ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮೂಡಿಬಂದ ಬಂಧನ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಸುಹಾಸಿನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಈ ಚಿತ್ರ 32 ನೇ ರಾಷ್ಟ್ರ ಪ್ರಶಸ್ತಿ ಪಡೆಯಿತು. ಹಾಗೇ ನಾಯಕ ವಿಷ್ಣುವರ್ಧನ್ ಮತ್ತು ಸಂಗೀತ ನಿರ್ದೇಶಕ ಎಂ. ರಂಗಾರಾವ್ ರವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರಕಿತು.
ತನ್ನ ಹತ್ತಿರ ಕೆಲಸ ಮಾಡುವ ವೈದ್ಯಕೀಯ ವಿಧ್ಯಾರ್ಥಿಯೋರ್ವಳನ್ನು ಪ್ರೀತಿಸುವ ವೈದ್ಯ ಅವಳಿಗೆ ತನ್ನ ಪ್ರೇಮ ನಿವೇದನೆ ಮಾಡುವ ಹೊತ್ತಿಗೆ ಅವಳ ಮದುವೆ ನಿಶ್ಚಯವಾಗುತ್ತದೆ .ಅವಳ ಕೊರಗಿನಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುವ ಹರೀಶ್ ಕೊನೆಗೆ ಅವಳ ಮಗುವನ್ನು ಈ ಭೂಮಿಗೆ ಬರಮಾಡಿ ಕೊನೆಯುಸಿರೆಳೆಯುತ್ತಾನೆ. ಕನ್ನಡದ ಹಾಗೂ ವಿಷ್ಣುವರ್ಧನ್ ಸಿನಿಜೀವನದ ಅತ್ತ್ಯುತ್ತಮ ಚಿತ್ರಗಳಲ್ಲಿ ಇದೊಂದು.