For Quick Alerts
  ALLOW NOTIFICATIONS  
  For Daily Alerts

  ಸೈಫ್-ಕರೀನಾ ಮಗನಿಗೆ 'ತೈಮೂರ್' ಎಂದು ಹೆಸರು: ಭುಗಿಲೆದ್ದ ವಿವಾದ

  By Bharath Kumar
  |

  ಬಾಲಿವುಡ್ ಸ್ಟೈಲೀಶ್ ದಂಪತಿ ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ ಪುತ್ರೋತ್ಸವದ ಸಂಭ್ರಮದಲ್ಲಿದ್ದಾರೆ. ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ಕರೀನಾ ಕಪೂರ್, ಮಗನಿಗೆ 'ತೈಮೂರ್' ಎಂದು ನಾಮಕರಣ ಕೂಡ ಮಾಡಿದ್ದಾರೆ. ಆದ್ರೆ, ಈ ಹೆಸರು ಈಗ ದೊಡ್ಡ ವಿವಾದವನ್ನೆ ಸೃಷ್ಟಿಸಿದೆ.[ ಸೈಫ್ ಅಲಿ ಖಾನ್-ಕರೀನಾ ದಂಪತಿಗೆ ಗಂಡು ಮಗು ]

  ಡಿಸೆಂಬರ್ 20 ರಂದು ಜನನವಾದ ಮಗುವಿಗೆ 'ತೈಮೂರ್' ಎಂದು ಹೆಸರಿಟ್ಟಿದ್ದಕ್ಕೆ, ಟ್ವಿಟ್ಟರ್ ನಲ್ಲಿ ಭಾರಿ ವಿವಾದ ಹುಟ್ಟಿಕೊಂಡಿದೆ. ಇದರ ಪರಿಣಾಮ, ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ ವಿರುದ್ಧ ಟೀಕಾ ಪ್ರಹಾರವೇ ನಡಯುತ್ತಿದ್ದು, ನವಜಾತ ಶಿಶುವಿಗೆ ಹಿಡಿಶಾಪ ಹಾಕುತ್ತಿದ್ದಾರೆ.

  'ತೈಮೂರ್' ಎಂದು ಹೆಸರಿಟ್ಟದ್ದೇ ವಿವಾದ !

  'ತೈಮೂರ್' ಎಂದು ಹೆಸರಿಟ್ಟದ್ದೇ ವಿವಾದ !

  ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ ಅವರ ಮಗನಿಗೆ 'ತೈಮೂರ್' ಎಂದು ಹೆಸರಿಟ್ಟಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವಿವಾದವನ್ನ ಹುಟ್ಟುಹಾಕಿದೆ. ಇದರ ಪರಿಣಾಮ ಬಾಲಿವುಡ್ ಸ್ಟಾರ್ ದಂಪತಿಗಳ ವಿರುದ್ಧ ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.[ಫೋಟೋ ನೋಡಿ: ಮಗು ತೈಮುರ್ ಜೊತೆ 'ಅಮ್ಮ' ಕರೀನಾ]

  ಸೈಫ್ ಪುತ್ರನಿಗೆ ದಾಳಿಕೋರನ ಹೆಸರು!

  ಸೈಫ್ ಪುತ್ರನಿಗೆ ದಾಳಿಕೋರನ ಹೆಸರು!

  'ತೈಮೂರ್' ಎಂಬುದು ಭಾರತ ದೇಶದ ಮೇಲೆ ದಾಳಿ ಮಾಡಿದ್ದ ದಾಳಿಕೋರನ ಹೆಸರು ಎಂಬುದು ಈ ಎಲ್ಲ ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ದೇಶದ ಮೇಲೆ ದಂಡೆತ್ತಿ ಬಂದವನ ಹೆಸರನ್ನ ತಮ್ಮ ಮಗನಿಗೆ ಇಟ್ಟಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

  ಟ್ವಿಟ್ಟರ್ ನಲ್ಲಿ 'ತೈಮೂರ್' ಗೆ ಶಾಪ

  ಟ್ವಿಟ್ಟರ್ ನಲ್ಲಿ 'ತೈಮೂರ್' ಗೆ ಶಾಪ

  ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ ಮಗನಿಗೆ ತೈಮೂರ್ ಎಂದು ಹೆಸರಿಟ್ಟಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೈಮೂರ್ ಗೆ ಶಾಪ ಹಾಕುತ್ತಿದ್ದಾರೆ. ಕೆಲವರು 'ಮತ್ತೊಬ್ಬ ಭಯೋತ್ಪಾದಕ ಹುಟ್ಟಿದ', ಈ ಹೆಸರಿನಿಂದ ಅನರ್ಥವಾಗುತ್ತಿದೆ, ಕ್ಯಾನ್ಸರ್ ಬರಲಿ, ಸಾವು ಬರಲಿ, ಎಂದು ಅನೇಕರು ಸೈಫ್ ಪುತ್ರನಿಗೆ ಶಾಪ ಹಾಕುತ್ತಿದ್ದಾರೆ.

  'ತೈಮೂರ್' ಯಾರು?

  'ತೈಮೂರ್' ಯಾರು?

  'ತೈಮೂರ್' ಮಧ್ಯಏಷ್ಯಾದವನು. ವಿಪರೀತ ರಣೋತ್ಸಾಹಿ. ಇಡೀ ಜಗತ್ತನ್ನೇ ಜಯಸಿಬೇಕೆಂಬ ಮಹಾದಾಸೆ ಹೊಂದಿದ್ದ. 14ನೇ ಶತಮಾನದಲ್ಲಿ ಭಾರತದ ಮೇಲೆ ದಂಡೆತ್ತಿ ಬಂದಿದ್ದ. ಆಗ ದಿಲ್ಲಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಭಾರತೀಯರನ್ನ ನರಮೇಧ ನಡೆಸಿದ್ದ. ಭಾರತದ ಇತಿಹಾಸಲ್ಲೇ ಇದು ಅತಿ ದೊಡ್ಡ ಮಾರಣಕಾಂಡವಾಗಿದೆ. ಈ ದಾಳಿಯಲ್ಲಿ ಲೆಕ್ಕಕ್ಕೆ ಸಿಗದಷ್ಟು ಹಣ, ಬಂಗಾರ, ರತ್ನ, ಬೆಳ್ಳಿ, ವಜ್ರ, ವೈಢೂರ್ಯಗಳನ್ನ ಲೂಟಿ ಮಾಡಿದ್ದನೆಂದು ಇತಿಹಾಸಕಾರರು ಹೇಳುತ್ತಾರೆ.

  ಬಾಲಿವುಡ್ ಸ್ಟಾರ್ ಗಳು ಸಮರ್ಥನೆ

  ಬಾಲಿವುಡ್ ಸ್ಟಾರ್ ಗಳು ಸಮರ್ಥನೆ

  ತಮ್ಮ ಮಗುವಿಗೆ ಯಾವ ಹೆಸರಿಡಬೇಕೆಂಬುದು ಆ ಮಗುವಿನ ಪೋಷಕರ ಇಚ್ಚೆ ಹಾಗೂ ಹಕ್ಕು ಎಂದು ಹೇಳುತ್ತಿರುವ ಬಾಲಿವುಡ್ ಸ್ಟಾರ್ ಗಳು ಕರೀನಾ ಕಪೂರಾ ಹಾಗೂ ಸೈಫ್ ಅಲಿ ಅವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

  ಕ್ಲಾಸ್ ತೆಗೆದುಕೊಂಡ ರಿಷಿ ಕಪೂರ್

  ಕ್ಲಾಸ್ ತೆಗೆದುಕೊಂಡ ರಿಷಿ ಕಪೂರ್

  ''ಹೆತ್ತವರೇ ತಮ್ಮ ಮಗುವಿಗೆ ಆ ಹೆಸರಿಡಲು ಬಯಸಿದ್ದರೆ ಜನರೇಕೆ ಅಷ್ಟೊಂದು ತೆಲೆ ಕೆಡಿಸಿಕೊಳ್ಳುತ್ತಿದ್ದಾರೆ? ಮಗವಿನ ನಾಮಕರಣ ನಿಮಗೆ ಸಂಬಂಧಿಸಿದ್ದಲ್ಲ. ಅದು ಹೆತ್ತವರ ಇಷ್ಟ. ದಯವಿಟ್ಟು ನಿಮ್ಮ ಕೆಲವನ್ನು ನೋಡಿಕೊಳ್ಳಿ. ಅಲೆಕ್ಸಾಂಡರ್ ಮತ್ತು ಸಿಂಕದರ್ ಸಂತರಾಗಿರಲಿಲ್ಲ. ಈ ಹೆಸರುಗಳು ವಿಶ್ವದಲ್ಲಿ ಸಾಮಾನ್ಯ ಹೆಸರುಗಳಾಗಿವೆ. ನೀವು ನಿಮ್ಮ ಕೆಲಸವನ್ನು ಮಾಡಿ....ನಿಮಗೇನು ತೊಂದರೆ?'' ಎಂದು ಟೀಕಾಕಾರರನ್ನು ಪ್ರಶ್ನಿಸಿದ್ದಾರೆ.

  ಪರ-ವಿರೋಧ ಚರ್ಚೆಗಳು

  ಪರ-ವಿರೋಧ ಚರ್ಚೆಗಳು

  ಸೈಪ್ ಪುತ್ರನ ಹೆಸರಿನಿಂದ ಇಷ್ಟೆಲ್ಲಾ ವಿವಾದವಾಗುತ್ತಿರುವುದು ಈಗ ದೇಶದಲ್ಲೆಡೆ ಚರ್ಚೆಯಾಗುತ್ತಿದೆ. ಹಿಟ್ಲರ್, ಸ್ಟಾಲೀನ್, ದಾವೋದ್, ರಾಜನ್ ಹೀಗೆ ಜನರನ್ನ ಹಿಂಸಿಸಿದ್ದ ಹಲವರು ಹೆಸರುಗಳನ್ನ ಅನೇಕರು ಮಕ್ಕಳಿಗೆ ಇಟ್ಟಿದ್ದಾರೆ. ಆದ್ರೆ, ಈ ವಿಷ್ಯವನ್ನ ಯಾಕೆ ಇಷ್ಟು ದೊಡ್ಡ ವಿವಾದವಾಗುತ್ತಿದೆ ಎಂಬುದನ್ನ ಹಲವರು ಸಮರ್ಥಿಸಿಕೊಳ್ಳುತ್ತಿದ್ದಾರೆ.

  English summary
  Bollywood Celebrity couple Kareena Kapoor and Saif Ali Khan welcomed a baby boy they've named Taimur Ali Khan. Their choice of name, however, is being looked at askance by some on social media. Twitter has assumed that the littlest Khan has been called Taimur in honour of Timur or Tamarlane, the Central Asian invader who sacked Delhi in 1398.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X