For Quick Alerts
  ALLOW NOTIFICATIONS  
  For Daily Alerts

  ಸಾಯೋವರೆಗೂ ನಗ್ನ ಸೆಲ್ಫಿ ಅಪ್ ಲೋಡ್ ಮಾಡುವೆ ಎಂದ ಕಿಮ್

  By Suneetha
  |

  ಅಮೆರಿಕನ್ ಚೆಲುವೆ ನಟಿ ಕಮ್ ಮಾಡೆಲ್ ಕಿಮ್ ಕರ್ದಾಶಿಯನ್ ಅವರು ಸಾಯುವವರೆಗೂ ತಮ್ಮ ನಗ್ನ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತೇನೆ ಎಂದು ಅಭಿಮಾನಿಗಳಿಗೆ ಮಾತು ಕೊಟ್ಟಿದ್ದಾರೆ. ಇದರಿಂದ ಪಡ್ಡೆ ಹೈಕಳ ಮೈ ಇನ್ನಷ್ಟು ಬೆಚ್ಚಗಾಗುವಂತೆ ಮಾಡಿದ್ದಾರೆ.

  ಸಿಪ್ರಿಯಾಲ್ ವಾಲ್ ಸ್ಟ್ರೀಟ್ ನಲ್ಲಿ ನಡೆದ 2016ರ ವೆಬ್ಬಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನ್ಯೂಡೆ ಸೆಲ್ಫಿ ಬೆಡಗಿ ಕಿಮ್ ಕರ್ದಾಶಿಯನ್ ಅವರು 'ಬ್ರೇಕ್ ದ ಇಂಟರ್ ನೆಟ್' ಎಂಬ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು.

  ಸದಾ ಇಂಟರ್ ನೆಟ್ ನಲ್ಲಿ ನೇತಾಡುವ ಸೆಲೆಬ್ರಿಟಿಗಳಿಗೆ ಈ ವರ್ಷದಿಂದ ಇಂತಹ ಅಪೂರ್ವ ಆವಾರ್ಡ್ ನೀಡಲಾಗುತ್ತಿದ್ದು, ಮೊದಲ ವರ್ಷದಲ್ಲೇ ಈ ಪ್ರಶಸ್ತಿ ಕಿಮ್ ಕರ್ದಾಶಿಯನ್ ಅವರಿಗೆ ಒಲಿದಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಿಮ್ "ನೇಕ್ ಡ್ ಸೆಲ್ಫಿಸ್ ಅಂಟಿಲ್ಲ್ ಐ ಡೈ' ಅಂತ ತಮ್ಮ ಅಭಿಮಾನಿಗಳಿಗೆ ಭರವಸೆಯನ್ನು ಕೊಟ್ಟಿದ್ದಾರೆ.

  ತಮ್ಮ ಅರೆನಗ್ನ ಫೋಟೋಗಳು ಹಾಗು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವ ಮೂಲಕ ಇಂಟರ್ ನೆಟ್ ಗಳನ್ನು ಯಶಸ್ವಿಯಾಗಿ ಬಳಸುತ್ತಿರುವುದಕ್ಕೆ ಕಿಮ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

  ಈ ಹಿಂದೆ ಕಳೆದ ಮಾರ್ಚ್ ತಿಂಗಳಿನಲ್ಲಿ ಕಿಮ್ ಅವರು ತಮ್ಮ ಮಾಡೆಲ್ ಮತ್ತು ನಟಿ ಇಮಿಲಿ ಅವರ ಜೊತೆ ನಗ್ನ ಚಿತ್ರವೊಂದನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ಇದಕ್ಕೂ ಮುನ್ನ ನಗ್ನ ಸೆಲ್ಫಿ ಒಂದನ್ನು ಟ್ವಿಟ್ಟರ್ ನಲ್ಲಿ ಹರಿಯಬಿಟ್ಟು ಭಾರಿ ಸುದ್ದಿಯಾಗಿದ್ದರು.

  English summary
  Hollywood Actress-Model Kim Kardashian has promised fans she will be sharing nude selfies until the day she dies. The social media queen picked up the first ever Break The Internet prize at the annual Webby Awards this week

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X