X
ಕಿರಾತಕ 2
Drama | 17 May 2024 |
Kannada

ಕಿರಾತಕ 2 ಕಥೆ

ಕಿರಾತಕ 2 ಸಿನಿಮಾವನ್ನು ಈ ಹಿಂದೆ ಕಿರಾತಕ ಸಿನಿಮಾ ಮಾಡಿದ್ದ ಪ್ರದೀಪ್ ರಾಜ್ ನಿರ್ದೇಶನ ಮಾಡಿದ್ದಾರೆ. ಆದರೆ, ಕೆಲ ದಿನಗಳ ಹಿಂದೆ ಅವರು ಕೊನೆಯುಸಿರೆಳೆದಿದ್ದಾರೆ. ಯುವ ನಟ ತೇಜಸ್ 'ಕಿರಾತಕ'- 2 ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. 'ಕಿರಾತಕ' ಸಿನಿಮಾ ಹಿಟ್ ಆದಾಗಲೇ ನಿರ್ದೇಶಕ ಪ್ರದೀಪ್ ರಾಜ್ ಸೀಕ್ವೆಲ್ ಮಾಡಲು ಚಿಂತನೆ ನಡೆಸಿದ್ದರು. ಯಶ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡಬೇಕು ಎಂದುಕೊಂಡಿದ್ದರು. 'ಇಂದ್ರಜಾಲ್ ಅಡ್ವಟೈರ್ಸ್ ಸೊಲ್ಯೂಷನ್ಸ್' ಬ್ಯಾನರ್‌ ಅಡಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದರು. ಆದರೆ ಕಾರಣಾಂತರಗಳಿಂದ ಯಶ್ ಜೊತೆ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ ಎಂದು ಹೊಸಬರನ್ನು ಬಳಸಿಕೊಂಡು ಸಿನಿಮಾ ಮಾಡಿದ್ದರು. ಪ್ರದೀಪ್ ರಾಜ್ ನಿರ್ದೇಶನದ 'ಕಿರಾತಕ- 2' ಚಿತ್ರವನ್ನು ಇದೀಗ ಸ್ವತಃ ಜಯಣ್ಣ ವಿತರಣೆ ಮಾಡುತ್ತಿದ್ದಾರೆ. 

ಟೈಟಲ್ ವಿವಾದ: ದಿಲ್‌ವಾಲಾ ಅನಿಲ್ ಕುಮಾರ್ ನಿರ್ದೇಶನದಲ್ಲಿ ಯಶ್ 'ಕಿರಾತಕ'- 2 ಸಿನಿಮಾ ಆರಂಭಿಸಿದ್ದರು. ಆಗ ನಿರ್ದೇಶಕ ಪ್ರದೀಪ್ ರಾಜ್ ಟೈಟಲ್ ಕೊಡಲ್ಲ ಎಂದಿದ್ದರು. ಕೊನೆಗೆ 'ಮೈ ನೇಮ್ ಈಸ್ ಕಿರಾತಕ' ಹೆಸರಿನಲ್ಲಿ ಯಶ್ ಸಿನಿಮಾ ಶುರುವಾಗಿತ್ತು. 20 ದಿನಗಳ ಕಾಲ ಶೂಟಿಂಗ್ ನಡೆದಿತ್ತು. ಆದರೆ 'KGF- 1' ನಿರೀಕ್ಷೆಗೂ ಮೀರಿ ಸಕ್ಸಸ್ ಕಂಡಿದ್ದರಿಂದ 'ಮೈ ನೇಮ್ ಈಸ್ ಕಿರಾತಕ' ಚಿತ್ರವನ್ನು ಯಶ್ ಕೈ ಬಿಟ್ಟರು. ನಂತರ 'KGF- 2' ಚಿತ್ರದಲ್ಲಿ ನಟಿಸಿದರು. ಇದೀಗ ಸ್ವತಃ ನಿರ್ಮಾಪಕ ಜಯಣ್ಣ ಆ ಸಿನಿಮಾ ಬರಲ್ಲ ಎಂದು ಹೇಳಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+