Celebs » Atul Kulkarni » Biography
ಜೀವನಚರಿತ್ರೆ
ಅತುಲ್ ಕುಲಕರ್ಣಿ ಕನ್ನಡ, ಹಿಂದಿ, ಮರಾಠಿ, ತೆಲುಗು, ತಮಿಳು, ಇಂಗ್ಲೀಷ್, ಭಾಷೆಗಳ ನಟರಾಗಿದ್ದಾರೆ. ಇವರು  10 ಸೆಪ್ಟೆಂಬರ್ 1965 ರಲ್ಲಿ ಬೆಳಗಾವಿಯಲ್ಲಿ ಜನಿಸಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸೋಲಾಪೂರ್ ನಲ್ಲಿ ಮುಗಿಸಿದ್ದಾರೆ.

ಬೆಳವಾವಿಯಲ್ಲಿರುವ  ಜೂನೀಯರ್ ಕಾಲೇಜ್ ನಲ್ಲಿ ಕಾಲೇಜು ವ್ಯಾಸಂಗವನ್ನು ಮುಗಿಸಿರುವ ಇವರು ಸೊಲಾಪೂರದ ಡಿ.ಎ.ವಿ ಕಾಲೇಜ್ ನಲ್ಲಿ ಇಂಗ್ಲೀಷ್ ನಲ್ಲಿ  ಪದವಿಯನ್ನು ಪಡೆದುಕೊಂಡಿದ್ದಾರೆ. ನವದೆಹಲಿಯಲ್ಲಿ ಉನ್ನತ ಶಿಕ್ಷಣ ವ್ಯಾಸಾಂಗ ಮಾಡುವುದುರ ಜೊತೆಗೆ ಚಿತ್ರರಂಗದ ಕಡೆ ಆಸಕ್ತಿಯನ್ನು ಬೆಳೆಸಿಕೊಂಡರು. ನಂತರ ಇವರು ಗೀತಾಂಜಲಿ ಎನ್ನುವರನ್ನು ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ.

ಇವರು ಹಿಂದಿ, ಮರಾಠಿ, ತಲುಗು, ಮಲಯಾಳಂ, ಕನ್ನಡ ಹೀಗೆ ಹಲವು ಭಾಷೆಗಳಲ್ಲಿ ಸಹಾಯಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.  ಆ ದಿನಗಳು ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada