twitter

    ದೇವಕಿ ಕಥೆ

    ಹಿನ್ನಲೆ- ಪ್ರಿಯಾಂಕ ಉಪೇಂದ್ರ ಮುಖ್ಯ ಪಾತ್ರದಲ್ಲಿ ನಟಿಸಿರುವ ಲೋಹಿತ್ ನಿರ್ದೇಶಿಸಿರುವ `ದೇವಕಿ' ಚಿತ್ರ ಹೆಣ್ಣು ಮಕ್ಕಳ ಅಕ್ರಮ ಸಾಗಾಣಿಕೆ ಮೇಲೆ ಬೆಳಕು ಚೆಲ್ಲುತ್ತದೆ. ಪ್ರಿಯಾಂಕಾ ಮತ್ತು ಲೋಹಿತ್ ಕಾಂಬಿನೇಶನ್‌ಲ್ಲಿ ಈ ಹಿಂದೆ `ಮಮ್ಮಿ' ಚಿತ್ರ ತೆರೆಗೆ ಬಂದಿತ್ತು.ಈ ಚಿತ್ರದಲ್ಲಿ ಪ್ರಿಯಂಕಾ- ಉಪೇಂದ್ರ ದಂಪತಿಗಳ ಪುತ್ರಿ ಐಶ್ವರ್ಯ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಕಿಶೋರ್ ಪೋಲಿಸ್ ಅಧಿಕಾರಿಯಾಗಿ ಮಿಂಚಿದ್ದಾರೆ.

    ಚಿತ್ರ ವಿಶೇಷತೆಗಳು
    1. ದೇವಕಿ ಚಿತ್ರದ ಕೆಲವು ಭಾಗಗಳನ್ನು ಕಲ್ಕತ್ತದ ನಿಜವಾದ ಸ್ಲಮ್ ಮತ್ತು ರೆಡ್ ಲೈಟ್ ಏರಿಯಾಗಳಲ್ಲಿ ಶೂಟ್ ಮಾಡಲಾಗಿದೆ. ಚಿತ್ರದ ಒಂದು ಧೃಶ್ಯದಲ್ಲಿ ಪ್ರಿಯಾಂಕಾ ಉಪೇಂದ್ರ ನಿಜವಾದ ಕಸದ ಗುಂಡಿ ಮೇಲೆ ನೆಡೆದರು.

    2. ಚಿತ್ರದ ಹಲವು ದೃಶ್ಯಗಳನ್ನು ಕೊಲ್ಕತ್ತಾದ 250 ವರ್ಷಗಳ ಹಳೆಯ ಸೌಥ್ ಪಾರ್ಕ ಸ್ಮಶಾನದಲ್ಲಿ ಚಿತ್ರೀಕರಣ ಮಾಡಲಾಯಿತು. ಈ ಚಿತ್ರ ಕನ್ನಡಿಗರಿಗೆ ಒಂದು ಹೊಸ ಕೊಲ್ಕತ್ತಾವನ್ನು ತೋರಿಸುತ್ತದೆ.

    3. ಕಬಾಲಿ, ವಿಶ್ವಾಸಂ, ಸಾಹೋ ಮುಂತಾದ ಚಿತ್ರಗಳಿಗೆ ಕೆಲಸ ಮಾಡಿದ ಸೌಂಡ ಇಂಜಿನಿಯರ್ ಟಿ ಉದಯಕುಮಾರ್ ದೇವಕಿ ಚಿತ್ರದ ಅಟ್ಮೋಸ್ ಮಿಕ್ಸಿಂಗ್ ಮಾಡಿದ್ದಾರೆ.

    4. ಮೊದಲ ಬಾರಿಗೆ ಕೊಲ್ಕತ್ತಾದ ಹೌರಾ ಬ್ರಿಡ್ಜ್ ಮೇಲೆ ಸತತವಾಗಿ 24   ಗಂಟೆಗಳ ಕಾಲ ಚಿತ್ರೀಕರಣ ಮಾಡಿದ ಕೀರ್ತಿ ದೇವಕಿ ಚಿತ್ರಕ್ಕೆ ಸಲ್ಲುತ್ತದೆ.

    5. ಚಿತ್ರದಲ್ಲಿ ಪ್ರಿಯಾಂಕ ತಾಯಿ , ಪ್ರಿಯಾಂಕ ಉಪೇಂದ್ರ, ಮತ್ತು ಉಪ್ಪಿ ಪುತ್ರಿ ಐಶ್ಚರ್ಯ ನಟಿಸುತ್ತಿದ್ದಾರೆ. ಹಾಗೇ ಈ ಚಿತ್ರಕ್ಕೆ ಉಪೇಂದ್ರ ಹಿನ್ನಲೆ ನಿರೂಪಣೆ ಇರುತ್ತದೆ.

    6. ಚಿತ್ರದ ಕ್ಯಾಮರಾಮೆನ್ ಹೆಚ್.ಸಿ.ವೇಣು ಈ ಚಿತ್ರವನ್ನು ಒಂದು ಕೃತಕ ಲೈಟ್ ಬಳಸದೇ ಪ್ಯಾನಾಸಾನಿಕ್ ವೇರಿಕಮ್ ಕ್ಯಾಮರಾ ಬಳಸಿ ಸಂಪೂರ್ಣ ನೈಸರ್ಗಿಕ ಬೆಳಕಿನಲ್ಲಿ ಚಿತ್ರೀಕರಿಸಿದ್ದಾರೆ.
     
    ಕಥೆ- ತೆರೆಮರೆಯಲ್ಲಿ ನೆಡೆಯುತ್ತಿರುವ ಅಕ್ರಮ ಮಾನವ ಸಾಗಣಿಕೆ , ಚಿಕ್ಕ ಹೆಣ್ಣುಮಕ್ಕಳು ವೇಶ್ಯಾವೃತ್ತಿಯ ಬಲಗೆ ಸಿಲುಕುವ ಪರಿಯನ್ನು ಚಿತ್ರ ವಿವರಿಸಲಿದೆ. ಭಾರತವೊಂದರಲ್ಲಿ ಸುಮಾರು 50000 ಯುವತಿಯರು ಪ್ರತಿವರ್ಷ ಅಕ್ರಮ ಸಾಗಾಣಿಕೆ ಜಾಲಕ್ಕೆ ಸಿಲುಕುತ್ತಾರೆ. ಅದರಲ್ಲಿ 90 ಪ್ರತಿಶತ ಜನ ಅಸುನೀಗುತ್ತಾರೆ.ಚಿತ್ರಕ್ಕೆ ಈ ಮೊದಲು ಹೌರಾ ಬ್ರಿಡ್ಜ್ ಎಂದು ಹೆಸರು ಇಡಲಾಗಿತ್ತು. ಚಿತ್ರದ ಬಹುತೇಕ ಶೂಟಿಂಗ್ ಕೊಲ್ಕತ್ತಾದಲ್ಲಿ ಜರುಗಿದೆ.
    **Note:Hey! Would you like to share the story of the movie ದೇವಕಿ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X