ಮಿಸ್ಟರ್ ರಾಣಿ ಸಿನಿಮಾವನ್ನು ಮಧು ಚಂದ್ರ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿರುವ ದೀಪಕ್ ಸುಬ್ರಮಣ್ಯ ನಾಯಕನಾಗಿ ನಟಿಸಿದ್ದಾರೆ. ಪಾರ್ವತಿ ನಾಯರ್ ಹೀರೋಯಿನ್. ಉಳಿದಂತೆ ಶ್ರೀವತ್ಸ ಶ್ಯಾಮ್, ಲಕ್ಷ್ಮೀ ಕಾರಂತ್, ಆನಂದ್ ನೀನಾಸಂ ಮುಂತಾದವರು ತಾರಾಗಣದಲ್ಲಿದ್ದಾರೆ. ಜುಡೋ ಸ್ಯಾಂಡಿ ಸಂಗೀತ ಸಿನಿಮಾಗಿದ್ದು, ಬಾಬುಬಲಿ ಸಿನಿಮಾದಲ್ಲಿ ಅಸಿಸ್ಟೆಂಟ್ ಕ್ಯಾಮರಾಮನ್ ಆಗಿದ್ದ ರವೀಂದ್ರನಾಥ ಛಾಯಾಗ್ರಹಣ ಮಾಡಿದ್ದಾರೆ.
ಸಿನಿಮಾದಲ್ಲಿ ದೀಪಕ್ ಸುಬ್ರಮಣ್ಯ ರಾಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀರೋ ಆಗುವ ಆಸೆಯಿಂದ ಚಿತ್ರರಂಗಕ್ಕೆ ಬಂದ ಯುವಕ ಆಕಸ್ಮಿಕವಾಗಿ ಹೀರೋಯಿನ್ ಆಗುವ ಡಿಫರೆಂಟ್ ಕಹಾನಿ ಸಿನಿಮಾದಲ್ಲಿದೆ.
ಬಿಡುಗಡೆ: ಮಿಸ್ಟರ್ ರಾಣಿ ಸಿನಿಮಾ ಫೆಬ್ರವರಿ 7ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.