For Quick Alerts
ALLOW NOTIFICATIONS  
For Daily Alerts

ಶಮಿತಾಬ್ ವಿಮರ್ಶೆ: ಸಿನಿಮಾ ಸ್ಟಾರ್ ಆಗೋ ಹುಚ್ಚರಿಗೆ!

By ಜೇಮ್ಸ್ ಮಾರ್ಟಿನ್
|

ಶಮಿತಾಬ್ ಎಂದರೆ ಏನು ಎಂಬುದು ಈಗಾಗಲೇ ಟ್ರೈಲರ್ ನೋಡಿದವರಿಗೆಲ್ಲ ತಿಳಿದಿದೆ. ಅಮಿತಾಬ್ ಹಾಗೂ ಧನುಷ್ ಇಬ್ಬರೂ ಚಿತ್ರರಂಗದಲ್ಲಿ ಸ್ಟಾರ್ ಆಗುವ ಕನಸು ಹೊತ್ತವರೇ, ಅಕ್ಷರಾ ಹಾಸನ್ ಸಹಾಯಕ ನಿರ್ದೇಶಕಿಯಾಗಿ ವೃತ್ತಿ ಕಂಡುಕೊಂಡವರು. ಎಲ್ಲರ ಕನಸು ಚಿತ್ರರಂಗದ ಮಾಯಾ ಲೋಕದಲ್ಲಿ ಹೇಗೆ ರೂಪುಗೊಳ್ಳುತ್ತದೆ. ಸಿನಿಮಾ ಸ್ಟಾರ್ ಆಗುವ ಹುಚ್ಚರಿಗೆ ಈ ಚಿತ್ರ ಹೇಳಿ ಮಾಡಿಸಿದಂತಿದೆ.

ಶರೀರ+ ಶಾರೀರದ ಕಾಂಬಿನೇಷನ್ ಗೆ ಹೇಗೆ ಅಕ್ಷರಾ ವಿನ್ಯಾಸ ನೀಡುತ್ತಾರೆ ಎಂಬುದನ್ನು ಭಾಲ್ಕಿ ಸುಂದರವಾಗಿ ತೆರೆಗೆ ತಂದಿದ್ದಾರೆ. ಪಾ, ಚೀನಿ ಕಮ್ ನಂತೆ ಈ ಚಿತ್ರ ಕೂಡಾ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಅದಕ್ಕೆ ತಕ್ಕಂತೆ ಚಿತ್ರವೂ ಮೂಡಿ ಬಂದಿದೆ. [ಭಾಲ್ಕಿ ಬತ್ತಳಿಕೆಯ ಹೊಸ ಹೂ ಬಾಣ 'ಶಮಿತಾಬ್']

ಕುಡಿತದ ಚಟದಿಂದ ಹೊರಬರಲಾಗದ ಅಮಿತಾಬ್ ಸಿನ್ಹಾ ನಟನಾಗಬೇಕೆಂಬ ಕನಸು, ದಾನಿಷ್ ಎಂಬ ಮೂಗ ಸಣ್ಣ ನಗರಿಯಿಂದ ಮುಂಬೈ ಮಾಯಾನಗರಿಗೆ ಬಂದು ಸೂಪರ್ ಸ್ಟಾರ್ ಆಗುವ ಹೆಬ್ಬಯಕೆ ಹೊಂದಿರುತ್ತದೆ.

ಒಬ್ಬರ ನೂನ್ಯತೆಗೆ ಮತ್ತೊಬ್ಬರ ಆಸರೆ ಬೇಕಾಗುತ್ತದೆ. ಇಬ್ಬರನ್ನು ಒಟ್ಟುಗೂಡಿಸಿ ಫಿನ್ಲೆಂಡಿನಿಂದ ತಾಂತ್ರಿಕ ನೆರವು ಪಡೆದುಕೊಂಡ ಅಕ್ಷರಾ ಇಬ್ಬರ ಪ್ರತಿಭೆಯನ್ನು ಅನಾವರಣಗೊಳಿಸುವ ಕಥೆ ಅದ್ಭುತವಾಗಿ ಮೂಡಿ ಬಂದಿದೆ.

ತಾಂತ್ರಿಕವಾಗಿ ಶ್ರೀಮಂತವಾದ ಶಮಿತಾಬ್

ತಾಂತ್ರಿಕವಾಗಿ ಶ್ರೀಮಂತವಾದ ಶಮಿತಾಬ್

ಶಮಿತಾಬ್ ಚಿತ್ರದಲ್ಲಿ ಅಮಿತಾಬ್, ಧನುಷ್ ಜೊತೆಗೆ ಮೊದಲ ಚಿತ್ರದಲ್ಲೇ ಅಕ್ಷರಾ ಎಲ್ಲರ ಗಮನ ಸೆಳೆಯುತ್ತಾರೆ. ತಾಂತ್ರಿಕತೆಯಲ್ಲಿ ಚಿತ್ರ ಶ್ರೀಮಂತವಾಗಿದ್ದು, ಇಬ್ಬರು ನಟರ ನಡುವಿನ ಸ್ಪರ್ಧೆ, ಪೈಪೋಟಿ ಸ್ವಲ್ಪ ಎಳೆದಂತೆ ತೋರುತ್ತದೆ. ಪಾ ಚಿತ್ರದಂತೆ ಈ ಚಿತ್ರವೂ ಸ್ವಲ್ಪ ನಿಧಾನಗತಿ ಎನಿಸುವುದು ಬಿಟ್ಟರೆ ಚಿತ್ರ ನೋಡಲಡ್ಡಿಯಿಲ್ಲ. ಇಳಯರಾಜ ಅವರ ಸಂಗೀತ ಚಿತ್ರದ ಮುಖ್ಯಾಂಶಗಳಲ್ಲಿ ಒಂದೆನಿಸಿದೆ.

ಎನ್ ಡಿಟಿವಿ : ಕಥೆ, ತಾಂತ್ರಿಕತೆ, ನಟನೆಗಾಗಿ ನೋಡಿ

ಎನ್ ಡಿಟಿವಿ : ಕಥೆ, ತಾಂತ್ರಿಕತೆ, ನಟನೆಗಾಗಿ ನೋಡಿ

ಭಾಲ್ಕಿ ಕಥೆ, ಇಳಯರಾಜ ಸಂಗೀತ, ಪಿಸಿ ಶ್ರೀರಾಮ್ ಛಾಯಾಗ್ರಹಣ, ಧನುಷ್- ಅಮಿತಾಬ್-ಅಕ್ಷರಾ ನಟನೆ ಚಿತ್ರವನ್ನು ನೋಡುವಂತೆ ಮಾಡಿದೆ. ಚಿತ್ರಕಥೆ ಸ್ವಲ್ಪ ಎಡಿಟ್ ಮಾಡಬಹುದಿತ್ತು. ಅಮಿತಾಬ್ ರಿಗೆ ಹೆಚ್ಚಿನ ಆದ್ಯತೆ ನೀಡಿದಂತೆ ತೋರಿದರೂ ಚಿತ್ರ ಓಡಲು ಅದೇ ಮುಖ್ಯವಾಗುತ್ತದೆ.

