ಕ್ಯಾಪ್ಟನ್ ಮಿಲ್ಲರ್ ಸಿನಿಮಾವನ್ನು ಅರುಣ್ ಮಾಥೇಶ್ವರನ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಧನುಷ್, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಪ್ರಿಯಾಂಕಾ ಅರುಲ್ ಮೋಹನ್, ಕಿಶನ್, ಜಾನ್ ಕೊಕ್ಕೆನ್ ಸೇರಿದಂತೆ ಹಲವರು ಪ್ರಮುಖ ಫಾತ್ರದಲ್ಲಿ ನಟಿಸಿದ್ದಾರೆ.
ಇದೊಂದು ಸ್ವಾತಂತ್ರ್ಯ ಹೋರಾಟದ ಕಥೆಯಾಗಿದ್ದು, ಧನುಷ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಜಿ.ವಿ ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದುಮ ಸತ್ಯ ಜ್ಯೋತಿ ಫಿಲ್ಮ್ಸ್ ನಿಮಾರ್ಣ ಮಾಡಿದೆ.
ಬಿಡುಗಡೆ: ಕ್ಯಾಪ್ಟನ್ ಮಿಲ್ಲರ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 12ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಯಿತು.
ಕಥೆ: 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಕಥೆ 1930ರಿಂದ ಆರಂಭ ಆಗುತ್ತೆ. ಗ್ರಾಮವೊಂದರ ಅನಾಲೀಸನ್ ಎಂಬ ಕೆಳ ಜಾತಿಯ ಹುಡುಗ ಬ್ರಿಟಿಷರ ಸೇನೆ ಸೇರುತ್ತಾನೆ. ಅಲ್ಲಿ ಆತ ಮಿಲ್ಲರ್ ಆಗಿ ಬದಲಾಗುತ್ತಾನೆ. ಆ ಬಳಿಕ ಮಿಲ್ಲರ್ ಕುಖ್ಯಾತ ವ್ಯಕ್ತಿ ಕ್ಯಾಪ್ಟನ್ ಮಿಲ್ಲರ್ ಆಗಿ ಬದಲಾಗುತ್ತಾನೆ. ಈತ ಜೀವನದಲ್ಲಿ ಎಲ್ಲಾ ಭರವಸೆಯನ್ನೂ ಕಳೆದುಕೊಂಡ ಈ ವ್ಯಕ್ತಿಯನ್ನು ಹಿಡಿಯುವುದಕ್ಕೆ ಬಿಟ್ರಿಷರು ಹುಡುಕಾಟ ನಡೆಸುತ್ತಾರೆ. ಇತ್ತ ಆ ಗ್ರಾಮದವರು ಕೂಡ ಅನಾಲೀಸನ್ ಕೃತಕ್ಕೆ ಬೇಸತ್ತು ಹೋಗಿರುತ್ತಾರೆ. ಹಾಗಿದ್ರೆ, ಬ್ರಿಟಿಷರು 'ಕ್ಯಾಪ್ಟನ್ ಮಿಲ್ಲರ್' ಅನ್ನು ಹಿಡಿಯುತ್ತಾರಾ? ಇದೇ ಸಿನಿಮಾದ ಕಥೆ.