೂರ್ ಮಗನ ಈ ಎಕ್ಸ್ ಪ್ರೆಶನ್ ಗೆ ಎಷ್ಟು ಮಾರ್ಕ್ಸ್ ಕೊಡ್ತೀರ?

Posted By:
Subscribe to Filmibeat Kannada

ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ದಂಪತಿಯ ಮುದ್ದಾದ ಮಗ ತೈಮೂರ್ ಅಲಿ ಖಾನ್. ತೈಮೂರ್ ಹುಟ್ಟಿದಾಗಲೇ ವಿವಾದ ಎನ್ನುವುದು ಅವನ ಬೆನ್ನು ಬಿದ್ದಿತ್ತು. ತೈಮೂರ್ ಎಂಬ ಹೆಸರಿಟ್ಟಾಗ ಹಲವು ಮಾನವ ಜೀವಿಗಳು ತೈಮೂರ್ ಗೆ ಶಾಪವಿಟ್ಟಿದ್ದರು. ಆದ್ರೀಗ, 5 ತಿಂಗಳ ತೈಮೂರ್ ಅಲಿ ಖಾನ್ ಎಲ್ಲರ ಫೇವರೇಟ್ ಆಗುತ್ತಿದ್ದಾನೆ.[ಸೈಫ್-ಕರೀನಾ ಮಗನಿಗೆ 'ತೈಮೂರ್' ಎಂದು ಹೆಸರು: ಭುಗಿಲೆದ್ದ ವಿವಾದ]

ಖಾಸಗಿ ಕಾರ್ಯಕ್ರಮಗಳಲ್ಲಿ ಕರೀನಾ ಕಪೂರ್ ಕಾಣಿಸಿಕೊಂಡು ಎಲ್ಲರ ಕಣ್ಣು ಕುಕ್ಕುತ್ತಿದ್ದರು. ಆದ್ರೆ, ಇನ್ಮುಂದೆ ಕರೀನಾ ಕಪೂರ್ ಗಿಂತ ಅವರ ಮಗ ತೈಮೂರ್ ಗೆ ಹೆಚ್ಚು ಅಭಿಮಾನಿಗಳಾದ್ರು ಅಚ್ಚರಿಯಿಲ್ಲ.[ಫೋಟೋ ನೋಡಿ: ಮಗು ತೈಮುರ್ ಜೊತೆ 'ಅಮ್ಮ' ಕರೀನಾ]

Kareena Kapoor Khan’s Son Facial Expressions

ಬಾಲಿವುಡ್ ತುಂಬಾ ತೈಮೂರ್ ಅವರ ಈ ಒಂದು ಸ್ಪೆಷಲ್ ಫೋಟೋ ವೈರಲ್ ಆಗಿದೆ. ಇತ್ತಿಚೇಗಷ್ಟೇ ಬಾಲಿವುಡ್ ನಟ ಹಾಗೂ ನಿರ್ಮಾಪಕ ತುಷಾರ್ ಕಪೂರ್ ಅವರ ಮಗನ ಹುಟ್ಟುಹಬ್ಬಕ್ಕೆ ಕರೀನಾ ಕಪೂರ್ ಮತ್ತು ತೈಮೂರ್ ಇಬ್ಬರು ಹೋಗಿದ್ದರು. ಈ ವೇಳೆ ತೈಮೂರ್ ಕೊಟ್ಟಿರುವ ಸ್ಮೈಲಿ ಎಕ್ಸ್ ಪ್ರೆಶನ್ ಈಗ ಟಾಕ್ ಆಫ್ ದಿ ಟೌನ್ ಆಗಿದೆ.[ಸೈಫ್-ಕರೀನಾ ಮಗ 'ತೈಮೂರ್' ಭವಿಷ್ಯದಲ್ಲಿ ಏನಾಗಬೇಕಂತೆ ಗೊತ್ತಾ?]

Kareena Kapoor Khan’s Son Facial Expressions

ಕರೀನಾ ಕಪೂರ್ ಅವರು ಕೂಡ ಚಿಕ್ಕವಯಸ್ಸಿನಲ್ಲಿ ಇದೇ ರೀತಿ ಎಕ್ಸ್ ಪ್ರೆಶನ್ಸ್ ಕೊಡುತ್ತಿದ್ದರಂತೆ. ಹೀಗಾಗಿ, ಕರೀನಾ ಅವರ ಚಿಕ್ಕ ವಯಸ್ಸಿನ ಫೋಟೋ ಮತ್ತು ಕರೀನಾ ಕಪೂರ್ ಅವರ ಮಗನ ಫೋಟೋ ಎರಡು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ ಆಗುತ್ತಿದೆ. ಹಾಗಾದ್ರೆ, ಕರೀನಾ ಕಪೂರ್ ಅವರ ಈ ಕ್ಯೂಟೆಸ್ಟ್ ಫೋಟೋಗೆ ನೀವು ಎಷ್ಟು ಮಾರ್ಕ್ಸ್ ಕೊಡ್ತೀರಾ.......?

English summary
Kareena Kapoor Khan’s son Taimur Ali Khan is gifted with his mom’s facial expressions. See these photos to believe

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada