X
ಎ 1998
Thriller | 12 Feb 1998 |
Kannada

ಎ 1998 ಕಥೆ

ಎ ಸಿನಿಮಾವನ್ನು ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ಹೀರೊ ಆಗಿ ನಟಿಸಿದ್ದರು. ಚಿತ್ರದಲ್ಲಿ ಚಾಂದಿನಿ ನಾಯಕಿಯಾಗಿ ನಟಿಸಿದ್ದರು. ಉಳಿದಂತೆ ಬಿರಾದರ್, ಮೈಕಲ್ ಮಧು, ಗುರುಕಿರಣ್, ಕೋಟೆ ಪ್ರಭಾಕರ್, ಅರ್ಚನಾ ಶಾಸ್ತ್ರೀ, ಸುಚಿತ್ರಾ ಮುಂತಾದವರು ತಾರಾಗಣದಲ್ಲಿದ್ದರು.. ಉಪೇಂದ್ರ ತಮ್ಮ ಚೊಚ್ಚಲ ಚಿತ್ರಕ್ಕೆ 'ಎ' ಎನ್ನುವ ಟೈಟಲ್ ಜೊತೆಗೆ 'ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ' ಅಂತ ಟ್ಯಾಗ್‌ಲೈನ್ ಕೂಡ ಕೊಟ್ಟಿದ್ದರು. ಬಿ. ಜಗನ್ನಾಥ ಮತ್ತು ಬಿ. ಜಿ ಮಂಜುನಾಥ್ 'ಎ' ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಗುರುಕಿರಣ್ ಅವರು ಇದೇ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಬಂದರು. 

ಕಥೆ: ನಿರ್ದೇಶಕರಾಗಿದ್ದ ಉಪೇಂದ್ರ 'ಹೀರೊ' ಆಗಬೇಕು ಎಂದುಕೊಂಡಾಗ ಚಿತ್ರದಲ್ಲೂ ಒಬ್ಬ ಸಿನಿಮಾ ನಿರ್ದೇಶಕನ ಕಥೆ ಹೇಳಿದ್ದರು. ಸಿನಿಮಾದೊಳಗೊಂದು ಸಿನಿಮಾ ಕಥೆ ಹೇಳಿದ್ದರು. ಜೀವನದಲ್ಲಿ ಏಳುಬೀಳು ಕಂಡ ಸೂರ್ಯ ಪ್ರೀತಿ ಎನ್ನುವುದು ಸುಳ್ಳು ಎಂದರೆ, ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಹುಡುಗಿ ಪ್ರೀತಿಯ ಬಗ್ಗೆ ಸೂರ್ಯನಿಗೆ ಪಾಠ ಮಾಡಲು ಬರ್ತಾಳೆ. ಇವರಿಬ್ಬರ ಸಂಘರ್ಷದ ಕಥೆಯೇ 'ಎ'.

ಬಾಕ್ಸಾಫೀಸ್ ಕಲೆಕ್ಷನ್

25 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ಎ' ಚಿತ್ರ ಬಾಕ್ಸಾಫೀಸ್‌ನಲ್ಲಿ ಬರೋಬ್ಬರಿ 20 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಕರ್ನಾಟಕದಲ್ಲಿ 25 ವಾರಗಳ ಕಾಲ 'ಎ' ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತ್ತು. ನಿರ್ದೇಶಕರಾಗಿ ಮಾತ್ರವಲ್ಲದೇ, ಹೀರೊ ಆಗಿಯೂ ಉಪೇಂದ್ರ ಸೂಪರ್ ಸಕ್ಸಸ್ ಕಂಡಿದ್ದರು. ಉಪೇಂದ್ರ ಅವರ 'ಎ' ಸಿನಿಮಾ ತೆಲುಗು ಭಾಷೆಗೂ ಆಗಿ 100 ದಿನ ಪ್ರದರ್ಶನ ಕಂಡು ಸಿನಿಮಾ ಎಲ್ಲರ ಹುಬ್ಬೇರಿಸಿತ್ತು.  

ರೀ-ರಿಲೀಸ್: ಉಪೇಂದ್ರ ಅವರ ಎ ಸಿನಿಮಾ 2024ರ ಮೇ 17ರಂದು ಮರು ಬಿಡುಗಡೆ ಆಗಲಿದೆ. 









Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+