»   » ನಟಿ 'ಕಿಮ್ ಕರ್ದಾಶಿಯನ್' ದರೋಡೆ ಪ್ರಕರಣದಲ್ಲಿ 16 ಮಂದಿ ಬಂಧನ

ನಟಿ 'ಕಿಮ್ ಕರ್ದಾಶಿಯನ್' ದರೋಡೆ ಪ್ರಕರಣದಲ್ಲಿ 16 ಮಂದಿ ಬಂಧನ

Posted By:
Subscribe to Filmibeat Kannada

ಅಮೆರಿಕ ಪ್ರಸಿದ್ದ ರಿಯಾಲಿಟಿ ಶೋಗಳ ಮೂಲಕ ಅಸಂಖ್ಯಾತ ಅಭಿಮಾನಿಗಳ ಮನಸ್ಸು ದೋಚಿರುವ ಮಾಡೆಲ್ ಮತ್ತು ರೂಪದರ್ಶಿ 'ಕಿಮ್ ಕರ್ದಾಶಿಯನ್' ರವರಿಗೆ ಗನ್ ತೋರಿಸಿ ದರೋಡೆ ಮಾಡಿದ್ದ ಪ್ರಕರಣದಲ್ಲಿ 16 ಮಂದಿಯನ್ನು ಬಂಧಿಸಲಾಗಿದೆ.[ಸಾಯೋವರೆಗೂ ನಗ್ನ ಸೆಲ್ಫಿ ಅಪ್ ಲೋಡ್ ಮಾಡುವೆ ಎಂದ ಕಿಮ್]

ಕಳೆದ ಅಕ್ಟೋಬರ್ ನಲ್ಲಿ ಲಂಡನ್‌ ನ ಪ್ಯಾರೀಸ್ ನಗರದಲ್ಲಿ ಕಿಮ್ ಅವರ ನಿವಾಸಕ್ಕೆ ನುಗ್ಗಿದ ದುಷ್ಕರ್ಮಿಗಳು ಕೋಟ್ಯಾಂತರ ರೂಪಾಯಿ ಮೌಲ್ಯದ ಆಭರಣಗಳನ್ನು ದೋಚಿದ್ದರು. ಈ ಅಪಹರಣಕ್ಕೆ ಸಂಬಂಧಪಟ್ಟ 16 ಕಳ್ಳರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಅಕ್ಟೋಬರ್‌ ನಲ್ಲಿ ದರೋಡೆ

ಕಿಮ್ ಕರ್ದಾಶಿಯನ್ 2016 ರ ಅಕ್ಟೋಬರ್ 3 ರಂದು ದರೋಡೆಗೆ ಒಳಗಾಗಿದ್ದರು. ಕಿಮ್ ನಿವಾಸಕ್ಕೆ ನುಗಿದ್ದ ದುಷ್ಕರ್ಮಿಗಳು, ಅವರಿಗೆ ಗನ್‌ ತೋರಿಸಿ ಹತ್ತು ದಶಲಕ್ಷ ಡಾಲರ್ ಮೌಲ್ಯದ ಆಭರಣಗಳನ್ನು ದೋಚಿದ್ದರು.[ಹಾಟ್ ಬೆಡಗಿ ಕಿಮ್ ಗೆ ಗನ್ ತೋರಿಸಿ ಬೆದರಿಸಿದ ಖದೀಮರು]

ಜೀವ ಬೆದರಿಕೆ ಹಾಕಿದ್ದರು

ಫ್ಯಾಶನ್ ವೀಕ್‌ ನಲ್ಲಿ ಭಾಗವಹಿಸಲು ಕಿಮ್ ಕರ್ದಾಶಿಯನ್ ಪ್ಯಾರಿಸ್‌ ಗೆ ಆಗಮಿಸಿದ್ದ ವೇಳೆ, ತಮ್ಮ ಐಷಾರಾಮಿ ಆಪಾರ್ಟ್‌ ಮೆಂಟ್‌ ನಲ್ಲಿ ಒಬ್ಬರೇ ತಂಗಿದ್ದರು. ಈ ವೇಳೆ ಪೊಲೀಸರ ವೇಷದಲ್ಲಿ ಹಲವರು ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ್ದರು. ನಂತರ ಅವರನ್ನು ಬಚ್ಚಲು ಮನೆಯಲ್ಲಿ ಕೈ ಕಾಲು ಕಟ್ಟಿ ಕೂಡಿ ಹಾಕಿ ಆಭರಣ ದೋಚಿ ಪರಾರಿಯಾಗಿದ್ದರು. ಈಗ ಈ ದರೋಡೆಗೆ ಸಂಬಂಧಿಸಿದ 16 ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.[ದಿನಕ್ಕೆರಡು ಮೂರು ಸಲ ರತಿಲೀಲೆ ತೇಲುತ್ತಿರುವ ತಾರೆ]

ದರೋಡೆ ಬಗ್ಗೆ ಕಿಮ್ ಹೇಳಿದ್ದೇನು?

ಅಮೆರಿಕ ಪ್ರಸಿದ್ಧ ರಿಯಾಲಿಟಿ ಶೋ 'ಕೀಪಿಂಗ್ ಅಪ್‌ ವಿತ್ ದಿ ಕರ್ದಾಶಿಯನ್' 2ನೇ ಟೀಸರ್ ಬಿಡುಗಡೆ ಆದ ಸಂದರ್ಭದಲ್ಲಿ ಕಿಮ್‌ ಪ್ಯಾರಿಸ್ ದರೋಡೆ ಬಗ್ಗೆ " ತಮ್ಮ ಪ್ರಾಣದ ಬೆಲೆ ಏನೆಂದು ಗೊತ್ತಾಗಿದ್ದೇ ದರೋಡೆ ವೇಳೆ' ಎಂದಿದ್ದಾರೆ. ಅಂದಹಾಗೆ ಕರ್ದಾಶಿಯನ್ ಸಹೋದರಿಯರ ಕುರಿತ ನೈಜ ಕಥೆಯನ್ನು 'ಕೀಪಿಂಗ್ ಅಪ್‌ ವಿತ್ ದಿ ಕರ್ದಶಿಯನ್' 2ನೇ ಸೀರೀಸ್ ಹೊಂದಿದೆ.

ಲಾಸ್ ಏಂಜಲೀಸ್

ಮೂಲದ ಕಿಮ್ ಕರ್ದಾಶಿಯನ್ ಬೆತ್ತಲೆ ಫೋಟೋಶೂಟ್, ಮಾದಕ ಮ್ಯಾಗಜಿನ್ ಕವರ್‌ ಫೋಟೋಗಳು ಮತ್ತು ಅಮೆರಿಕ ಪ್ರಸಿದ್ದ ರಿಯಾಲಿಟಿ ಶೋ ಮೂಲಕ ಅಸಂಖ್ಯಾತ ಅಭಿಮಾನಿಗಳ ಮನಸ್ಸು ದೋಚಿದ್ದಾರೆ. ಹಾಲಿವುಡ್ ಅಂಗಳದಲ್ಲಿ ನಟಿ ಆಗಿ ಮಾತ್ರವಲ್ಲದೇ ಬ್ಯುಸಿನೆಸ್‌ವೂಮೆನ್‌ ಆಗಿ ಪ್ರಖ್ಯಾತವಾಗಿದ್ದಾರೆ.

English summary
Sixteen people have been arrested in connection with the robbery of Kim Kardashian in Paris, AFP have reported, citing police sources.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada