X
ಗರಡಿ
Action | 10 Nov 2023 | U/A | 146 Mins
Kannada

ಗರಡಿ ಕಥೆ

ಗರಡಿ ಸಿನಿಮಾವನ್ನು ಸ್ಯಾಂಡಲ್‌ವುಡ್ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಯಶಸ್ ಸೂರ್ಯ ನಾಯಕನಾಗಿ ನಟಿಸಿದ್ದು, ತೆರೆಯ ಮೇಲೆ ಕುಸ್ತಿಪಟುವಾಗಿ ಕಾಣಿಸಿಕೊಳ್ಳಲಿದ್ದಾರೆ. ಸೋನಾಲ್ ಮೊಂಟೆರೋ ಈ ಚಿತ್ರದ ನಾಯಕಿ. ಬಹಳ ವರ್ಷಗಳ ಬಳಿಕ ಬಿ.ಸಿ.ಪಾಟೀಲ್ ಈ ಚಿತ್ರದಲ್ಲಿ ಕುಸ್ತಿಪಟುವಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಧರ್ಮಣ್ಣ ಕಡೂರ್, ಪೃಥ್ವಿ ಶಾಮನೂರು, ಸುಜಯ್ ಬೇಲೂರು, ಚೆಲುವರಾಜ್, ಬಾಲಾ ರಾಜ್ವಾಡಿ, ತೇಜಸ್ವಿನಿ ಪ್ರಕಾಶ್, ನಯಾನಾ ಶರತ್ ಮೊದಲಾದವರು ಫೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್.ಟಿ ಸೋಮಶೇಖರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಈ ಸಿನಿಮಾವನ್ನು ಕೌರವ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ಬಿ.ಸಿ.ಪಾಟೀಲ್ ಪತ್ನಿ ವನಜಾ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನಿರ್ದೇಶಿಸಿದ್ದು, ನಿರಂಜನ್ ಬಾಬು ಛಾಯಾಗ್ರಹಣ ಮಾಡಿದ್ದಾರೆ. 


ಕಥೆ: ಇದೂವರೆಗೂ ಕುಸ್ತಿಯಲ್ಲಿ ಸೋಲದೇ ಇರುವಂತಹ ಒಂದು ಮನೆತನವಿರುತ್ತೆ. ಅದೇ ರವಿಶಂಕರ್ ಮನೆತನ. ಈ ಊರಲ್ಲಿ ಬಿಸಿ ಪಾಟೀಲ್ ಪೈಲ್ವಾನ್‌ಗಳ ಗುರು. ಹೀಗೊಮ್ಮೆ ರವಿಶಂಕರ್ ಅಣ್ಣನಿಗೆ ಪೈಲ್ವಾನ್ ಒಬ್ಬ ಹೊಡೆದು ಸಾಯಿಸಿಬಿಡುತ್ತಾನೆ. ಆ ಸಿಟ್ಟಿಗೆ ರವಿಶಂಕರ್ ಆ ಪೈಲ್ವಾನ್ ಅನ್ನು ಸಾಯಿಸುತ್ತಾನೆ. ಅವರಿಗೆ ಇಬ್ಬರು ಮಕ್ಕಳು ಅವರೇ ದರ್ಶನ್ ಮತ್ತು ಯಶಸ್ ಸೂರ್ಯ.. ಅಲ್ಲಿಂದ ಮುಂದೆನಾಗುತ್ತೆ ಎಂಬುದೇ ಸಿನಿಮಾ ಕಥೆ.

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+