ಅಯ್ಯನ ಮನೆ ಕನ್ನಡ ವೆಬ್ ಸೀರಿಸ್ ಅನ್ನು ರಮೇಶ್ ಇಂದಿರಾ ನಿರ್ದೇಶನ ಮಾಡಿದ್ದಾರೆ. ಈ ಸೀರೀಸ್‌ನಲ್ಲಿ ಖುಷಿ ರವಿ, ಮಾನಸಿ ಸುಧೀರ್, ಅಕ್ಷಯ್ ನಾಯಕ್, ಹಿತಾ ಚಂದ್ರಶೇಖರ್, ಅನಿರುದ್ಧ್ ಆಚಾರ್ಯ, ಅರ್ಚನಾ ಕೊಟ್ಟಿಗೆ, ಶೋಭರಾಜ್ ಪಾವೂರ್ ಮುಂತಾದವರು ನಟಿಸಿದ್ದಾರೆ. ಎಲ್.ವಿ ಮುತ್ತು ಗಣೇಶ್ ಸಂಗೀತ, ರಾಹುಲ್ ರಾಯ್ ಛಾಯಾಗ್ರಹಣ ಹಾಗೂ ರಾಜೇಂದ್ರ ಅರಸ್ ಸಂಕಲನ ಈ ವೆಬ್ ಸೀರಿಸ್‌ಗೆ ಇದೆ. ಅಯ್ಯನ ಮನೆಯನ್ನು ಶ್ರುತಿ ನಾಯ್ಡು ನಿರ್ಮಾಣ ಮಾಡಿದ್ದಾರೆ. ಅಯ್ಯನ ಮನೆ ವೆಬ್ ಸೀರಿಸ್‌ನಲ್ಲಿ ಏಳು ಎಪಿಸೋಡ್‌ಗಳು ಇವೆ.
ಒಟಿಟಿ ಸ್ಟ್ರೀಮಿಂಗ್
ರೋಚಕತೆ ಜೊತೆಗೆ ಭಯ, ನಂಬಿಕೆ ಹಾಗೂ ಫ್ಯಾಮಿಲಿಯ ಕಥೆಯನ್ನು ಒಳಗೊಂಡಿರುವ 'ಅಯ್ಯನ ಮನೆ' ವೆಬ್ ಸೀರಿಸ್ ಏಪ್ರಿಲ್ 25ರಂದು ಜೀ5ನಲ್ಲಿ ಬಿಡುಗಡೆ ಆಗಲಿದೆ.