ಕನ್ನಡಿಗರಲ್ಲದೇ ಇದ್ದರೂ, ಕನ್ನಡವನ್ನು ಚೆನ್ನಾಗಿ ಕಲಿತುಕೊಂಡು ನಟನೆಯ ಮೂಲಕ ಇಲ್ಲಿಯೇ ನೆಲೆ ಕಟ್ಟಿಕೊಂಡಿದ್ದಾರೆ. ಪುಟ್ಟಗೌರಿ ಮದುವೆ ಮುಂತಾದ ಧಾರಾವಾಹಿಗಳಲ್ಲಿ ವಿಲನ್ ಪಾತ್ರಗಳ ಮೂಲಕ ಖ್ಯಾತಿ ಪಡಿದಿದ್ದಾರೆ. ಬಡ್ಡೀಸ್ ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಹಿಂದೆ ಬಿಗ್ ಬಾಸ್ ಅಡಿಷನ್ ನಲ್ಲಿ ಪಾಲ್ಗೊಂಡು, ಅಡಿಷನ್ ನೀಡದೇ ವಾಪಸ್ ಬಂದಿದ್ದರು. ಪ್ರಸ್ತುತ ಬಿಗ್ ಬಾಸ್ ಕರೆ ಬಂದ ನಂತರ ಕಿಚ್ಚ ಸುದೀಪ್ ನಿರೂಪಣೆಯ, ವೂಟ್ ನಲ್ಲಿ ಪ್ರಸಾರವಾಗುವ ಮೊದಲ ಓಟಿಟಿ ಬಿಗ್ ಬಾಸ್ ನಲ್ಲಿ ಸ್ಫರ್ದಿಯಾಗಿ ಭಾಗವಹಿಸಿದರು.