Celebs»Sonu Nigam»Biography

  ಸೋನು ನಿಗಮ್ ಜೀವನಚರಿತ್ರೆ

  ಭಾರತೀಯ ಖ್ಯಾತ ಹಿನ್ನಲೆ ಗಾಯಕ ಸೋನು ನಿಗಮ್ ಇವರು ಜನಿಸಿದ್ದು 30 ಜುಲೈ 1973 ಹರಿಯಾಣದ ಫರಿದಾಬಾದ್ ನಲ್ಲಿ. ಇವರ ತಂದೆ ಆಗಂ ಕುಮಾರ್ ನಿಗಮ್ ಕೂಡ ಸಂಗೀತಗಾರ ಆಗಿದ್ದರು. ಮದುವೆ ವಿವಿಧ ಕಾರ್ಯಕ್ರಮಗಳಲ್ಲಿ ಆಗಂ ಕುಮಾರ್ ಹಾಡುಗಳನ್ನು ಹಾಡುತ್ತಿದ್ದರು.  

  ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದ  ಇವರಿಗೆ 18ನೇ ವಯಸ್ಸಿನಲ್ಲಿ ಇವರಿಗೆ ಬಾಲಿವುಡ್ ಚಿತ್ರವೊಂದಕ್ಕೆ ಹಾಡುವ ಅವಕಾಶ ಸಿಕ್ಕಿತು. ನಂತರ ಇವರು ತಮ್ಮ ಪುತ್ರ ಸೋನು ನಿಗಮ್ ಅವರಿಗೆ ಬಾಲ್ಯದಲ್ಲಿಯೇ ಸಂಗೀತದ ಬಗ್ಗೆ ಹೇಳಿಕೊಡುತ್ತಿದ್ದರು.
  ಬಾಲ್ಯದಿಂದಲೇ ತಂದೆ ಜೊತೆ ಸೇರಿಕೊಂಡು ಸಂಗೀತದಲ್ಲಿ ಆಸಕ್ತಿ ತೋರಿಸುತ್ತಿದ್ದ ಸೋನು ನಿಗಮ್ ಇಂದು ಭಾರತೀಯ ಪ್ರಸಿದ್ಧ ಗಾಯಕರು ಎಂದು ಪ್ರಸಿದ್ಧಿ ಪಡೆದುಕೊಂಡಿದ್ದಾರೆ.

  ಇವರು ಪಾಪ್, ಕ್ಲಾಸಿಕಲ್, ಇನ್ನು ಅನೇಕ ರೀತಿಯ ಸಂಗೀತ ರಚನೆ ಮಾಡಿ ಹಾಡುವುದರಲ್ಲಿ ನಿಸ್ಸಿಮರು. 1996ರಲ್ಲಿ ಬಿಡುಗಡೆಗೊಂಡ ವಿಷ್ಣುವರ್ಧನ್ ಅವರ ಚಿತ್ರ "ಜೀವನಧಿ" ಚಿತ್ರದಲ್ಲಿ ಹಿನ್ನಲೆ ಗಾಯಕರಾಗಿ ಹಾಡುವುದರ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು.ಇವರೆಗೂ ಇವರು 70 ಕನ್ನಡ ಚಿತ್ರಗಳಿಗೆ ಸಂಗೀತ, ಹಿನ್ನಲೆ ಗಾಯಕರಾಗಿ ಹಾಡಿ ರಂಜಿಸಿ ಎಲ್ಲರ ಮನ ಗೆದ್ದಿದ್ದಾರೆ.

  ಕನ್ನಡ, ತಮಿಳ್, ತೆಲುಗು, ಪಂಜಾಬಿ, ಬಂಗಾಳಿ, ಹೀಗೆ ಹಲವಾರು ಭಾಷೆಗಳಲ್ಲಿ ಹಾಡಿ ಹಿನ್ನಲೆ ಗಾಯಕರಾಗಿ ಖ್ಯಾತಿ ಗಳಿಸಿರುವ ಇವರಿಗೆ ಕನ್ನಡ ಜನತೆ ಕರ್ನಾಟಕದ "ಗೋಲ್ಡನ್" ಸ್ಟಾರ್ ಸಂಗೀತಗಾರ ಎಂಬ ಬಿರುದನ್ನೂ ಸಹ ನೀಡಿದ್ದಾರೆ. ಇವರು 2002 ರಲ್ಲಿ  ಬೆಂಗಾಲಿಯ ಬೆಡಗಿ ಮಧುರಿಮ ಎನ್ನುವರನ್ನು  ತಮ್ಮ ಬಾಳಸಂಗಾತಿಯಾಗಿ ಸ್ವೀಕರಿಸಿದ್ದಾರೆ.

  ಕನ್ನಡ ಚಿತ್ರರಂಗದಲ್ಲಿ ಉತ್ತಮ್ಮ ಗಾಯಕನಾಗಿ ಪರಿಚಿತಗೊಂಡ ಸೋನು ನಿಗಮ್ ಕನ್ನಡದಲ್ಲಿ ಒಂದು ಅಲ್ಬಮ್ ನ್ನು ಬಿಡುಗಡೆ ಮಾಡಿದ್ದಾರೆ. ಈ ಆಲ್ಬಮ್ ನ ಮೂಲಕ ಕನ್ನಡ ಜನತೆಗೆ ಮತ್ತಷ್ಟು ಹತ್ತಿರವಾದರು.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X