ಕೈಲಾಸ್ ಖೇರ್ ಭಾರತದ ಪ್ರಖ್ಯಾತ ಹಿನ್ನಲೆ ಗಾಯಕ. ಸೂಫಿ ಗೀತೆಗಳ ಗಾಯನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.ಭಾರತದ ಬಹುತೇಕ ಭಾಷೆಗಳ ಹಾಡಿಗೆ ಧ್ವನಿಯಾಗಿದ್ದಾರೆ.
1973 ರಲ್ಲಿ ಮೀರತ್‌ನಲ್ಲಿ ಕಾಶ್ಮೀರಿ ಪಂಡಿತ ಕುಟುಂಬದಲ್ಲಿ ಜನಿಸಿದ ಕೈಲಾಸ್‌ರ ಬಹುತೇಕ ಬಾಲ್ಯ ದೆಹಲಿಯಿಲ್ಲಿಯೇ ಕಳೆಯಿತು.ತಂದೆ ಯಾವಾಗಲೂ ಹಾಡುತ್ತಿದ್ದ ಜಾನಪದ ಗೀತೆಗಳ ಪ್ರಭಾವದಿಂದ ಹನ್ನೆರೆಡು ವಯಸ್ಸಿಗೆ ಸಂಗೀತ ಕಲಿಯಲು ಆರಂಭಿಸಿದರು. ಪಾಕಿಸ್ಥಾನದ ಪ್ರಸಿದ್ಧ ಸೂಫಿ ಸಂತ `ನುಸ್ರತ್ ಫತೇ ಅಲಿ ಖಾನ್ ಇವರಿಗೆ ಸ್ಫೂರ್ತಿ.
ತಮ್ಮ ಉಚ್ಚ ಸ್ಥಾಯಿ ಧ್ವನಿಯಿಂದ ಪ್ರಸಿದ್ಧಿಯಾಗಿರುವ ಇವರು ಬಾಲಿವುಡ್‌ನಲ್ಲಿ ಅನೇಕ ಹಾಡುಗಳನ್ನು ಹಾಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಗಾಯನ ಕಾರ್ಯಕ್ರಮಗಳನ್ನು ನೀಡಿರುವ ಇವರು `ಇಂಡಿಯನ್ ಐಡಾಲ್' ಮುಂತಾದ ರಿಯಾಲಟಿ ಶೋಗಳ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ. ಹಿನ್ನಲೆ ಗಾಯನದ ಜೊತೆಗೆ,ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ.