X
100
Action | Comedy | 19 Nov 2021 |
Kannada

100 ಕಥೆ

ರಮೇಶ್ ಅರವಿಂದ್ ನಿರ್ದೇಶನದಲ್ಲಿ ಮೂಡಿಬಂದಿರುವ `100' ಚಿತ್ರದಲ್ಲಿ ರಮೇಶ್ ಪೋಲಿಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ತೆಲಗು ನಟಿ ಪೂರ್ಣಾ ರಮೇಶ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುಷ್ಪಕ ವಿಮಾನ ಚಿತ್ರದ ನಂತರ ಮತ್ತೊಮ್ಮೆ ರಚಿತಾ ರಾಮ್, ರಮೇಶ್ ಜೊತೆ ಅಭಿನಯಿಸಿದ್ದಾರೆ. ಈ ಚಿತ್ರ  ಸಾಮಾಜಿಕ ಜಾಲತಾಣಗಳ ಗೀಳು ಮತ್ತು ಅದರಿಂದರಾಗುವ ದುಷ್ಪರಿಣಾಮಗಳ ಕಥಾವಸ್ತು ಹೊಂದಿದೆ.

ಕಥೆ: ಪ್ರೀತಿಯ ಬಲೆಗೆ ಬಿದ್ದ ಹುಡುಗಿಯೊಬ್ಬಳು ಶಾಲೆಯ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪುತ್ತಾಳೆ. ಇಲ್ಲಿಂದ ಚಿತ್ರದ ಆರಂಭವಾಗುತ್ತದೆ. ರಮೇಶ್ ಅರವಿಂದ್ ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ. ಇವರದ್ದೊಂದು ಸುಂದರ ಕುಟುಂಬ, ತಂಗಿ, ತಾಯಿ, ಹೆಂಡ್ತಿ, ಮಗಳು. ಈ ಪ್ರಾಮಾಣಿಕ ಪೊಲೀಸ್ ಅಧಿಕಾರಿಗೆ ಕುಟುಂಬವೇ ಪ್ರಧಾನ. ಅದರಲ್ಲೂ ತಂಗಿ ರಚಿತಾ ರಾಮ್ ಅಂದರೆ ಪಂಚಪ್ರಾಣ. ಫೇಸ್‌ಬುಕ್‌ಗೆ ಅಡಿಕ್ಟ್ ಆಗಿರುವ ತಂಗಿ ರಚಿತಾ, ಮನೆಯ ಇಂಟಿಯರ್ ಡಿಸೈನ್‌ ಮಾಡುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಲಹೆ ಕೇಳುತ್ತಾಳೆ. ಅಲ್ಲಿಂದ ಫೇಸ್‌ಬುಕ್ ಫ್ರೆಂಡ್ ಆಗುವ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಯುತ್ತೆ. ಆತನೇ ಈಕೆಯ ಬಾಳಲ್ಲಿ ವಿಲನ್ ಆದಾಗ, ರಮೇಶ್ ಅರವಿಂದ್ ತನ್ನ ತಂಗಿಯನ್ನು ಬಚಾವ್ ಮಾಡಲು ಏನೆಲ್ಲಾ ಹರಸಾಹಸ ಪಡುತ್ತಾರೆ ಎಂಬುದು ಚಿತ್ರದ ಕಥೆ.

ಜೂನ್ 19, 2019 ರಂದು ಚಿತ್ರದ ಚಿತ್ರೀಕರಣ ಪ್ರಾರಂಭವಾಯಿತು. ಚಿತ್ರಕ್ಕೆ ಶ್ರೀಮತಿ ಉಮ ಮತ್ತು ಎಂ ಸುರೇಶ್ ರೆಡ್ಡಿ ಬಂಡವಾಳ ಹೂಡಿದ್ದಾರೆ. ಚಿತ್ರವನ್ನು ಸೂರಜ್ ಪ್ರೊಡಕ್ಸನ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ, ರವಿ ಬಸ್ರೂರ್ ಸಂಗೀತವಿರುವ ಈ ಚಿತ್ರಕ್ಕೆ ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+