ಈ ಹಿಂದೆ ಗೋಣಿಚೀಲ, ಜೋಡಿ ಕುದುರೆ ಎಂಬ ಕಿರುಚಿತ್ರ ಮಾಡಿ ಪ್ರಶಂಸೆ ಗಳಿಸಿರುವ ನವನ್ ಶ್ರೀನಿವಾಸ್ 'ಕಂಬ್ಳಿ ಹುಳ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರಂಗಭೂಮಿ ಕಲಾವಿದರಾದ ಅಂಜನ್ ನಾಗೇಂದ್ರ ನಾಯಕನಾಗಿ ನಟಿಸುತ್ತಿದ್ದರೆ, ಅಶ್ವಿತಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ರೋಹಿತ್ ಕುಮಾರ್, ದೀಪಕ್ ರೈ, ಸಂಧ್ಯಾ ಅರಕೆರೆ, ಸಂಪತ್ ಶೆಟ್ಟಿ ತಾರಾಗಣದಲ್ಲಿದ್ದಾರೆ. ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಮೂಡಿಬಂದಿದೆ.
ನೈಜ ಘಟನೆಯಾಧಾರಿತ ಕಂಬ್ಳಿ ಹುಳ ಸಿನಿಮಾಕ್ಕೆ ಸಿವಿಲ್ ಇಂಜಿಯರ್ ಆಗಿರುವ ವಿಜಯ್, ನವೀನ್, ಪುನೀತ್ ಮತ್ತು ಗುರು ಬಂಡವಾಳ ಹೂಡಿದ್ದು, ಬಹುತೇಕ ಮಲೆನಾಡು, ಶೃಂಗೇರಿ, ತೀರ್ಥಹಳ್ಳಿ, ಕೊಪ್ಪ,ಹಾಸನ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಸತೀಶ್ ರಾಜೇಂದ್ರನ್ ತಮ್ಮ ಕ್ಯಾಮೆರಾ ಕಣ್ಣಲ್ಲಿ ಅದ್ಭುತ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.