X
ಗರುಡ ರಾಮ್

ಗರುಡ ರಾಮ್

Actor
ಜೀವನ ಚರಿತ್ರೆ :  ರಾಮಚಂದ್ರ ರಾಜು ಕನ್ನಡ, ತೆಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಖಳನಟ. ಇವರು 1980 ಜುಲೈ 7ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು 2018ರಲ್ಲಿ ತೆರೆಕಂಡ ಕೆಜಿಎಫ್ ಸಿನಿಮಾದಲ್ಲಿ ಕೆಜಿಎಫ್ ಚಿನ್ನದ ಮಾಫಿಯಾದ ದೊರೆ ಸೂರ್ಯವರ್ಧನ್ ಹಿರಿಯ ಪುತ್ರ ಗರುಡ ಪಾತ್ರದಲ್ಲಿ ನಟಿಸುವ ಮೂಲಕ 'ಗರುಡ ರಾಮ್' ಎಂಬ ಹೆಸರು ಪಡೆದರು.  ಆರಂಭಿಕ ಜೀವನ ಗರುಡ ರಾಮ್ ನಟರಾಗಬೇಕೆಂಬ ಕನಸ್ಸು ಕಂಡವರಲ್ಲ. ಬದಲಿಗೆ ರಾಕಿಂಗ್ ಸ್ಟಾರ್ ಯಶ್ ಅವರ ಬಾಡಿಗಾರ್ಡ್ ಹಾಗೂ ಕಾರು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಯಸ್ ಅವರನ್ನು ಕಾರಿನಲ್ಲಿ ಎಲ್ಲಡೆ ಕರೆದೊಯ್ಯುತ್ತಿದ್ದ ರಾಮಚಂದ್ರ ರಾಜು ಅವರಿಗೆ ಈ ಸಂದರ್ಭ ನಟನಾಗಬೇಕೆಂಬ ಕನಸು ಚಿಗುರೊಡೆದಿತ್ತು. ಆ ಕನಸು ನನಸಾಗಿದ್ದು ಪ್ರಶಾಂತ್ ನೀಲ್ ಅವರ ಕೆಜಿಎಫ್ ಸಿನಿಮಾದ ಸ್ಕ್ರಿಪ್ಟ್ ಚರ್ಚೆಯಲ್ಲಿ. ಈ ವೇಳೆ ಕೆಜಿಎಫ್‌ನಲ್ಲಿ ಯಶ್‌ಗೆ ಎದುರಾಳಿಯಾಗಿ ವಿಭಿನ್ನ ಲುಕ್‌ನ ವಿಲನ್ ಅಗತ್ಯವಿತ್ತು. ಈ ಸಂದರ್ಭ ಪ್ರಶಾಂತ್ ನೀಲ್ ದಿಢೀರ್ ಅಂತ ರಾಮಚಂದ್ರ ರಾಜು ಅವರನ್ನೇ ವಿಲನ್ ಆಗಿ ಆಯ್ಕೆ ಮಾಡಿಕೊಂಡರು. ಅದಕ್ಕಾಗಿ ಒಂದು ವರ್ಷಗಳ ಕಾಲ ತರಬೇಇ ನೀಡಿ, ಜಿಮ್‌ಗೆ ಕಳುಹಿಸಿದ್ದರು. ಇದಕ್ಕೂ ಮುನ್ನ 12 ವರ್ಷಗಳ ಕಾಳ ಇವರು ಯಶ್ ಬಳಿ ಕೆಲಸ ಮಾಡಿದ್ದರು. ಕೆಜಿಎಫ್  ರಾಮಚಂದ್ರ ರಾಜು ಕೆಜಿಎಫ್‌ ಸಿನಿಮಾದಲ್ಲಿ ಕೆಜಿಎಫ್ ಚಿನ್ನದ ಮಾಫಿಯಾದ ದೊರೆ ಸೂರ್ಯವರ್ಧನ್ ಹಿರಿಯ ಪುತ್ರ ಗರುಡ ಪಾತ್ರದ ಖಡಕ್‌ ಲುಕ್‌ನಿಂದಾಗಿ ಎಲ್ಲರ ಗಮನ ಸೆಳೆದರು. ಹೆಚ್ಚು ಡೈಲಾಗ್‌ ಇಲ್ಲದೇ ಹೋದರೂ, ತಮ್ಮ ವಾಕಿಂಗ್‌ ಸ್ಟೈಲ್‌, ಭಯಂಕರವಾದ ಕಣ್ಣುಗಳ ಮೂಲಕ ಸಿನಿರಸಿಕರ ಮನಗೆದ್ದರು. ಈ ಸಿನಿಮಾ ಬಳಿಕ 'ಗರುಡ ರಾಮ್, ಅಂತಲೇ ಜನಪ್ರಿಯರಾದರು.  ಸದ್ಯ ಪರಭಾಷಾ ಸಿನಿಮಾಗಳಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ಗರುಡ ರಾಮ್, ತಮಿಳು ನಟರಾದ ಕಾರ್ತಿ, ಜಯಂ ರವಿ, ಮಲಯಾಳಂ ನಟ ಮೋಹನ್‌ಲಾಲ್, ಪ್ರಭಾಸ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.  
ಮುಂದೆ ಓದಿ

ಗರುಡ ರಾಮ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ರವಿ ಬಸ್ರೂರ್ 18 Apr 2025
ಹರಿ ಸಂತೋಷ್ 06 Jun 2025
ಇಶಾಂ ಖಾನ್ 10 Apr 2025
as Actor
ಡಾ. ಸೂರಿ 31 Oct 2024

ಗರುಡ ರಾಮ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಗರುಡ ರಾಮ್

ಹೆಸರು ಗರುಡ ರಾಮ್
ಹುಟ್ಟಿದ ದಿನ 07 Jul 1980
ವಯಸ್ಸು 46
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಗರುಡ ರಾಮ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+