ಜೋಗ್ 101 ಸಿನಿಮಾವನ್ನು ವಿಜಯ್ ಕನ್ನಡಿಗ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ವಿಜಯ್ ರಾಘವೇಂದ್ರ ನಾಯಕನಾಗಿ ಹಾಗೂ ತೇಜಸ್ವಿನಿ ಶೇಖರ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ತಿಳಿಕ್ ಶೇಖರ್, ಗೋವಿಂದೇ ಗೌಡ, ರಾಜೇಶ್ ನಟರಂಗ, ನಿರಂಜನ್ ದೇಶಪಾಂಡೆ, ಕಡ್ಡಿಪುಡಿ ಚಂದ್ರು ಮುಂತಾದವರು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಅವಿನಾಶ್ ಆರ್ ಬಸುತ್ಕರ್ ಸಂಗೀತ, ಸುನೀತ್ ಹಲಗೇರಿ ಛಾಯಾಗ್ರಹಣ ಹಾಗೂ ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ. ಈ ಚಿತ್ರವನ್ನು ಟಿ.ಆರ್ ರಾಘವೇಂದ್ರ ಅವರು ಸೆವೆನ್ ಸ್ಟಾರ್ ಪಿಕ್ಚರ್ಸ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಿಸಿದ್ದಾರೆ.
ಬಿಡುಗಡೆ: ಜೋಗ್ 101 ಸಿನಿಮಾ ಮಾರ್ಚ್ 7ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.