ಚೈತ್ರಾ ಹಳ್ಳಿಕೇರಿ
ಚೈತ್ರಾ ಹಳ್ಳಿಕೇರಿ ಜೀವನಚರಿತ್ರೆ
ಚೈತ್ರಾ ಹಳ್ಳಿಕೆರೆ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಹೆಸರುವಾಸಿಯಾಗಿದ್ದಾರೆ. ಮೂಲತಃ ರಂಗಭೂಮಿ ಕಲಾವಿದೆಯಾಗಿದ್ದ ಇವರು, ನಂತರ ಮಾಡೆಲಿಂಗ್ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು.
ಒಳ್ಳೆ-ಒಳ್ಳೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾಗಲೇ, ಮದುವೆಯಾದ ಕಾರಣ ಸಿನಿಮಾ ರಂಗದಿಂದ ದೂರವಾದರು. ನಂತರ ಮದುವೆಯಲ್ಲಿ ಸಮಸ್ಯೆಗಳು ಕಾಣಿಸಿಕೊಂಡಾಗ, ಪತಿಯಿಂದ ದೂರಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ಕಿಚ್ಚ ಸುದೀಪ್ ನಿರೂಪಣೆಯ, ವೂಟ್ ನಲ್ಲಿ ಪ್ರಸಾರವಾಗುವ ಮೊದಲ ಓಟಿಟಿ ಬಿಗ್ ಬಾಸ್ ನಲ್ಲಿ ಸ್ಫರ್ದಿಯಾಗಿ ಭಾಗವಹಿಸಿದ್ದರು.