For Quick Alerts
  ALLOW NOTIFICATIONS  
  For Daily Alerts

  ರಾಂಝಾನಾ ವಿಮರ್ಶೆ: ಪ್ರೇಮಿಗಳಿಗೆ ಸಿನಿರಸಿಕರಿಗೆ

  By Mahesh
  |

  ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್ ಅವರಿಗೆ ಹಿಂದಿ ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ ದೊರೆತಿದೆ. ರಾಝಾಂನಾ ಚಿತ್ರದಲ್ಲಿನ ಧನುಷ್ ನಟನೆಗೆ ಎಲ್ಲರೂ ಬಹು ಪರಾಕ್ ಹೇಳಿದ್ದಾರೆ. ಕಾಲಿವುಡ್ ನಲ್ಲಿ ವಿಚಿತ್ರ, ವಿಶಿಷ್ಟ, ವಿಕ್ಷಿಪ್ತ ಪಾತ್ರಗಳನ್ನು ಮಾಡುವ ಮೂಲಕ ಜನಮನ, ವಿಮರ್ಶಕರನ್ನು ಮೆಚ್ಚಿಸಿದ್ದ ಧನುಷ್ ಅವರು ಈಗ ಬಾಲಿವುಡ್ ನಲ್ಲೂ ತಮ್ಮ ಕಮಾಲ್ ತೋರಿಸಿದ್ದಾರೆ.

  ಆನಂದ್ ರೈ ನಿರ್ದೇಶನದ ರಾಂಝಾನಾ ಚಿತ್ರ ಪ್ರೇಮಕತೆಯಾದರೂ ಅದರ ಹಿಂದೆ ನೋವಿದೆ. ಪ್ರೇಮಿಗಳಿಗೆ, ಸಿನಿ ರಸಿಕರಿಗೆ ಈ ಚಿತ್ರ ಎಲ್ಲವನ್ನೂ ನೀಡುತ್ತದೆ.ಹದಿಹರೆಯ ಪ್ರೇಮದ ಹಲವು ಮಜಲುಗಳನ್ನು ತೆರೆದಿಡುತ್ತಾ ಪ್ರಬುದ್ಧತೆ ಕಡೆಗೆ ತಿರುಗುವ ಪ್ರೇಮ ಕಥೆ ಅನೇಕರಿಗೆ ಅನೇಕ ಕಾರಣಕ್ಕೆ ಇಷ್ಟವಾಗಿದೆ.

  ಲವರ್ ಬಾಯ್ ಪಾತ್ರದಲ್ಲಿ ಧನುಷ್ ಪಾತ್ರದೊಳಗೆ ಹೊಕ್ಕಿದ್ದಾರೆ. ಸೋನಮ್ ಕಪೂರ್ ಹಾಗೂ ಧನುಷ್ ಜೋಡಿ, ಅಭಯ್ ಡಿಯೋಲ್, ಸ್ವರ್ಣ ಭಾಸ್ಕರ್ ಸೇರಿದಂತೆ ಎಲ್ಲರಿಗೂ ನಿರ್ದೇಶಕ ಆನಂದ್ ಉತ್ತಮ ಕೆಲಸ ತೆಗೆದಿದ್ದಾರೆ. ವಿಮರ್ಶಕರ ಮೆಚ್ಚುಗೆ ಗಳಿಸಿ ಮುನ್ನುಗ್ಗುತ್ತಿರುವ ಪ್ರೇಮ ಚಿತ್ರ ರಾಂಝಾನಾ ಚಿತ್ರದ ವಿಮರ್ಶೆಗಳ ಒಂದಷ್ಟು ಸಂಗ್ರಹ ಇಲ್ಲಿದೆ.

  ಚಿತ್ರದ ಕಥೆ ಏನು?

  ಚಿತ್ರದ ಕಥೆ ಏನು?

  ಕುಂದನ್(ಧನುಷ್) ಗೆ ಜೋಯಾ(ಸೋನಮ್ ಕಪೂರ್) ಕಂಡರೆ ಸಕತ್ ಇಷ್ಟ. ಆಕೆಗೆ ಇಷ್ಟವಾದದ್ದು ಮಾಡುವುದೇ ಇವನ ಕೆಲಸ, ಮುಂದಿನ ಓದಿಗಾಗಿ ವಾರಣಸಿ ಬಿಟ್ಟು ದೆಹಲಿ ತೆರಳಿದ ಜೋಯಾಗೆ ಅಕ್ರಮ್/ಜಸ್ಪ್ರೀತ್(ಅಭಯ್ ಡಿಯೋಲ್) ಪರಿಚಯವಾಗುತ್ತದೆ. ಇದೇ ಪ್ರಣಯಕ್ಕೆ ನಾಂದಿ ಹಾಡುತ್ತದೆ.

  ಇತ್ತ ಜೋಯಾಳಿಗಾಗಿ ಅಮರ ಪ್ರೇಮಿ ಕುಂದನ್ ಕಾಯುತ್ತಿರುತ್ತಾನೆ. ಜೋಯಾ ಬರುತ್ತಾಳೆ ಆದರೆ, ದೆಹಲಿ ಗೆಳೆಯ ಅಕ್ರಮ್ ಜೊತೆಗಿನ ಪ್ರೇಮಕತೆಯನ್ನು ಕುಂದನ್ ಹತ್ತಿರ ಹಂಚಿಕೊಳ್ಳುತ್ತಾಳೆ. ಭಗ್ನಪ್ರೇಮಿಯಾಗಿ ಕುಂದನ್ ಮುಂದೇನು ಮಾಡುತ್ತಾನೆ. ಕಥೆ ನಿರೂಪಣೆ ಹೇಗಿದೆ ಎಂಬುದನ್ನು ತೆರೆಯ ಮೇಲೆ ನೋಡಿ ಆನಂದಿಸಿ

  ಒನ್ ಇಂಡಿಯಾ ವಿಮರ್ಶೆ

  ಒನ್ ಇಂಡಿಯಾ ವಿಮರ್ಶೆ

  ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ತಮಿಳಿನ ಸ್ಟಾರ್ ನಟ ಧನುಷ್ ಅವರು ಸ್ಟಾರ್ ಗಿರಿ ಇಲ್ಲದೆ ಪ್ರಬುದ್ಧ ನಟನೆ ನೀಡಿದ್ದಾರೆ. ಹಿಂದಿ ಉಚ್ಚಾರಣೆ, ಪೆದ್ದುತನ, ಭಗ್ನಪ್ರೇಮಿಯಾಗಿ ನಟನೆ ಎಲ್ಲವೂ ಪ್ಲಸ್ ಪಾಯಿಂಟ್, ಚಿತ್ರದ ಹಾಡು, ಲೋಕೇಷನ್, ಪಾತ್ರಗಳ ಬಳಕೆ, ಸೋನಮ್ ಕಪೂರ್ ನಗು ಪ್ರೇಕ್ಷಕರನ್ನು ಹಲವು ದಿನ ಕಾಡುವಂತೆ ಮಾಡುವಲ್ಲಿ ನಿರ್ದೇಶಕ ಆನಂದ್ ರೈ ಯಶಸ್ವಿಯಾಗಿದ್ದಾರೆ.

  ಬಾಲಿವುಡ್ ಹಂಗಾಮ- ತರಣ್ ಆದರ್ಶ್

  ಬಾಲಿವುಡ್ ಹಂಗಾಮ- ತರಣ್ ಆದರ್ಶ್

  ಧನುಷ್ ಚಿತ್ರದ ಜೀವಾಳ ಎಂದರೆ ತಪ್ಪಾಗಲಾರದು. ಪ್ರೇಮಿಗಾಗಿ ಹಂಬಲಿಸುವಿಕೆ, ಆ ಮುಗ್ಧತೆ ಚೆನ್ನಾಗಿ ಮೈಗೂಡಿಸಿಕೊಂಡು ಪಾತ್ರಕ್ಕೆ ಜೀವ ತುಂಬಿದ್ದಾರೆ.

  ಚಿತ್ರಮಂದಿರದಿಂದ ಹೊರ ಬಿದ್ದರೂ ಧನುಷ್ ನಿಮ್ಮ ನೆನಪು ಕಾಡುತ್ತಾರೆ. ಗ್ಲಾಮರ್ ಗಿಂತ, ಹೀರೋಯಿಸಂಗಿಂತ ಪಾತ್ರ ಅಭಿನಯ ಮುಖ್ಯ ಎಂಬುದನ್ನು ಧನುಷ್ ಸಾಬೀತುಪಡಿಸಿದ್ದಾರೆ.
  ರೀಡಿಫ್ -ಸುಕನ್ಯಾ ವರ್ಮ

  ರೀಡಿಫ್ -ಸುಕನ್ಯಾ ವರ್ಮ

  ಸೋನಮ್ ಹಾಗೂ ಧನುಷ್ ನಡುವಿನ ವಿಚಿತ್ರ ಕೆಮಿಸ್ಟ್ರಿ ಜನರನ್ನು ತಲುಪುವಂತೆ ನಿರ್ದೇಶಕ ಮಾಡಿದ್ದಾರೆ. ಚಿತ್ರಕ್ಕೆ ಸಂಗೀತ ಆತ್ಮವಾದರೆ, ಧನುಷ್ ಹೃದಯ ಬಡಿತವಾಗಿದ್ದಾರೆ. ಪ್ರೇಮಿಗಳಿಗೆ ಈ ಚಿತ್ರ ಕಾಡುವ ಚಿತ್ರವಾಗಿ ಮನಸ್ಸಲ್ಲಿ ಉಳಿಯುತ್ತದೆ.

  ಸೋನಮ್ ಹಾಗೂ ಧನುಷ್ ಇಬ್ಬರ ನಡುವೆ ಯಾವುದೇ ಹೊಂದಾಣಿಕೆ ಇಲ್ಲದೆಯೂ ಅಪೂರ್ವ ಜೋಡಿಯ ರೀತಿ ಕಥೆಯನ್ನು ಬೆಳೆಸಿಕೊಂಡು ಹೋಗಿರುವ ರೀತಿ ಅನನ್ಯ

  ಡಿಎನ್ ಎ -ತುಷಾರ್ ಜೋಶಿ

  ಡಿಎನ್ ಎ -ತುಷಾರ್ ಜೋಶಿ

  ಧನುಷ್ ನೋಡಲು ಬೆಳ್ಳಗಿಲ್ಲ, ತೆಳ್ಳಗೆ ಮೈಕಟ್ಟು, ಒಳ್ಳೆ ಆಕರ್ಷಕ ದೇಹವಿಲ್ಲ, ಅದರೂ ನಟನೆ, ಮುಗ್ಧ ನಗುವಿನ ಮೂಲಕ ಎಲ್ಲಾ ಸ್ಟಾರ್ ಗಳನ್ನು ನಿವಾಳಿಸುವ ಸಾಮರ್ಥ್ಯ ಹೊಂದಿದ್ದಾರೆ.

  ಚಿತ್ರದ ಒನ್ ಲೈನರ್ಸ್, ಸೋನಮ್- ಧನುಷ್ ಜಗಳ, ಸೂಪರ್ ಸ್ಟಾರ್ ರಜನಿ ಅಳಿಯ ಎಂಬ ಪ್ರಭಾವ ಇಲ್ಲದೆ ಧನುಷ್ ಕಾಣಿಸಿಕೊಳ್ಳುವ ರೀತಿ ಎಲ್ಲವೂ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಕೆಲವೊಂದು ದೃಶ್ಯಗಳನ್ನು ಹಿಗ್ಗಿಸಿದ್ದು ಬಿಟ್ಟರೆ ಚಿತ್ರ ಕುಟುಂಬ ಸಮೇತ ನೋಡಲು ಅಡ್ಡಿಯಿಲ್ಲ.
  ಡೆಕ್ಕನ್ ಹೆರಾಲ್ಡ್- ಸುಭಾಶ್ ಜಾ

  ಡೆಕ್ಕನ್ ಹೆರಾಲ್ಡ್- ಸುಭಾಶ್ ಜಾ

  ಆನಂದ್ ರೈ ಅವರ ಪ್ರೇಮ ಕಥಾ ಪ್ರಯೋಗ ಕ್ಲಿಕ್ ಆಗಿದೆ. ಧನುಷ್ ಪಾತ್ರ ಹಲವು ದಿನಗಳ ಕಾಲ ನಿಮ್ಮನ್ನು ಕಾಡಲಿದೆ. ಸೋನಮ್ ಹಾಗೂ ಧನುಷ್ ಪ್ರೀತಿ ಅಂಕುರವಾಗುವುದು ಅಥವಾ ಧನುಷ್ ತನ್ನ ಪ್ರೀತಿಯನ್ನು ಬೆಳೆಸಿಕೊಳ್ಳುವುದು ಹಾಗೂ ಅದನ್ನು ಉಳಿಸಿಕೊಳ್ಳುವುದು ಎಲ್ಲವೂ ಅದ್ಭುತವಾಗಿ ಚಿತ್ರಿತವಾಗಿದೆ.

  ಎನ್ ಡಿಟಿವಿ-ಸೈಬಲ್ ಚಟರ್ಜಿ

  ಎನ್ ಡಿಟಿವಿ-ಸೈಬಲ್ ಚಟರ್ಜಿ

  ಧನುಷ್ ಹಾಗೂ ಸೋನಮ್ ಕಪೂರ್ ಅವರ ಕಾಂಬಿನೇಷನ್ ಕ್ಲಿಕ್ ಆಗಿದೆ. ಧನುಷ್ ಅವರ ಪಾತ್ರ ಪೋಷಣೆ ಹಾಗೂ ಕಥೆ ನಿರೂಪಣೆ ಅನನ್ಯವಾಗಿದ್ದು, ಎಲ್ಲರೂ ನೋಡಲೇಬೇಕಾದ ಚಿತ್ರವಾಗಿದೆ.

  ಜೀ ನ್ಯೂಸ್ -ರೇಷಂ ಸೆಂಗಾರ್

  ಜೀ ನ್ಯೂಸ್ -ರೇಷಂ ಸೆಂಗಾರ್

  ಧನುಷ್ ಅವರು ಇದ್ದಷ್ಟು ಕಾಲ ಬೆಳ್ಳಿ ಪರದೆ ಝಗಮಗ. ಬಾಲಿವುಡ್ ಹೀರೋಗಳು ಎಂದು ಕರೆಯಲ್ಪಡುವ ನಟರ ಅಭಿನಯಕ್ಕೆ ಸವಾಲು ಎಸೆದಿರುವ ಧನುಷ್ ಅವರ ಚಿತ್ರರಂಗದ ಪಾದಾರ್ಪಣೆ ಸೂಕ್ತ ರೀತಿಯಲ್ಲಿ ಆಗಿದೆ. ರಾಂಝಾನ ನಿಮ್ಮ ಮನೋಲ್ಲಾಸದಾಯಕ ಚಿತ್ರ

  ಇಂಡಿಯನ್ ಎಕ್ಸ್ ಪ್ರೆಸ್-ಶುಭ್ರ ಗುಪ್ತಾ

  ಇಂಡಿಯನ್ ಎಕ್ಸ್ ಪ್ರೆಸ್-ಶುಭ್ರ ಗುಪ್ತಾ

  ಧನುಷ್ ತುಂಟಾಟ, ಸೋನಮ್ ಚೆಲ್ಲಾಟ, ಪ್ರೇಕ್ಷಕರಿಗೆ ರಸದೂಟ, ಆನಂದ್ ರೈ ಚಿತ್ರದಲ್ಲಿ ಕೊಲವರಿ ಡಿ ಸ್ಟಾರ್ ನ ಮತ್ತೊಂದು ಮಜಲು ಅನಾವರಣಗೊಂಡಿದೆ. ಈ ಚಿತ್ರ ಇನ್ನೊಂದು ಅಮರ ಪ್ರೇಮ ಕಥಾನಕವಾಗಿ ಬಾಲಿವುಡ್ ಚರಿತ್ರೆ ಸೇರಲಿದೆ.

  ಡೆಕ್ಕನ್ ಕ್ರೋನಿಕಲ್- ಖಾಲಿದ್ ಮೊಹಮ್ಮದ್

  ಡೆಕ್ಕನ್ ಕ್ರೋನಿಕಲ್- ಖಾಲಿದ್ ಮೊಹಮ್ಮದ್

  ವಿವಿಧ ವಯೋಮಾನಕ್ಕೆ ತಕ್ಕಂತೆ ಪಾತ್ರದ ಭಾವಾಭಿನಯ, ದುಃಖ ಸುಖ ನೋವು ಎಲ್ಲವನ್ನು ಸೂಕ್ತವಾಗಿ ಅಭಿವ್ಯಕ್ತಿಸುವುದು ತುಂಬಾ ಕಷ್ಟ. ಈ ವಿಷಯದಲ್ಲಿ ಧನುಷ್ ಗೆದ್ದಿದ್ದಾರೆ. ಸೋನಮ್ ಕಪೂರ್ ಅಭಿನಯದಲ್ಲಿ ಪಳಗಿದ್ದಾರೆ. ಆನಂದ್ ನಿರೂಪಣೆಗೆ ಜೈ

  ಫಸ್ಟ್ ಪೋಸ್ಟ್ _ಪಿಯಾಶ್ರೀ ದಾಸ್ ಗುಪ್ತಾ

  ಫಸ್ಟ್ ಪೋಸ್ಟ್ _ಪಿಯಾಶ್ರೀ ದಾಸ್ ಗುಪ್ತಾ

  15 ವರ್ಷದ ಟೀನೇಜ್ ಲವ್ ನಿಂದ ಪ್ರಬುದ್ಧತೆ ತನಕ ಸಾಗುವ ಪ್ರೇಮಿಯ ಪಾತ್ರದಲ್ಲಿ ಧನುಷ್ ಅವರು ಪಾತ್ರದಲ್ಲಿ ತಲ್ಲೀನರಾಗಿದ್ದಾರೆ. ಅವರ ಗ್ರಾಮೀಣ ಹುಡುಗನ ಲುಕ್ ಪಾತ್ರಕ್ಕೆ ಹೊಂದಿಕೊಂಡಿದೆ. ನಟನೆಗಿಂತ ನೈಜತೆ ಈ ಚಿತ್ರದಲ್ಲಿ ಎದ್ದು ಕಾಣುತ್ತದೆ. ಈಗಾಗಿ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ.

  English summary
  Dhanush has got a dream Bollywood debut in Raanjhanaa as his performance has been praised to heavens by audience and critics. The Tamil star has been overwhelmingly welcomed by cine goers and he has become the talk of the town in Hindi film industry. We are bringing you what critics' review says about Dhanush

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X