ಕೆಟಿಎಂ ಸಿನಿಮಾವನ್ನು ಅಥರ್ವ ಸಿನಿಮಾ ಖ್ಯಾತಿಯ ಅರುಣ್ ನಿರ್ದೇಶನ ಮಾಡಿದ್ದಾರೆ. ನವೀರಾದ ಪ್ರೇಮ ಕಥೆಯುಳ್ಳ ಕೆಟಿಎಂ ಸಿನಿಮಾದಲ್ಲಿ ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದು, ನಾಲ್ಕು ಶೇಡ್ನಲ್ಲಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ.
ಕಾಜಲ್ ಕುಂದರ್ ಹಾಗೂ ಸಂಜನಾ ಡೋಸ್ ನಾಯಕಿಯರಾಗಿ ಅಭಿನಯಿಸಿದ್ದು, ಉಳಿದಂತೆ ಉಷಾ ಭಂಡಾರಿ, ಪ್ರಕಾಶ್ ತುಮಿನಾಡ್, ಬಾಬು ಹಿರಣ್ಣಯ್ಯ, ದೇವ್ ದೇವಯ್ಯ, ಅಭಿಷೇಕ್, ತುಕಾಲಿ ಸಂತೋಷ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ನವೀನ್ ಕ್ಯಾಮರಾ ವರ್ಕ್, ಚೇತನ್ ಸಂಗೀತ ನಿರ್ದೇಶನ ಸಿನಿಮಾಕ್ಕಿದೆ. ಮಹಾಸಿಂಹ ಮೂವೀಸ್ ಬ್ಯಾನರ್ ಅಡಿ ವಿನಯ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಬಿಡುಗಡೆ: ಕೆಟಿಎಂ ಸಿನಿಮಾ 2024ರ ಫೆಬ್ರವರಿ 16ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.