ಕನ್ನಡ ಕಿರುತೆರೆಯಲ್ಲಿ ಚುಕ್ಕಿ ಎಂದೇ ಪ್ರಸಿದ್ಧರಾಗಿರುವ ಚಂದನಾ ಅನಂತ ಕೃಷ್ಣ ಕನ್ನಡ ಕಿರುತೆರೆ ನಟಿ, ರಂಗಭೂಮಿ ಕಲಾವಿದೆ ಮತ್ತು ಭರತನಾಟ್ಯ ಕಲಾವಿದೆ. ತುಮಕೂರಿನವರಾದ ಇವರು ಯಾವಾಗಲೂ ಎನಾದರೂ ಹಾಡುತ್ತಿರುತ್ತಾರೆ. ಗತಿಸಿದ ಅಪ್ಪನ ನೆನಪಲ್ಲಿ ಹಾಡೋದು ತುಂಬಾ ಇಷ್ಟ. ಅಕ್ಕ ಚಿನ್ಮಯಿ. ತುಂಬಾ ಎಮೋಷನಲ್ ಇರುವ ಇವರು ಕೆಲವೊಮ್ಮೆ ಅನವಶ್ಯಕವಾಗಿ ಕಣ್ಣೀರು ಹಾಕುತ್ತಾರಂತೆ.
ಬಿಗ್ ಬಾಸ್ ಸೀಸನ್ 7 ನ ಎಲ್ಲಾ ಸ್ಪರ್ಧಿಗಳು
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ರಾಜಾ ರಾಣಿ ಧಾರಾವಾಹಿಯಲ್ಲಿ ಚುಕ್ಕಿ ಪಾತ್ರದಿಂದ ಪ್ರಸಿದ್ಧಿ ಪಡೆದರು. ಮೂಡಬಿದರೆಯ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಭಾಗವಾಗಿರುವ ಇವರು ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇವುಗಳಲ್ಲಿ ಮಹಾಮಾಯಿ ನಾಟಕ ತುಂಬಾ ಪ್ರಸಿದ್ಧಿಯಾಗಿದೆ.