»   » ಭಾಲ್ಕಿ ಬತ್ತಳಿಕೆಯ ಹೊಸ ಹೂ ಬಾಣ 'ಶಮಿತಾಬ್'

ಭಾಲ್ಕಿ ಬತ್ತಳಿಕೆಯ ಹೊಸ ಹೂ ಬಾಣ 'ಶಮಿತಾಬ್'

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಜೊತೆ ನಟಿಸುವುದೇ ಯೋಗ ಅಂಥದ್ದರಲ್ಲಿ ಅವರ ಸರಿಸಾಟಿಯಾಗಿ ಅವರದ್ದೇ ಪಾತ್ರವನ್ನು ನಿರ್ವಹಿಸುವ ಅವಕಾಶ ಸಿಕ್ಕರೆ ಸ್ವರ್ಗಕ್ಕೆ ಮೂರೇ ಗೇಣು. ರಜನಿಕಾಂತ್ ಅಳಿಯ ಧನುಷ್ ಕೂಡಾ ಈಗ ಇದೇ ಗುಂಗಿನಲ್ಲಿದ್ದಾರೆ.

ಆರ್ ಭಾಲ್ಕಿ ನಿರ್ದೇಶನದ ಶಮಿತಾಬ್ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಅಭಿಮಾನಿಗಳು ಬಿಟ್ಟ ಕಣ್ಣು ಬಿಟ್ಟಂತೆ ನೋಡುವಂತಿದೆ. ಕಮಲ್ ಹಾಸನ್ ಮಗಳು ಅಕ್ಷರಾ ಮೊದಲ ಚಿತ್ರದಲ್ಲೇ ಮುದ್ದಾಗಿ ಕಾಣುತ್ತಾರೆ. ಧನುಷ್ ಸ್ಟೈಲ್ ಬಗ್ಗೆ ಹೇಳಬೇಕಾಗಿಲ್ಲ ದಕ್ಷಿಣ ಭಾರತೀಯರಿಗೆಲ್ಲ ಚಿರಪರಿಚಿತ.[ವಿಮರ್ಶೆ: ಸಿನಿಮಾ ಸ್ಟಾರ್ ಆಗೋ ಹುಚ್ಚರಿಗೆ]

ಭಾಲ್ಕಿ ಚಿತ್ರವೆಂದರೆ ಅಮಿತಾಬ್ ಗೆ ವಿಭಿನ್ನ ಪಾತ್ರ ಗ್ಯಾರಂಟಿ, ಪಾ, ಚೀನ್ ಕಮ್ ಚಿತ್ರದಲ್ಲಿ ಅಮಿತಾಬ್ ಗೆ ಸವಾಲಾಗುವ ಪಾತ್ರಗಳು ಸೃಷ್ಟಿಯಾಗಿದ್ದವು. ಈಗ ಇದೇ ರೀತಿ shAMITABH ನಲ್ಲೂ ಮೇಕಪ್ ಆರ್ಟಿಸ್ಟ್ ಗಳಿಗೆ ಹೆಚ್ಚಿನ ಕೆಲ್ಸ ಸಿಕ್ಕಿದೆ. [ರಾಂಝಾನಾ ವಿಮರ್ಶೆ: ಪ್ರೇಮಿಗಳಿಗೆ ಸಿನಿರಸಿಕರಿಗೆ]

Dhanush+Amitabh Is Shamitabh

ಪ್ರಸಾಧನ ವಿಭಾಗದ ದೀಪಕ್ ಸಾವಂತ್ ರನ್ನಂತೂ ಬಿಗ್ ಬಿ ಹಾಡಿ ಹೊಗಳುತ್ತಾರೆ. ತಮ್ಮ ಬಿಳಿ ಗಡ್ಡ ನೀವಿಕೊಳ್ಳುತ್ತಾ ಎಂದಿನ ಗಡಕ್ ಲುಕ್ ಕೊಟ್ಟಿದ್ದಾರೆ.

ಟ್ರೇಲರ್ ಹೇಗಿದೆ: ಚಿತ್ರದ ಕಥೆ ಬಗ್ಗೆ ಹೆಚ್ಚಿನ ಸುಳಿವು ನೀಡದ ಎರಡು ನಿಮಿಷದ ಟ್ರೇಲರ್ ಜೊತೆ ಆಡಿಯೋ ಟ್ರೈಲರ್ ಕೂಡಾ ಚಿತ್ರತಂಡ ಪರಿಚಯಿಸಿದೆ.

Shamitabh ಹೆಸರು ಹೇಗೆ ಬಂತು ಎಂದು ಕೇಳಿದರೆ, DhanuSH ಹಾಗೂ Amitabh ರೀಮಿಕ್ಸ್ ಎನ್ನುತ್ತಾರೆ ಭಾಲ್ಕಿ, It's not picture, it's mixture ಎನ್ನುವ ಅಮಿತಾಬ್ ನಾನು ಸ್ಕಾಚ್ (ವಿಸ್ಕಿ) ಅವನು ಪಾನಿ ಎರಡು ಇಲ್ಲದೆ ಕುಡಿತ ಸಾಧ್ಯವಿಲ್ಲ ಎಂದು ಭರ್ಜರಿ ಡೈಲಾಗ್ ಹೊಡೆಯುತ್ತಾರೆ. ಇದರ ಜೊತೆಗೆ ಈಗಾಗಲೇ ಅಮಿತಾಬ್ ಹಾಡಿರುವ ಹಾಡು ಹಿಟ್ ಆಗಿದೆ. ['ಹೆಬ್ಬುಲಿ'ಯಲ್ಲಿ ಅಮಿತಾಬ್ ಬಚ್ಚನ್]

ಇಳಯರಾಜ ಸಂಗೀತ ನಿರ್ದೇಶನವಿರುವ ಶಮಿತಾಬ್ ಚಿತ್ರ ಫೆ.6, 2015ರಂದು ಬಿಡುಗಡೆಯಾಗಲಿದೆ. ಪಾ, ಚೀನಿ ಕಮ್ ನಂತೆ ಈ ಚಿತ್ರ ಕೂಡಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಹಾಕಿದೆ.

English summary
Megastar Amitabh Bachchan unveiled the trailer of R. Balki's Shamitabh in the presence of the entire star cast of the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada