ಡಾಲಿ ಧನಂಜಯ್ ನಿರ್ಮಾಣದ ಐದನೇ ಸಿನಿಮಾ ಜೆಸಿ ದಿ ಯೂನಿವರ್ಸಿಟಿ. ಜೆಸಿ ಎಂದರೆ ಜುಡಿಸಿಯಲ್ ಕಸ್ಟಡಿ. ಜೈಲಿಂದ ಹೊರ ಬಂದ ಯುವಕನ ಕಥೆ ಇದಾಗಿದೆ. ಈ ಸಿನಿಮಾವನ್ನು ಚೇತನ್ ಜೈರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ನಿರ್ದೇಶನದ ಚೊಚ್ಚಲ ಚಿತ್ರ. ೨೦೧೮ರಲ್ಲಿ ಬಿಡುಗಡೆಯಾದ ನಡುವೆ ಅಂತರವಿರಲಿ ಸಿನಿಮಾ ಖ್ಯಾತಿಯ ಪ್ರಖ್ಯಾತ್ ನಾಯಕನಾಗಿ ಹಾಗೂ ಭಾವನಾ ರೆಡ್ಡಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದೊಂದು ಪಕ್ಕಾ ಮಾಸ್ ಚಿತ್ರವಾಗಿದ್ದು, ಮಾಸ್ತಿ ಅವರ ಖಡಕ್ ಡೈಲಾಗ್ ಇರಲಿದೆ. ಕಾರ್ತಿಕ್ ಛಾಯಾಗ್ರಾಹಣ, ರೋಹಿತ್ ಸೋವರ್ ಅವರ ಸಂಗೀತ ಸಿನಿಮಾಗಿದೆ.
ಮೂಹೂರ್ತ: ಜೆಸಿ ಸಿನಿಮಾದ ಮೂಹೂರ್ತ ಸಮಾರಂಭ 2024ರ ಫೆಬ್ರವರಿ 14ರಂದು ಬೆಂಗಳೂರಿನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು.