ಇನಾಮ್ದಾರ್ ಸಿನಿಮಾವನ್ನು ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಂಜನ್ ಛತ್ರಪತಿ ನಾಯಕನಾಗಿ, ಚಿರಶ್ರೀ ಅಂಚನ್ ಮತ್ತು ಈಸ್ಟರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪ್ರಮೋದ್ ಶೆಟ್ಟಿ, ಎಂ.ಕೆ.ಮಠ, ಥ್ರಿಲ್ಲರ್ ಮಂಜು, ಶರತ್ ಲೋಹಿತಾಶ್ವ, ರಘು ಪಾಂಡೇಶ್ವರ್, ಅವಿನಾಶ್, ಯಶ್ ಆಚಾರ್ಯ, ಸಂಜು ಬಸಯ್ಯ ಮುಂತಾದವರು ಅಭಿನಯಿಸಿದ್ದಾರೆ. ಮುರಳಿ ಛಾಯಾಗ್ರಹಣ, ರಾಕಿ ಸೋನು ಹಾಗೂ ನಕುಲ್ ಅಭಯಂಕರ್ ಸಂಗೀತವಿದೆ. ನಿರಂಜನ್ ಶೆಟ್ಟಿ ತಲ್ಲೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಕಥೆ: ಉತ್ತರ ಕರ್ನಾಟಕ ಮೂಲದ ಶಿವಾಜಿ ಮಹಾರಾಜರನ್ನು ಆರಾಧಿಸುವ ಇನಾಮ್ದಾರ್ ಕುಟುಂಬ, ದಕ್ಷಿಣದ ಕರಾವಳಿ ಭಾಗದ ಕಾಡಿನಲ್ಲಿ ವಾಸಿಸುವ ಹಾಗೂ ಶಿವನ ಆರಾಧಕರಾದ ಕಾಡು ಜನರ ನಡುವೆ ನಡೆಯುವ ವರ್ಷಸಂಘರ್ಷದ ಕಥೆಯೇ ಈ ಇನಾಮ್ದಾರ್. ಈ ಸಿನಿಮಾಗೆ ಕಪ್ಪು ಸುಂದರಿಯ ಸುತ್ತ ಎಂ ಅಡಿಬರಹವಿದೆ.
ಬಿಡುಗಡೆ: ಇನಾಮ್ದಾರ್ ಸಿನಿಮಾ ಅಕ್ಟೋಬರ್ 27ರಂದು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.