ಡಿ.ರಾಜೇಂದ್ರ ಬಾಬು ನಿರ್ದೇಶನದಲ್ಲಿ ಮೂಡಿಬಂದ ಅಪ್ಪಾಜಿ ಚಿತ್ರದಲ್ಲಿ ವಿಷ್ಣುವರ್ಧನ್ (ದ್ವಿಪಾತ್ರದಲ್ಲಿ), ಆಮನಿ ಮತ್ತು ಶರಣ್ಯ ಪೊನ್ನವನ್ ಮುಖ್ಯ ಪಾತ್ರದಲ್ಲಿ ನಟಿಸಿದರು. ಆರ್. ಎನ್.ಜಯಗೋಪಾಲ್ ಸಾಹಿತ್ಯದಲ್ಲಿ ಮೂಡಿಬಂದ ಗೀತೆಗಳಿಗೆ ಎಂ.ಎಂ.ಕೀರವಾಣಿ ಸಂಗೀತ ನೀಡಿದರು.
ಚಿತ್ರದ ಕತೆಯನ್ನು ತೆಲುಗಿನ ನಿರ್ದೇಶಕ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ ಬರೆದಿದ್ದರು.ಚಿತ್ರದಲ್ಲಿ ವಿಷ್ಣು ಅಪ್ಪಾಜಿ ಮತ್ತು ಶಕ್ತಿ ಎಂಬ ದ್ವಿಪಾತ್ರದಲ್ಲಿ ಮಿಂಚಿದ್ದರು.