ವುಡ್ಡಿ ಅಲೆನ್ ಚಿತ್ರ ನೆನಪಾಗುತ್ತದೆ: ರಿಡೀಫ್.ಕಾಂ

ವುಡ್ಡಿ ಅಲೆನ್ ಚಿತ್ರ ನೆನಪಾಗುತ್ತದೆ: ರಿಡೀಫ್.ಕಾಂ

ವುಡ್ಡಿ ಅಲೆನ್ ರ ಹಾಲಿವುಡ್ ಎಂಡಿಂಗ್ ಚಿತ್ರದಲ್ಲಿ ಅಂಧನೊಬ್ಬ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಉಳಿಯುವುದನ್ನು ಕಂಡಂತೆ ಇಲ್ಲಿ ಇಬ್ಬರು ನಟರ ಹೇರಾಪೇರಿ ಕಂಡು ಬರುತ್ತದೆ. ಅದರೆ, ಇದೇ ಚಿತ್ರದ ಹೈಲೇಟ್ ಹಾಗೂ ಮೈನಸ್ ಪಾಯಿಂಟ್ ಆಗಿದೆ. ಪ್ರತಿ ಜೋಕಿಗೂ ಸಮರ್ಥನೆ ನೀಡಬೇಕೆಂಬ ನಿರ್ದೇಶಕರ ಹಠ ಚಿತ್ರವನ್ನು ಎಳೆದಾಡಿದಂತೆ ಕಾಣುತ್ತದೆ.

ಶಮಿತಾಬ್ ಗೆ 4/5, ಇಂಡಿಯಾ ಟುಡೇ

ಶಮಿತಾಬ್ ಗೆ 4/5, ಇಂಡಿಯಾ ಟುಡೇ

"Ye awaaz to ek kutte ke mu se bhi achi lagegi" ಎಂಬ ಡೈಲಾಗ್ ಜೊತೆಗೆ ದನಿಯ ಪವರ್ ನಟನೆ ಕಿಕ್ ಸೇರಿಕೊಂಡು ಪ್ರೇಕ್ಷಕರಿಗೆ ಮೆಚ್ಚುಗೆ ಮೂಡಿಸುತ್ತದೆ. ಚಿತ್ರದ ಅವಧಿ ಇಪ್ಪತ್ತು ನಿಮಿಷಕ್ಕಿಂತ ಇನ್ನೂ ಹೆಚ್ಚಾಗಿದ್ದರೆ ನೋಡಲು ಸಾಧ್ಯವಿರುತ್ತಿರಲಿಲ್ಲ. ಇಳಯರಾಜ, ಪಿಸಿ ಶ್ರೀರಾಮ್ ಸೇರಿದಂತೆ ಭಾಲ್ಕಿ ಅವರ ತಾಂತ್ರಿಕ ತಂಡ ಮತ್ತೊಮ್ಮೆ ಚಿತ್ರವನ್ನು ಶ್ರೀಮಂತವಾಗಿಸಿದೆ- ರೋಹಿತ್ ಖಿಲ್ನಾನಿ

ಬಾಲಿವುಡ್ ಲೈಫ್ : 4/5

ಬಾಲಿವುಡ್ ಲೈಫ್ : 4/5

ಈ ಚಿತ್ರದಲ್ಲಿ ನೆಗಟಿವ್ ಅಂಶ ಹುಡುಕುವುದು ಸ್ವಲ್ಪ ಕಷ್ಟ, ಚಿತ್ರದ ಮೊದಲ ಐದು ನಿಮಿಷದಲ್ಲಿ ಶಮಿತಾಬ್ ಹೊಗಳಿಕೆ ಹಾಗೂ ಕ್ಲೈಮ್ಯಾಕ್ಸ್ ಚಿತ್ರದಲ್ಲಿ ಅಚ್ಚರಿ ಹಾಗೂ ಬೇಡವಾದ ಅಂಶ ಎನಿಸುತ್ತದೆ. ಉಳಿದಂತೆ ಭಾಲ್ಕಿ ಮತ್ತೊಮ್ಮೆ ಹಿಂದಿ ಚಿತ್ರರಂಗಕ್ಕೆ ಉತ್ತಮ ಚಿತ್ರ ನೀಡಿದ್ದಾರೆ.ಬಿಗ್ ಬಿ ಹಾಗೂ ಧನುಷ್ ಉತ್ತಮ ನಟನೆಯನ್ನು ನೋಡಿ ಮಿಸ್ ಮಾಡಬೇಡಿ.

English summary
Shamitabh movie is about that dark side of film industry that exposes the jealousy of the actors or their greed for stardom. Now we are not saying it contains real life stories, but a side of the film industry that we are not aware of.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more