»   » ಹಾಟ್ ಬೆಡಗಿ ಕಿಮ್ ಗೆ ಗನ್ ತೋರಿಸಿ ಬೆದರಿಸಿದ ಖದೀಮರು

ಹಾಟ್ ಬೆಡಗಿ ಕಿಮ್ ಗೆ ಗನ್ ತೋರಿಸಿ ಬೆದರಿಸಿದ ಖದೀಮರು

By: Sony
Subscribe to Filmibeat Kannada

ಸದಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಭಿನ್ನ-ವಿಭಿನ್ನ ಭಾವ-ಭಂಗಿ ಇರುವ ಫೋಟೋಗಳನ್ನು ಶೇರ್ ಮಾಡಿ, ಅಭಿಮಾನಿಗಳಿಗೆ ಶಾಕ್ ಟ್ರೀಟ್ ಮೆಂಟ್ ಕೊಡುತ್ತಿದ್ದ ಹಾಲಿವುಡ್ ನಟಿ ಕಮ್ ಮಾಡೆಲ್ ಕಿಮ್ ಕರ್ದಾಶಿಯನ್, ಸದ್ಯಕ್ಕೆ ಖುದ್ದು ಅವರೇ ಹೆದರಿ ಕಂಗಾಲಾಗುವ ಪರಿಸ್ಥಿತಿ ಬಂದೊದಗಿದೆ.

ಪೊಲೀಸ್ ವೇಷದಲ್ಲಿದ್ದ ಇಬ್ಬರು ಮುಸುಕುಧಾರಿಗಳು, ನಟಿ ಕಿಮ್ ಕರ್ದಾಶಿಯನ್ ಅವರಿಗೆ ಗನ್ ತೋರಿಸಿ ಬೆದರಿಸಿದ, ಪರಿಣಾಮ ಹಾಟ್ ಬೆಡಗಿ ಹೆದರಿ ಕಂಗಾಲಾಗಿದ್ದಾರೆ.[ಸಾಯೋವರೆಗೂ ನಗ್ನ ಸೆಲ್ಫಿ ಅಪ್ ಲೋಡ್ ಮಾಡುವೆ ಎಂದ ಕಿಮ್]

ಪ್ಯಾರಿಸ್ ನಲ್ಲಿ ನಡೆಯಲಿದ್ದ ಸಮಾರಂಭವೊಂದರಲ್ಲಿ ಭಾಗವಹಿಸಲು ಬಂದಿದ್ದ ನಟಿ ಕಮ್ ಮಾಡೆಲ್ ಕಿಮ್ ಕರ್ದಾಶಿಯನ್ ಗೆ ಇಂತಹ ಅಹಿತಕರ ಘಟನೆ ನಡೆದಿದೆ. ಮುಂದೆ ಓದಿ....

ಗನ್ ತೋರಿಸಿ ಬೆದರಿಕೆ

ಪ್ಯಾರಿಸ್ ನ ಹೋಟೆಲ್ ನಲ್ಲಿ ತಂಗಿದ್ದ ಕಿಮ್ ಕರ್ದಾಶಿಯನ್ ಅವರ ರೂಮ್ ಮೇಲೆ ಏಕಾಏಕಿ ಧಾಳಿ ಮಾಡಿದ ಇಬ್ಬರು ಮುಸುಕುಧಾರಿಗಳು, ಪಾಯಿಂಟ್ ಬ್ಲಾಕ್ ನಲ್ಲಿ ಗನ್ ತೋರಿಸಿ ಬೆದರಿಸಿದ್ದಾರೆ.[Father's dayಗೆ ಅಮ್ಮನಾದ ಕಿಮ್ ಕರ್ದಾಶಿಯನ್]

ಒಡವೆ ದೋಚಿದ ಖದೀಮರು

ಏಕಾಏಕಿ ಧಾಳಿಗೆ ತತ್ತರಿಸಿ ಹೋದ ಚೆಲುವೆ ಕಿಮ್ ಕರ್ದಾಶಿಯನ್ ಏನು ಮಾಡಬೇಕೆಂದು ತೋಚದೆ ಕಂಗಾಲಾಗಿದ್ದಾರೆ. ಇನ್ನು ಮುಸುಕುಧಾರಿಗಳು ಇವರ ಬಳಿ ಇದ್ದ ನಗದು ಮತ್ತು ಒಡವೆಗಳನ್ನು ದೋಚಿದ್ದು, ನಟಿ ಕಿಮ್ ಅವರಿಗೆ ಯಾವುದೇ ರೀತಿಯಲ್ಲಿ ಅವರು ಹಾನಿ ಮಾಡಿಲ್ಲ ಎನ್ನಲಾಗುತ್ತಿದೆ.[ದಿನಕ್ಕೆರಡು ಮೂರು ಸಲ ರತಿಲೀಲೆ ತೇಲುತ್ತಿರುವ ತಾರೆ]

ಕಾರ್ಯಕ್ರಮ ಮೊಟಕುಗೊಳಿಸಿದ ಕಿಮ್

ಈ ಘಟನೆಯಿಂದ ಭಯಗೊಂಡ ನಟಿ ಕಮ್ ಮಾಡೆಲ್ ಕಿಮ್ ಕರ್ದಾಶಿಯನ್ ಅವರು ತಮ್ಮ ಪ್ಯಾರಿಸ್ ಕಾರ್ಯಕ್ರಮಕ್ಕೆ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.

ಪತ್ನಿಯ ಸಹಾಯಕ್ಕೆ ಧಾವಿಸಿ ಬಂದ ಪತಿ

ಮಾತ್ರವಲ್ಲದೇ ವಿಷಯ ತಿಳಿದ ಕಿಮ್ ಅವರ ಪತಿ ಕಾನ್ಯೆ ವೆಸ್ಟ್ ಅವರು ಕೂಡ ನ್ಯೂಯಾರ್ಕ್‌ ಹಮ್ಮಿಕೊಂಡಿದ್ದ ಆರ್ಟ್ ಮತ್ತು ಮ್ಯೂಸಿಕ್ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿ, 'ಕೌಟುಂಬಿಕ ಸಮಸ್ಯೆಯಾದ ಪರಿಣಾಮ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಬೇಕಾಗಿದೆ' ಎಂದು ಹೇಳಿ ಪತ್ನಿ ಬಳಿ ಧಾವಿಸಿ ಬಂದಿದ್ದಾರೆ.

English summary
Hollywood Actress-Model Kim Kardashian West was unharmed after being robbed at gunpoint inside her Paris hotel room on Sunday night, her representative and a police official said.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada