ಕೆರೆಬೇಟೆ ಎಂದರೆ ಮಲೆನಾಡು ಭಾಗದಲ್ಲಿ ಮೀನು ಬೇಟೆಯಾಡುವ ಪದ್ಧತಿ. ಇದೇ ಶೀರ್ಷಿಕೆಯನ್ನಿಟ್ಟುಕೊಂಡು ನಿರ್ದೇಶಕ
ರಾಜ್‌ಗುರು ಮೊದಲ ಬಾರಿಗೆ ಕೆರೆಬೇಟೆಯನ್ನು ತೆರೆಮೇಲೆ ತರುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಎ.ಆರ್ ಬಾಬು, ಪವನ್ ಒಡೆಯರ್ ಮುಂತಾದ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಇವರಿಗೆ ಇದು ಚೊಚ್ಚಲ ಸಿನಿಮಾ.
ಈ ಸಿನಿಮಾದಲ್ಲಿ
ಗೌರಿಶಂಕರ್ ನಾಯಕನಾಗಿ ಹಾಗೂ
ಬಿಂದು ಶಿವರಾಮ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ ಶ್ರೀಕಾಂತ್, ಸಂಪತ್ ಮೆತ್ರೇಯ, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ವರ್ಧನ್, ಶೇಖರ್ ಕರಡಿ ಮನೆ ಮುಂತಾದವರು ತಾರಾಗಣದಲ್ಲಿದ್ದಾರೆ. ಚಿತ್ರದ ನಾಯಕ ಗೌರಿಶಂಕರ್ ಹಾಗೂ ಜೈ ಶಂಕರ್ ಪಟೇಲ್ 'ಜನಮನ ಸಿನಿಮಾ' ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೆರೆಬೇಟೆಗೆ
ಗಗನ್ ಬಡೇರಿಯಾ ಸಂಗೀತ ನಿರ್ದೇಶಿಸಿದ್ದಾರೆ.
ಮಲೆನಾಡು ಭಾಗದಲ್ಲಿ ವರ್ಷಕ್ಕೊಮ್ಮೆ ಕೆರೆಬೇಟೆಯಾಡುತ್ತಾರೆ. ದೊಡ್ಡ-ದೊಡ್ಡ ಕೆರೆಗಳಲ್ಲಿ ಈ ಮೀನು ಬೇಟೆ ನಡೆಯುತ್ತೆ. ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಸುತ್ತಮುತ್ತ ಇದರ ಆಚರಣೆಯನ್ನು ದೊಡ್ಡಮಟ್ಟದಲ್ಲಿ ಮಾಡಲಾಗುತ್ತೆ. ಈ ಅಂಶವನ್ನೇ ಇಟ್ಟುಕೊಂಡು ಈ ಚಿತ್ರದ ಕಥೆ ಮಾಡಲಾಗಿದೆ. ಅಪ್ಪಟ ಹಳ್ಳಿ ಸೊಗಡಿನ ಚಿತ್ರ ಇದಾಗಿದೆ.
ಬಿಡುಗಡೆ: ಕೆರೆಬೇಟೆ ಸಿನಿಮಾ 2024ರ ಮಾರ್ಚ್ 15ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.