ಆದರ್ಶ ರೈತ ಸಿನಿಮಾವನ್ನು ರಾಜೇಂದ್ರ ಕೊಣದೆಲ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಾಜೇಂದ್ರ ರೆಡ್ಡಿ ವಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರೇಖಾ ದಾಸ್, ಸಿದ್ಧಾರ್ಥ್, ಸೂಫಿಯಾ, ಖುಷಿ ಮೆಹ್ತಾ, ಸಂಗೀತ, ಸುಜಾತ ಮುಂತಾದವರು ತಾರಾಗಣದಲ್ಲಿದ್ದಾರೆ. ಮುರಳಿಧರ್ ನಾವಡ ಸಂಗೀತ ನಿರ್ದೇಶನ, ಸಿದ್ದರಾಜ್ ಹಾಗೂ ಕೊಟ್ರೇಶ್ ಅಯ್ಯನಹಳ್ಳಿ ಛಾಯಾಗ್ರಹಣ ಸಿನಿಮಾಗಿದೆ.
ಆದರ್ಶ ರೈತ ಸಿನಿಮಾದಲ್ಲಿ ರೈತ ಹೆಚ್ಚಿನ ಬಡ್ಡಿಗೆ ಸಾಲ ಮಾಡಬಾರದು. ಸರ್ಕಾರ ಬ್ಯಾಂಕ್ನಿಂದ ನೀಡುವ ಸಾಲವನ್ನೇ ಪಡೆಯಬೇಕು. ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳಬೇಕು ಎಂಬ ಸಂದೇಶಗಳನ್ನು ಸಾರಲಾಗಿದೆ.