ಲಾಫಿಂಗ್ ಬುದ್ಧ ಚಿತ್ರವನ್ನು ಎಂ ಭರತರಾಜ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ನಾಯಕನಾಗಿ ಹಾಗೂ ತೇಜು ಬೆಳವಾಡಿ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಸುಂದರ್ ರಾಜ್, ದಿಗಂತ್ ಮಂಚಾಲೆ ಮುಂತಾದವರು ತಾರಾಗಣದಲ್ಲಿದ್ದಾರೆ. ವಿಷ್ಣು ವಿಜಯ್ ಸಂಗೀತ, ಎಸ್ ಚಂದ್ರಶೇಖರನ್ ಛಾಯಾಗ್ರಹಣ ಹಾಗೂ ಕೆ.ಎಂ ಪ್ರಕಾಶ್ ಸಂಕಲನ ಸಿನಿಮಾಗಿದೆ. ಲಾಫಿಂಗ್ ಬುದ್ಧ ಚಿತ್ರವನ್ನು ರಿಷಭ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.
ಬಿಡುಗಡೆ: ಲಾಫಿಂಗ್ ಬುದ್ಧ ಸಿನಿಮಾ 2024ರ ಆಗಸ್ಟ್ 30ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ..